This is the title of the web page
This is the title of the web page

Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Education NewsLocal NewsState News

ಮನುಷ್ಯ ಅಳಿದ ಮೇಲೂ ಉಳಿಯುವಂತಾಗಬೇಕು

ಮನುಷ್ಯ ಅಳಿದ ಮೇಲೂ ಉಳಿಯುವಂತಾಗಬೇಕು

ಬಾಗಲಕೋಟೆ

ಜೀವನದ ಸಾರ್ಥಕತೆ, ಉತ್ತಮ ಆಚಾರ, ವಿಚಾರ ಅಳವಡಿಸಿಕೊಂಡು ಜೀವನ ಸಾಗಿಸಿ, ಮನುಷÀ್ಯ ಅಳಿದ ಮೇಲೆಯೂ ಉಳಿಯುಂತಾಗಬೇಕು ಎಂದು ಶಿಕ್ಷಣ ತಜ್ಞ ಎಸ್.ಆರ್.ಮನಹಳ್ಳಿ ಹೇಳಿದರು.

ಜಿಲ್ಲೆಯ ಅಮೀನಗಡ ಪಟ್ಟಣದ ಕಾಳಿಕಾದೇವಿ ದೇವಾಲಯದ ಸಭಾಭವನದಲ್ಲಿ ಶಾಲಾ ಶಿಕ್ಷಣ ಇಲಾಖೆಯಲ್ಲಿ ನಾನಾ ಹುದ್ದೆಗಳಲ್ಲಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ಸಿದ್ದಮ್ಮ ಪಾಟೀಲ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ನಮ್ಮ ಸೇವೆಯೂ ನಿವೃತ್ತಿ ನಂತರ ಸಂಸ್ಥೆ, ಸಮಾಜ ಸ್ಮರಿಸುವಂತಾಗಬೇಕು. ಶಿಕ್ಷಕ ವೃತ್ತಿ ಪವಿತ್ರವಾದದ್ದು, ಆದರ್ಶ, ಅನುಕರಣಾ ನಡತೆ ನಾವು ಅಳವಡಿಕೊಂಡಾಗ ಸಮಾಜ ನಮ್ಮನ್ನು ಖಂಡಿತ ಗೌರವಿಸುವ ಕಾರ್ಯ ಮಾಡುತ್ತದೆ ಎಂದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ, ಸತತ ಓದು ಆನಂದ ನೀಡುತ್ತದೆ. ಯಾವುದೇ ವೃತ್ತಿಯಿಂದ ನಿವೃತ್ತರಾದವರು ಅಧ್ಯಯನ, ಸಮಾಜ ಸೇವೆಯಲ್ಲಿ ತೊಡಗಿ ಉತ್ತಮ ಜೀವನ ನಡೆಸಬಹುದು ಎಂದರು.

ಹಡಗಲಿಯ ರುದ್ರಮುನಿ ಶಿವಾಚಾರ್ಯರು, ಬಾದನಾಳದ ಶಿವಸಿದ್ದ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವದಿಸಿದರು.

ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಟಾನ ಸಮಿತಿ ಉಪಾಧ್ಯಕ್ಷ ಶಂಕ್ರಪ್ಪ ನೇಗಲಿ, ಹಾಲಮತ ಸಮಾಜದ ಅಧ್ಯಕ್ಷ ಯಮನಪ್ಪ ನಾಗರಾಳ, ಜಗದೀಶ ಬಿಸಲದಿನ್ನಿ, ಬಿಆರ್‌ಪಿ ವಿಜಯಲಕ್ಷ್ಮಿ ನಾಗಲೋಟಿ, ಎಚ್.ಎಸ್.ನಾಗೂರ, ಮುಖ್ಯಶಿಕ್ಷಕ ಪಿ.ಎಚ್.ಪವಾರ, ಕನಕಪ್ಪ ಕಂಬಳಿ, ಶಿವಬಸಯ್ಯ ಹಿರೇಮಠ, ಬಸವರಾಜ ಆಸಂಗಿ, ನೌಕರರ ಸಂಘದ ಅಧ್ಯಕ್ಷ ಸಂಗಣ್ಣ ಹಂಡಿ, ಶಿಕ್ಷಕರ ಸಂಘದ ಅಧ್ಯಕ್ಷ ಸಂಗಮೇಶ ಪಾಟೀಲ, ರಂಗನಾಥ ಮಾಸರಡ್ಡಿ, ಸುಜಾತ ಹಂಚಿನಾಳ, ರವಿ ಕಾಳಗಿ, ಮಹಾಂತೇಶ ತಿಪ್ಪಣ್ಣವರ, ಮಲ್ಲಿಕಾರ್ಜುನ ಸಜ್ಜನ, ಜಿ.ವೈ.ಆಲೂರ, ಸಿಆರ್‌ಪಿ ಅಶೋಕ ಎಮ್ಮಿ ಇತರರಿದ್ದರು.

“ವೃತ್ತಿ ಪಾವಿತ್ರತೆ ಇಂದು ಕಡಿಮೆಯಾಗುತ್ತಿದ್ದು ಗುರು ಶಿಷÀ್ಯರು ಸಂಬAಧ, ಗುರುಭಕ್ತಿ, ಭಯ, ಗೌರವ ಭಾವನೆ ಕಡಿಮೆಯಾಗಿ ಸಮಾಜದ ಸ್ವಾಸ್ಥ್ಯ ಹಾಳುಗುತ್ತಿದೆ. ಹಿಂದೆ ವಿದ್ಯಾರ್ಥಿಗಳನ್ನು ಹೆದರಿಸಿ, ಗದರಿಸಿ ಬುದ್ಧಿ ಕಲಿಸುವ ವ್ಯವಸ್ಥೆ, ಗುರುಗಳು ವಿದ್ಯಾರ್ಥಿಗಳ ಸಂಬAಧ ಮೊದಲಿನಂತೆ ಉಳಿದಿಲ್ಲ.”
-ಎಸ್.ಜಿ.ನಂಜಯ್ಯನಮಠ, ಮಾಜಿ ಶಾಸಕ.

 

Nimma Suddi
";