This is the title of the web page
This is the title of the web page

Live Stream

June 2024
S M T W T F S
 1
2345678
9101112131415
16171819202122
23242526272829
30  

| Latest Version 9.4.1 |

Local NewsNational NewsState News

ಸಂವಿಧಾನ ಮೂಲಕ ಸಮಾನತೆ ಬದುಕು : ವಂಶಾಕೃತಮಠ

ಡಾ.ಅಂಬೇಡ್ಕರಿ ಓದು ಕಾರ್ಯಕ್ರಮ ಮತ್ತು ಸಂವಿಧಾನ ದಿನಾಚರಣೆ

ಬಾಗಲಕೋಟೆ

: ಎಲ್ಲರಿಗೂ ಸಮಬಾಳು ಎಲ್ಲರಿಗೂ ಸಮ ಪಾಲು ಎಂದು ಸಾರುವ ಭಾರತದ ಸಂವಿಧಾನ ಭಾರತೀಯರ ವಿಶ್ವರತ್ನವಾಗಿದೆ ಎಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಷ್ಕøತ ಡಾ.ವಿಶ್ವನಾಥ ವಂಶಾಕೃತಮಠ ಹೇಳಿದರು.

ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನವನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಯೋಗದಲ್ಲಿ ಹಮ್ಮಿಕೊಂಡ ಡಾ.ಅಂಬೇಡ್ಕರ ಓದು ಕಾರ್ಯಕ್ರಮವನ್ನು ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ, ಸಂವಿಧಾನ ಪೀಠಿಕೆ ಬೋಧಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಭಾರತದ ಪ್ರಜೆಗಳಾದ ನಾವು ಭಾರತವನ್ನು ಒಂದು ಸಾರ್ವಭೌಮ ಸಮಾಜವಾದಿ ಸರ್ವಧರ್ಮ ಸಮಭಾವದ ಪ್ರಜಾಸತ್ತಾತ್ಮಕದ ಆಶಯನೊಳಗೊಂಡ ಸಂವಿಧಾನ ನಮ್ಮದು. ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ, ವಿಚಾರ, ಅಬಿವ್ಯಕ್ತಿ, ವಿಶ್ವಾಸ, ಧರ್ಮಶ್ರದ್ಧೆ ಮತ್ತು ಉಪಾಸನಾ ಸ್ವಾತಂತ್ರ್ಯ ಸ್ಥಾನಮಾನ ಹಾಗೂ ಸೂಕ್ತ ಅವಕಾಶಗಳ ಸಮಾನತೆಯನ್ನು ನಮಗೆ ನೀಡಿರುವುದು ಹೆಮ್ಮೆಯ ವಿಷಯವಾಗಿದೆ.

ಪ್ರಾಧ್ಯಾಪಕ ಸಂಪತ್ತ ಎಸ್.ಲಮಾಣಿ ಉಪನ್ಯಾಸ ನೀಡಿ ಮಾತನಾಡಿ, ನಮ್ಮ ಸಂವಿಧಾನ ಸಭೆಯಲ್ಲಿ 1949ನೇ ನವೆಂಬರ ತಿಂಗಳ ಇಪ್ಪತ್ತಾರನೆಯ ತಾರೀಖಾದ ಈ ದಿವಸ ಈ ಮೂಲಕ ಈ ಸಂವಿಧಾನವನ್ನು ಅಂಗೀಕರಿಸಿ, ಅಧಿನಿಯಮಿಸಿ ಅರ್ಪಿಸಿಕೊಂಡಿದ್ದೇವೆ, ಭಾರತ ಸಂವಿಧಾನದಲ್ಲಿರುವ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವು ಮುಖಾಂತರ ಭಾರತದÀ ಉತ್ತಮ ಪ್ರಜೆಗಳಾಗಿ ಬಲೀಷ್ಠರಾಗಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಪ್ರಾಚಾರ್ಯರಾದ ಡಾ.ಅರುಣಕುಮಾರ ಗಾಳಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಭಾರತರತ್ನ ಡಾ.ಅಂಬೇಡ್ಕರ ಅವರು ಹೇಳಿರುವ ಉತ್ತಮವಾದ ಸಾಮಾಜಿಕ ಮೌಲ್ಯಗಳನ್ನು ಅವರ ಬರಹ ಓದುವದರ ಮೂಲಕ ಅವುಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಇದರಿಂದ ಆದರ್ಶವಾದ ವ್ಯಕ್ತಿತ್ವ ರೂಪಗೊಳ್ಳಲು ಸಾಧ್ಯವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕರ್ಣಕುಮಾರ ಜೈನಾಪುರ ಪ್ರಾಸ್ತಾವಿಕ ಮಾತನಾಡಿದರು. ಕಾಲೇಜಿನ ಸಾಂಸ್ಕøತಿಕ ವಿಭಾಗದ ಸಂಚಾಲಕರಾದ ಡಾ.ಚಂದ್ರಶೇಖರ ಕಾಳನ್ನವರ ಉಪಸ್ಥಿತರಿದ್ದರು. ರೇಶ್ಮಾ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ವಿಜಯಲಕ್ಷ್ಮೀ ಲಮಾಣಿ ಡಾ.ಅಂಬೇಡ್ಕರ ಕುರಿತು ಕವಿತೆ ಹಾಡಿದರು. ಡಾ.ಸುಮಂಗಲಾ ಮೇಟಿ ಸ್ವಾಗತಿಸಿದರು. ಡಾ.ಸುಮನ್ ಮುಚಖಂಡಿ ವಂದಿಸಿದರು. ಡಾ.ಚಂದ್ರಶೇಖರ ಕಾಳನ್ನವರ ಕಾರ್ಯಕ್ರಮ ನಿರೂಪಿಸಿದರು.

*ಪ್ರಬಂಧ ಸ್ಪರ್ಧೆ ವಿಜೇತರಿಗೆ ಪ್ರಶಸ್ತಿ ವಿತರಣೆ*
——————————
ಡಾ.ಅಂಬೇಡ್ಕರ ಓದು ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರ ಬಹುಮಾನ ವಿತರಿಸಲಾಯಿತು. ದ್ಯಾಮಣ್ಣ ಕುಂಬಾರ (ಪ್ರಥಮ), ಇಸ್ಮಾಯಿಲ್ ಪಿಂಜಾರ (ದ್ವಿತೀಯ) ಹಾಗೂ ಸೌಭಾಗ್ಯ ಹೊಸಮನಿ (ತೃತೀಯ) ಸ್ಥಾನ ಪಡೆದುಕೊಂಡಿದ್ದಾರೆ. ಸಮಾಧಾನಕರ ಬಹುಮಾನವನ್ನು ಅನರಾಧ ಭಜಂತ್ರಿ ಮತ್ತು ಯಲ್ಲಪ್ಪ ಭಜಂತ್ರಿ ನೀಡಲಾಯಿತು. ಪ್ರಥಮ ಬಂದವರಿಗೆ 3 ರೂ.ಗಳ ಬೆಲೆಯುಳ್ಳ, ದ್ವಿತೀಯ 2 ಸಾವಿರ ಬೆಲೆಯುಳ್ಳ, ಸಾವಿರ ರೂ.ಗಳ ಬೆಲೆಯುಳ್ಲ ಡಾ.ಅಂಬೇಡ್ಕರ ಅವರ ಪುಸ್ತಕಗಳನ್ನು ಬಹುಮಾನವಾಗಿ ನೀಡಲಾಯಿತು.