This is the title of the web page
This is the title of the web page

Live Stream

July 2024
S M T W T F S
 123456
78910111213
14151617181920
21222324252627
28293031  

| Latest Version 9.4.1 |

Entertainment News

ಖ್ಯಾತ ನಟ ಡಾಲಿ ಧನಂಜಯ್​ ಅಭಿನಯದ ‘ಕೋಟಿ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ ‘ಕೆಆರ್​ಜಿ’

ಖ್ಯಾತ ನಟ ಡಾಲಿ ಧನಂಜಯ್​ ಅಭಿನಯದ ‘ಕೋಟಿ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ ‘ಕೆಆರ್​ಜಿ’

ಖ್ಯಾತ ನಟ ಡಾಲಿ ಧನಂಜಯ್​ ಅಭಿನಯದ ‘ಕೋಟಿ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಸಿನಿಮಾದ ರಿಲೀಸ್​ಗೆ ಇನ್ನು ಕೆಲವೇ ದಿನಗಳು ಬಾಕಿ ಇದೆ ಎನ್ನವಾಗ ಕ್ರೇಜ್ ಹೆಚ್ಚಾಗಿದೆ. ಇದರ ಜೊತೆಗೆ ‘ಕೋಟಿ’ ಚಿತ್ರತಂಡದವರು ಪ್ರತಿ ದಿನ ಒಂದಿಲ್ಲೊಂದು ಇಂಟರೆಸ್ಟಿಂಗ್​ ಸುದ್ದಿಗಳನ್ನು ನೀಡುತ್ತಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.

ಈಗ ಇನ್ನೊಂದು ನ್ಯೂಸ್​ ಹೊರಬಿದ್ದಿದ್ದು, ‘ಕೋಟಿ’ ಸಿನಿಮಾದ ವಿತರಣಾ ಹಕ್ಕುಗಳನ್ನು ‘ಕೆಆರ್​ಜಿ ಸ್ಟುಡಿಯೋಸ್​’ ಪಡೆದುಕೊಂಡಿದೆ. ಈ ಸಿನಿಮಾಗೆ ಪರಮ್​ ನಿರ್ದೇಶನ ಮಾಡಿದ್ದಾರೆ. ಜೂನ್​ 14ರಂದು ಈ ಸಿನಿಮಾ ಬಿಡುಗಡೆ ಆಗಲಿದ್ದು, ಸ್ಯಾಂಡಲ್​ವುಡ್​ನಲ್ಲಿ ಸಿನಿಮಾಗಳ ನಿರ್ಮಾಣ ಮತ್ತು ವಿತರಣೆಯಲ್ಲಿ ‘ಕೆಆರ್​ಜಿ’ ಸಂಸ್ಥೆ ಖ್ಯಾತಿ ಗಳಿಸಿದೆ. ‘ಕೆಜಿಎಫ್: ಚಾಪ್ಟರ್​ 1’, ‘ಕೆಜಿಎಫ್: ಚಾಪ್ಟರ್​ 2’, ‘ಕಾಂತಾರ’, ‘ಪೈಲ್ವಾನ್’, ‘ಚಾರ್ಲಿ 777’, ‘ಬಡವ ರಾಸ್ಕಲ್’, ‘12th ಫೇಲ್’, ‘ಹನುಮಾನ್’ ಮುಂತಾದ ಸೂಪರ್ ಹಿಟ್ ಸಿನಿಮಾಗಳನ್ನು ವಿತರಣೆ ಮಾಡಿದ್ದು ಇದೇ ಸಂಸ್ಥೆ. ಈವರೆಗೆ 100ಕ್ಕೂ ಅಧಿಕ ಸಿನಿಮಾಗಳನ್ನು ‘ಕೆಆರ್​ಜಿ’ ಬಿಡುಗಡೆ ಮಾಡಿದೆ.

‘ಕೋಟಿ’ ರಿಲೀಸ್​ ಬಗ್ಗೆ ‘ಕೆಆರ್‌ಜಿ ಸ್ಟುಡಿಯೋಸ್‌’ ಸಂಸ್ಥಾಪಕ ಕಾರ್ತಿಕ್ ಗೌಡ ಮಾತನಾಡಿದ್ದಾರೆ. ‘ನಟ ಧನಂಜಯ ಅವರ ಜೊತೆ ನಮ್ಮ ಸಂಬಂಧವು ಈ ಸಿನಿಮಾದ ಮೂಲಕ ಇನ್ನಷ್ಟು ವಿಸ್ತರಿಸಿದೆ. ನಾನು ಸಿನಿಮಾ ನೋಡಿದ್ದೇನೆ. ಪರಮೇಶ್ವರ್ ಗುಂಡ್ಕಲ್ ಅವರ ಬರವಣಿಗೆ ಮತ್ತು ಚಿತ್ರಕಥೆ ಹೆಣೆದಿರುವ ಸೊಗಸನ್ನು ನೋಡಿ ಥ್ರಿಲ್ ಆಗಿದ್ದೇನೆ. ಈ ಸಿನಿಮಾವನ್ನು ಪ್ರೇಕ್ಷಕರಿಗೆ ಪ್ರಸ್ತುತಪಡಿಸಲು ನಾವು ತುಂಬ ಉತ್ಸುಕರಾಗಿದ್ದೇವೆ. 250ಕ್ಕೂ ಅಧಿಕ ಕೇಂದ್ರಗಳಲ್ಲಿ ಸಿನಿಮಾವನ್ನು ರಿಲೀಸ್​ ಮಾಡುವ ಗುರಿ ಹೊಂದಿದ್ದೇವೆ. ಈ ಅವಕಾಶ ನೀಡಿದ ಜಿಯೋ ಸ್ಟುಡಿಯೋಸ್‌ನ ಜ್ಯೋತಿ ದೇಶಪಾಂಡೆ ಅವರಿಗೆ ಧನ್ಯವಾದಗಳು’ ಎಂದು ಅವರು ಹೇಳಿದ್ದಾರೆ.

ಡಿಫರೆಂಟ್​ ಕಥಾಹಂದರ ಹೊಂದಿರುವ ‘ಕೋಟಿ’ ಚಿತ್ರವನ್ನು ‘ಕೆಆರ್​ಜಿ’ ತಂಡದವರು ವೀಕ್ಷಿಸಿದ್ದಾರೆ. ‘ಎಮೋಷನಲ್​ ಎಳೆ ಇರುವ ಈ ಸಿನಿಮಾ ಐಪಿಎಲ್ ಮತ್ತು ಲೋಕಸಭಾ ಚುನಾವಣೆಯ ಬಳಿಕ ಇಡೀ ಕೌಟುಂಬಿಕ ಪ್ರೇಕ್ಷಕರಿಗೆ ಸೂಕ್ತ ಆಗುವಂತಹ ಮನರಂಜನೆ ನೀಡಲಿದೆ’ ಎಂದು ತಂಡದವರು ಅಭಿಪ್ರಾಯಪಟ್ಟಿದ್ದಾರೆ. 250ಕ್ಕೂ ಅಧಿಕ ಕಡೆಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ.