This is the title of the web page
This is the title of the web page

Live Stream

January 2025
S M T W T F S
 1234
567891011
12131415161718
19202122232425
262728293031  

| Latest Version 9.4.1 |

State News

ಹುನಗುಂದದಲ್ಲಿ ಮುಸ್ಲಿಂ ನೌಕರರ ಸಭೆ

ನಿಮ್ಮ ಸುದ್ದಿ ಬಾಗಲಕೋಟೆ

ಸಂಘಟನೆಯಲ್ಲಿ ಶಕ್ತಿ ಅಡಗಿದ್ದು, ಇದರಿಂದ ಹಲವು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವದರೊಂದಿಗೆ, ಸರಕಾರದ ಸವಲತ್ತುಗಳನ್ನು ಪಡೆಯಲು ಸಹಕಾರಿಯಾಗಿದೆ ಎಂದು ಕರ್ನಾಟಕ ಮುಸ್ಲಿಂ ಯೂನಿಟಿಯ ರಾಜ್ಯ ಸಂಚಾಲಕ ಜಬ್ಬಾರ ಕಲಬುರ್ಗಿ ಹೇಳಿದರು.

ಜಿಲ್ಲೆಯ ಹುನಗುಂದದ  ಎಂ ಅರ್ ರಡಸಿಡೆನ್ಸಿ ಯಲ್ಲಿರುವ ಸಭಾಂಗಣದಲ್ಲಿ ಗುರುವಾರ ತಾಲೂಕು ಮುಸ್ಲಿಂ ನೌಕರರ ಸಂಘ ಆಯೂಜಿಸಿದ್ದ ಸನ್ಮಾನ ಸಮಾರಂಭದ ಅತಿಥಿ ಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು

ಡಾ: ಸಾಚಾರ ವರದಿಯಲ್ಲಿ ಉಲ್ಲೇಖಿಸಿರುವಂತೆ ಮುಸ್ಲಿಂ ಸಮೂದಾಯ ದೇಶದಲ್ಲಿ ತೀರಾ ಹಿಂದುಳಿದ ಸಮಾಜವಾಗಿದೆ ದಲಿತ ಸಮುದಾಯಕ್ಕಿಂತಲೂ ಕಡೆಯಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ ಹಿಗಾಗಿ ಸಮಾಜದವರು ಜನಾಂಗದ ಅಭಿವೃದ್ಧಿಯೊಂದಿಗೆ ಸಾಮಾಜಿಕ ಕಾರ್ಯಗಳತ್ತಲೂ ಗಮನಹರಿಸಬೇಕು. ಸಮಾಜದ ಮಕ್ಕಳಿಗೆ ವಿದ್ಯಾಭ್ಯಾಸ ನೀಡಲು ಪ್ರಥಮ ಆದ್ಯತೆ ನೀಡಬೇಕು. ಮಹಿಳೆಯರನ್ನೂ ಸಮಾಜದ ಮುಖ್ಯವಾಹಿನಿಗೆ ತರುವ ಕಾರ್ಯವಾಗಬೇಕು. ಯುವ ಜನಾಂಗ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ಅಭಿಪ್ರಾಯಪಟ್ಟರು.ಮುಂದುವರೆದು ಮಾತನಾಡಿದ ಅವರು ಸಾಂವಿಧಾನಿಕ ಹಕ್ಕು ಪಡೆಯಲು ಈಗ ಹೂರಾಟ ಮಾಡಬೇಕಿದೆ ಶೇ ೪% ರಷ್ಟಿರುವ ಮಿಸಲಾತಿಯನ್ನು ಶೇ೭% ಕ್ಕೆ ಹೆಚ್ಚಿಸುವಂತೆ ಕರ್ನಾಟಕ ಶಾಶ್ವತ ಹಿಂದುಳಿದ ವರ್ಗಗಳ ಆಯೂಗಕ್ಕೆ ಮನವಿ ನೀಡಬೇಕಿದೆ ಭವಿಷ್ಯದ ಪೀಳಿಗೆಗಾಗಿ ಇದು ಅನಿವಾರ್ಯ ಎಂದರಲ್ಲದೆ.ಕರ್ನಾಟಕ ವಕ್ಫ ಮಂಡಳಿ ಮಸೀದಿಗಳ ಪೇಶ ಇಮಾಮ ಮತ್ತು ಮೂಜ್ಜನ್ ಗಳಿಗೆ ನೀಡುವ ಗೌರವಧನ ತೀರಾ ಕಡಿಮೆಯಾಗಿದ್ದು ಅದನ್ನು ಹೆಚ್ಚಿಸಬೇಕಿದೆ ಮತ್ತು ಪ್ರಧಾನ ಮಂತ್ರಿಗಳ ೧೫ಅಂಶಗಳ ಕಾರ್ಯಕ್ರಮ ಕಡ್ಡಾಯವಾಗಿ ಜಾರಿಯಾಗಬೇಕು ಎಂದರು

ಅಧ್ಯಕ್ಷತೆ ವಹಿಸಿದ್ದ ಪರವೇಜ್ ಖಾಜಿ ಜಿಲ್ಲಾ ವಕ್ಫ ಅಧ್ಯಕ್ಷ ಮಹಬೂಬ ಸರಕಾವಸ ಮಾತನಾಡಿದರು. ನಿವೃತ್ತ ಗುರುಗಳಾದ ಎಎಚ್ ನಾಯಿಕ.ಡಿ ಬಿ.ನದಾಫ. ಎ ಎಮ್ ಸೂಲಾಪೂರ ಎ.ಎಚ್ ಬಂಗಾರಗುಂಡ ಇವರನ್ನು ಸನ್ಮಾನಿಸಲಾಯಿತು ಎ.ಎಚ್ ನಾಯಿಕ ಸ್ವಾಗಿಸಿದರು.ಎ .ಎಚ್ ನದಾಫ ವಂದಿಸಿದರು.ಬಿ ಡಿ ಚಿತ್ತರಗಿ ನಿರೂಪಿಸಿದರು

Nimma Suddi
";