This is the title of the web page
This is the title of the web page

Live Stream

October 2024
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Local NewsPolitics NewsState News

ಎಂ.ಬಿ.ಪಾಟೀಲ ಹುತ್ತದಲ್ಲಿ ಸೇರಿಕೊಂಡ ಹಾವು

ಎಂ.ಬಿ.ಪಾಟೀಲ ಹುತ್ತದಲ್ಲಿ ಸೇರಿಕೊಂಡ ಹಾವು

ಬಾಗಲಕೋಟೆ

ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿರುವ ಸಚಿವ ಎಂ.ಬಿ.ಪಾಟೀಲ ಅವರು ತಾವು ನಯಾಪೈಸೆ ಭ್ರಷ್ಟಾಚಾರವನ್ನೇ ಎಸೆಗಿಲ್ಲ ಎಂಬುದನ್ನು ತಮ್ಮ ತಂದೆ-ತಾಯಿ ಮೇಲೆ ಆಣೆ ಮಾಡಿ ಹೇಳಲಿ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ, ಮಾಜಿ ಸಚಿವ ಮುರುಗೇಶ ನಿರಾಣಿ ಸವಾಲೆಸೆದಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ತಮ್ಮ ವಿರುದ್ಧ ಆರೋಪ ಮಾಡುತ್ತಿರುವ ಸಚಿವ ಎಂ.ಬಿ.ಪಾಟೀಲ ವಿರುದ್ಧ ಏಕವಚನದಲ್ಲೇ ಹರಿಹಾಯ್ದರು.

ಮೇಲ್ಮನೆ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರನ್ನು ಶೆಡ್ ಗಿರಾಕಿ ಎಂದು ಕರೆಯುವುದರ ಮೂಲಕ ಸಚಿವ ಎಂ.ಬಿ.ಪಾಟೀಲ ದಲಿತರನ್ನು ಅವಮಾನಿಸಿದಲ್ಲದೇ, ಪಂಚಮಸಾಲಿ ಸಮುದಾಯದವನಾದ ನನ್ನನ್ನು ದನಕಾಯುವವನು ಎಂದು ಹಿಯಾಳಿಸಿದ್ದಾರೆ. ಹಿಂದುಳಿದವರು, ಪಂಚಮಸಾಲಿಗರ ತಂಟೆಗೆ ಬಂದರೆ ಸರಿಯಿರುವುದಿಲ್ಲ ಎಂದು ಖಾರವಾಗಿ ಹೇಳಿದರು.

ಎಂ.ಬಿ.ಪಾಟೀಲ ಅವರು ದೊಡ್ಡವರು ಕಟ್ಟಿದ ಸಂಸ್ಥೆಯ ಅಧ್ಯಕ್ಷರಾಗಿದ್ದಾರೆ. ತಮಗೆ ಸ್ವಂತಕ್ಕೆ ಒಂದು ಸಂಸ್ಥೆ, ಕಾರ್ಖಾನೆಯನ್ನು ಕಟ್ಟಿ ಗೊತ್ತಿಲ್ಲ. ಸಾವಿರಾರು ಜನರಿಗೆ ಉದ್ಯೋಗ ನೀಡಿರುವ ನನ್ನ ಬಗ್ಗೆ ಕೀಳಾಗಿ ಮಾತನಾಡುತ್ತಾರೆ. ಬಸವೇಶ್ವರ ಸಕ್ಕರೆ ಕಾರ್ಖಾನೆ ಕಟ್ಟಿ ಜನರಿಗೆ ಉದ್ಯೋಗ ನೀಡುವುದಾಗಿ ಹೇಳಿ ತಮಿಳುನಾಡಿನ ಸಂಸ್ಥೆಯೊAದಕ್ಕೆ ಜಾಗೆಕೊಟ್ಟರು. ಇಂಥವರ ಯೋಗ್ಯತೆ ಸಮಾಜಕ್ಕೂ ಗೊತ್ತಿದೆ ಎಂದು ಹೇಳಿದರು.

ನನ್ನನೂ ಸೇರಿ ಬಿಜೆಪಿ ನಾಯಕರ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಎಂ.ಬಿ.ಪಾಟೀಲ ಅವರು ಮಾಡುತ್ತಿದ್ದಾರೆ. ನನ್ನ ವಿರುದ್ಧ ಪ್ರಾಸಿಕ್ಯೂಷನ್‌ಗೆ ಕೋರಿ ಯಾವುದೇ ದೂರು ಸಲ್ಲಿಕೆಯಾಗಿಲ್ಲ ಎಂಬುದನ್ನು ರಾಜಭವನದಿಂದ ಮಾಹಿತಿ ಹಕ್ಕು ಕಾಯ್ದೆಯಡಿ ನೀಡಿರುವ ಉತ್ತರದಲ್ಲಿ ಸ್ಪಷ್ಟವಾಗಿದೆ.

ತಾವು ಎಸೆಗಿರುವ ತಪ್ಪನ್ನು ಮುಚ್ಚಿಹಾಕಲು ಸಿದ್ದರಾಮಯ್ಯ ಅವರು ಗಾಳಿಯಲ್ಲಿ ಗುಂಡು ಹೊಡೆಯುತ್ತಿದ್ದಾರೆ. ವಿನಾಕಾರಣ ನನ್ನ ಹೆಸರು ತರಲಾಗುತ್ತಿದೆ ಎಂದರು.

೨೦೨೨ರ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಸಂಬಂಧಿಸಿದಂತೆ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯು ೪.೫೦ ಕೋಟಿ ರೂ.ಗಳ ವೆಚ್ಚದಲ್ಲಿ ವಿಡಿಯೋವೊಂದನ್ನು ನಿರ್ಮಿಸಲು ಮುಂದಾದಾಗ ಅಷ್ಟು ವೆಚ್ಚ ಅಗತ್ಯವಿಲ್ಲ, ತಪ್ಪಿತಸ್ಥರ ಮೇಲೆ ಕ್ರಮಕೈಗೊಳ್ಳಬೇಕೆಂದು ನಾನೇ ಇಲಾಖೆಯ ಮುಖ್ಯಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದೆ,

ನ್ಯಾಯಾಲಯದಲ್ಲಿ ಈ ಪ್ರಕರಣವಿದ್ದು, ನನ್ನನ್ನು ಪ್ರತಿವಾದಿಯನ್ನೂ ಆಗಿಸಿಲ್ಲ. ಹೀಗಿರುವಾಗಿ ವಿನಾಕಾರಣ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.

ಇದನ್ನು ನೋಡಿ

ಬಾಗಲಕೋಟೆಯಲ್ಲಿ ಕೆಐಎಡಿಬಿ ಜಾಗೆಯಲ್ಲಿ ತಮ್ಮ ಒಡೆತನದ ಶಾಲೆ ಇರುವ ಬಗ್ಗೆ ಎಂ.ಬಿ.ಪಾಟೀಲ ಅವರು ಮಾಡಿರುವ ಟ್ವೀಟ್‌ಗೆ ಉತ್ತರಿಸಿದ ನಿರಾಣಿ, ಕೈಗಾರಿಕಾ ಪ್ರದೇಶಗಳಿದ್ದಲ್ಲಿ ಶಾಲೆ, ಆಸ್ಪತ್ರೆ ಸೇರಿದಂತೆ ಸೌಕರ್ಯಗಳನ್ನು ಒದಗಿಸಲು ಮುಂಚಿನಿAದಲೂ ಅವಕಾಶವಿದೆ. ಶೇ.೧೫ ಜಾಗೆಯನ್ನು ಇಂಥದಕ್ಕೆ ಬಳಸಬಹುದು. ಅದರ ಅಡಿಯಲ್ಲಿ ಶಾಲೆ ಕಟ್ಟಿದ್ದೇನೆ. ಅದರಲ್ಲಿ ಯಾವ ಲೋಪವನ್ನೂ ಎಸೆಗಿಲ್ಲ ಎಂದು ಸ್ಪಷ್ಟಪಡಿಸಿದರು.

ಜಿಪಂ ಮಾಜಿ ಉಪಾಧ್ಯಕ್ಷ ಹೂವಪ್ಪ ರಾಠೋಡ, ಶ್ರೀಶೈಲ ಗೌರಿ, ಮಹೇಶ ಮೇಟಿ ಇತರರು ಇದ್ದರು.

";