This is the title of the web page
This is the title of the web page

Live Stream

January 2025
S M T W T F S
 1234
567891011
12131415161718
19202122232425
262728293031  

| Latest Version 9.4.1 |

Education NewsLocal NewsState News

ಕನ್ನಡಿಗರಾಗಿ ಕನ್ನಡ ಉಳಿಸೋಣ:ಕಾಶಪ್ಪನವರ

ಕನ್ನಡಿಗರಾಗಿ ಕನ್ನಡ ಉಳಿಸೋಣ:ಕಾಶಪ್ಪನವರ

ಬಾಗಲಕೋಟೆ

ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾಗಿ ೫೦ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಹುನಗುಂದ ಮತಕ್ಷೇತ್ರದಲ್ಲೂ ವರ್ಷವಿಡೀ ನಾನಾ ಚಟುವಟಿಕೆಗಳ ಮೂಲಕ ಅರ್ಥಪೂರ್ಣವಾಗಿಸಲು ನಿರ್ಧರಿಸಲಾಗಿದೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.

ಹುನಗುಂದ ತಾಲೂಕು ಆಡಳಿತ‌, ತಾಲೂಕು ಪಂಚಾಯಿತಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಸಂಯೋಗದಲ್ಲಿ ಹಮ್ಮಿಕೊಂಡ ಕರ್ನಾಟಕ ರಾಜ್ಯೋತ್ಸವ ೫೦ ರ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕನ್ನಡಕ್ಕಾಗಿ ಹೋರಾಡಿದ ೫೦ ಮಹನೀಯರ ಭಾವಚಿತ್ರಗಳನ್ನು ಮೆರವಣಿಗೆ ಮೂಲಕ ಕನ್ನಡ ಸಂಭ್ರಮಕ್ಕೆ ಮೆರಗು ನೀಡಲಾಗಿದೆ. ನಾಡಹಬ್ಬ ಪ್ರತಿ ಕನ್ನಡಿಗನ ಆದ್ಯ ಕರ್ತವ್ಯವಾಗಿದೆ. ಕುವೆಂಪು ಹೇಳಿದಂತೆ ಎಲ್ಲಾದರೂ ಇರು, ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂಬಂತೆ ನಾವೆಲ್ಲರೂ ಕನ್ನಡಾಭಿಮಾನ ಮೆರೆಯಬೇಕು ಎಂದು ಹೇಳಿದರು.

ಇತ್ತೀಚೆಗೆ ಕನ್ನಡವನ್ನು ಉಳಿಸಿ ಬೆಳೆಸಿ ಎಂದು ಅಂಗಲಾಚುವಂತಾಗಿದೆ. ಕನ್ನಡವನ್ನು ಪ್ರತಿಯೊಬ್ಬರೂ ಪ್ರೀತಿಸಬೇಕು. ಮೊದಲು ಮಾತೃಭಾಷೆ ಪ್ರೀತಿಸಿ ನಂತರ ಬೇರೆ ಭಾಷೆಯನ್ನೂ ಗೌರವಿಸಿ. ನಮ್ಮ ರಾಜ್ಯದ ಪರಿಸ್ಥಿತಿ ಎಲ್ಲ ರಾಜ್ಯಗಳಿಗಿಂತ ಹೆಚ್ಚನ ಆದಾಯ,ಜಿಎಸ್ಟಿ ಕೊಡುವ ರಾಜ್ಯ ಮೊದಲ ಸ್ಥಾನದಲ್ಲಿದೆ. ಕೇಂದ್ರ ಮಲತಾಯಿ ಧೋರಣೆ ತೋರುತ್ತಿದೆ. ನಮ್ಮ ನಾಡಿಗೆ ಸಿಗುವ ಸೌಲಭ್ಯಗಳು ಸಿಗುತ್ತಿಲ್ಲ. ಸಮಾನ ಪ್ರಾತಿನಿಧ್ಯ ಸಿಗುತ್ತಿಲ್ಲ. ಗಡಿಗಳಲ್ಲಿ ಇನ್ನೂ ಸಂಘರ್ಷ ತಪ್ಪಿಲ್ಲ. ಎಲ್ಲ ರಾಜ್ಯಗಳನ್ನು ಸಮಾನವಾಗಿ ಕಾಣುವ ಕೇಂದ್ರ ಸರಕಾರ ಬೇಕಾಗಿದೆ ಎಂದು ತಿಳಿಸಿದರು.

ಕಳೆದ ವರ್ಷವೇ ಈ ರಾಜ್ಯವನ್ನು ಆಡಳಿತ ಮಾಡುವ ಸರಕಾರ ಮಾಎಬೇಕಿತ್ತು. ಆದರೆ ಆ ಸರಕಾರ ಮಾಡಲಿಲ್ಲ. ಅದನ್ನು ನೆರವೇರಿಸಲು ಸಿದ್ಧರಾಮಯ್ಯ ಅವರೇ ಬರಬೇಕಾಯಿತು. ಸಿಎಂ ಶಾಲೆಗಳಿಗೆ ಉಚಿತ ವಿದ್ಯುತ್ ಹಾಗೂ ಶಾಲೆಯಲ್ಲಿ ಶುದ್ಧ ಕುಡಿವ ನೀರು ಒದಗಿಸಲು ನಿರ್ಧರಿಸಿದ್ದಾರೆ. ಮತಕ್ಷೇತ್ರದಲ್ಲಿ ೧೫೦ ಸ್ಮಾರ್ಟ್ ಕ್ಲಾಸ್ ಗಳನ್ನು ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಗಳಲ್ಲಿ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ. ಕನ್ನಡ ಕಾವಲು ಪ್ರಥಮ ಸಮಿತಿ ಅಧ್ಯಕ್ಷರಾಗಿದ್ದ ಸಿದ್ದರಾಮಯ್ಯ ಅವರು ಕನ್ನಡದ ಬಗ್ಗೆ ಅಪಾರ ಅಭಿಮಾನ ಹೊಂದಿದ್ದಾರೆ ಎಂದು ಹೇಳಿದರು.

ದಕ್ಷಿಣಾಪಥೇಶ್ವರ ಇಮ್ಮಡಿಪುಲಿಕೇಶಿ ಯನ್ನು ಮರೆಯುತ್ತಿದ್ದಾರೆ. ನಿಮ್ಮ ರಾಜ್ಯದ ಹೋರಾಟಗಾರರನ್ನು ಪ್ರೀತಿಸುವ ಕೆಲಸವಾಗಲಿ. ಬೇರೆ ರಾಜ್ಯಕ್ಕೆ ವಲಸೆ ಹೋಗುವ ಕೆಲಸವಾಗಬಾರದು. ಇಲ್ಲಿಯೇ ಸಾಕಷ್ಟು ಸೌಲಭ್ಯಗಳಿವೆ. ಅವುಗಳನ್ನು ಉಪಯೋಗಿಸಿಕೊಂಡು ರಾಜ್ಯವನ್ನು ಪ್ರಗತಿಯತ್ತ ಕೊಂಡೊಯ್ಯಬೇಕು ಎಂದು ಕರೆ ನೀಡಿದರು.

ಕಸಾಪ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜು ಸಜ್ಜನ ಪ್ರಾಸ್ತಾವಿಕವಾಗಿ ಮಾತನಾಡಿ, ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವ ಕಾರ್ಯಕ್ರಮ. ಶಾಸಕರ ನೇತೃತ್ವದಲ್ಲಿ ಹಲವರ ಮಾರ್ಗದರ್ಶನದಲ್ಲಿ ಸಭೆಯ ರೂಪುರೇಷೆ ರೂಪಿಸಲಾಗಿದೆ. ತಾಲೂಕಿನಲ್ಲಿ ಅಚ್ಚುಕಟ್ಟಾಗಿ ಕಾರ್ಯಕ್ರಮ ನೆರವೇರಿಸಿದ್ದೇವೆ. ಸಾಹಿತ್ಯ, ಕಲೆ, ಸಂಸ್ಕೃತಿಗೆ ಬೆಲೆ ನೀಡುವ ಆಡಳಿತ ಎಂದರು.

ಉಪನ್ಯಾಸ ನೀಡಿದ ಡಾ.ಸಂಗಮೇಶ ಗಣಿ, ನಾಡು, ನುಡಿ, ನೆಲ, ಜಲದ ಪುನರ್ ಅವಲೋಕನವೇ ಈ ರಾಜ್ಯೋತ್ಸವ ಸಮಾರಂಭ. ಸಂಭ್ರಮದಲ್ಲಿ ಮರೆವು ಇರಬಾರದು. ವೈಭವ ನಮ್ಮನ್ನು ಮೈಮರೆಸಬಾರದು. ಇದರ ನಡುವೆ ನಮ್ಮ ವಿವೇಕ ವಿಸ್ತರಿಸಿಗೊಳ್ಳಬೇಕು. ಭವಿಷ್ಯದ ದಾರಿ ಮಸಕಾಗದಿರಲಿ. ಕರ್ನಾಟಕದ ಏಕೀಕರಣಕ್ಕೆ ಹಲವರು ತ್ಯಾಗ ಮಾಡಿದ್ದಾರೆ. ದೇಶ ಒಂದಾಗಿದ್ದರೂ ರಾಜ್ಯ ಒಂದಾಗಬೇಕಿತ್ತು. ಅದಕ್ಕಾಗಿ ಚಳಿವಳಿ ಆಂಭವಾಯಿತು. ಮೈಸೂರು ರಾಜ್ಯ ವಾಯಿತು. ೧೯೭೩ ರಲ್ಲಿ ದೇವರಾಜ ಅರಸು ಕಾಲದಲ್ಲಿ ಕರ್ನಾಟಕ ಎಂದು ನಾಮಕರಣವಾಯಿತು.

ನಂತರದಲ್ಲಿ ಗಡಿಗಳೆಲ್ಲ ಕಿರಿದಾಗುತ್ತ ಬಂದಿತು. ದೇಶದ ಉತ್ತರ ಭಾರತದ್ದು ಒಂದು ರೀತಿಯ ಹೋರಾಟವಾದರೆ ದಕ್ಷಿಣ ಭಾರತದ್ದು ಒಂದು ರೀತಿಯ ಹೋರಾಟವಿತ್ತು. ನಮ್ಮ ನಾಯಕರಿಗೆ ನಮ್ಮದೇ ಆದ ಕನ್ನಡ ಕಟ್ಟಿಕೊಳ್ಳಬೇಕಾಯಿತು. ಆ ನಿಟ್ಟಿನಲ್ಲಿ ಪ್ರತ್ಯೇಕ ರಾಜ್ಯ ಉದಯವಾಯಿತು. ಕನ್ನಡ ಉಸಿರಿನಷ್ಟೇ ಸಹಜಬಾಗಿದೆ. ಇಡೀ ಜಗತ್ತಿನ ಸಾಹಿತ್ಯಿಕ ಚರಿತ್ರೆಗೆ ಕನ್ನಡದ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.

ಇಳಕಲ್ ಗುರುಮಹಾಂತ ಶ್ರೀ ಸಾನ್ನಿದ್ಯ ವಹಿಸಿದ್ದರು. ತಹಸೀಲ್ದಾರ್ ನಿಂಗಪ್ಪ ಬಿರಾದಾರ, ತಾಪಂ ಇಒ ಎಂ.ಎಚ್.ದೇಶಪಾಂಡೆ, ಡಾ.ಸಂಗಮೇಶ ಗಣಿ, ಅಮರೇಶ ನಾಗೂರ, ಬಿಇಓ ಜಾಸ್ಮೀನ್ ಕಿಲ್ಲೇದಾರ, ಸಿಡಿಪಿಒ ಅನ್ನಪೂರ್ಣ ಕುಬಕಡ್ಡಿ, ಸಿದ್ದಲಿಂಗಪ್ಪ ಬೀಳಗಿ, ಸಿದ್ದು ಶೀಲವಂತರ, ಸಂಗಮೇಶ ಹೊದ್ಲೂರ, ಜಬ್ಬಾರ ಕಲಬುರ್ಗಿ, ವಿಜಯಮಹಾಂತೇಶ ಗದ್ದನಕೇರಿ, ಉಪತಹಸೀಲ್ದಾರ್ ಎಂ.ಆರ್.ಹೆಬ್ಬಳ್ಳಿ, ಸಂಗಪ್ಪ ಹೂಲಗೇರಿ, ಸಿದ್ದಪ್ಪ ಹೊಸೂರ, ಶಿವಾನಂದ ಕಂಠಿ, ಸಿ.ಜಿ.ಗೌಡರ, ಡಿ.ಎಸ್.ಯತ್ನಟ್ಟಿ, ಶೇಖರಪ್ಪ ಬಾದೋಡಗಿ, ಎನ್.ಜೆ.ಹುನಗುಂಡಿ, ಬಸವರಾಜ ಗದ್ದಿ, ಮಹಾಂತೇಶ ಆವಾರಿ, ಸಂಗಣ್ಣ ಗಂಜಿಹಾಳ, ಸಚಿನ ರಾಠೋಡ, ಜೈನಸಾಬ್ ಹಗೇದಾಳ, ಫರವೇಜ್ ಖಾದ್ರಿ, ರಾಜು ಹಗ್ಗದ, ಸಂಗಣ್ಞ ಹಂಡಿ,ಮುತ್ತಣ್ಣ ಕಲಗುಡಿ, ರವಿ ಹುಚನೂರ, ದೇವು ಡಂಬಳ,ಮಹಾಂತಪ್ಪ ಪಲ್ಲೇದ, ಎಲ್.ಎಚ್.ಮುಕ್ಕಣ್ಣವರ, ಸಿಪಿಐ ಸುನೀಲ ಸವದಿ, ಲಿಂಗರಾಜ ಗದ್ದನಕೇರಿ, ಪ್ರಭು ಮಾಲಗಿತ್ತಿಮಠ, ಪುರಸಭೆ ಸದಸ್ಯರು, ಕನ್ನಡಾಭಿಮಾನಿಗಳು ಇತರರು ಇದ್ದರು.

*ಮೊಳಗಿದ ಕನ್ನಡ ಗೀತೆ*
ಹುನಗುಂದದ‌ ಆದರ್ಶ ವಿದ್ಯಾಲಯದ ವಿದ್ಯಾರ್ಥಿಗಳು ಐದು ಕನ್ನಡ ಗೀತೆಗಳಾದ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು, ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು,
ಒಂದೇ ಒಂದೇ ಕರ್ನಾಟಕ ಒಂದೇ ಹಿಂದೆ ಮುಂದೆ ಎಂದೆ ಕರ್ನಾಟಕ ಒಂದೆ,
ಹೊತ್ತಿತೋ ಹೊತ್ತಿತೋ ಕನ್ನಡದ ದೀಪ,
ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಗೀತೆ ಪ್ರಸ್ತುತಪಡಿಸಿದರು.

Nimma Suddi
";