This is the title of the web page
This is the title of the web page

Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

State News

ರಾಜ್ಯದಲ್ಲಿ ಹೂಡಿಕೆ ಮಾಡಲು 241 ಕಂಪನಿಗಳಿಗೆ ಅನುಮತಿ ನೀಡಲಾಗಿದೆ: ಸಚಿವ ಎಂ.ಬಿ ಪಾಟೀಲ್

ರಾಜ್ಯದಲ್ಲಿ ಹೂಡಿಕೆ ಮಾಡಲು 241 ಕಂಪನಿಗಳಿಗೆ ಅನುಮತಿ ನೀಡಲಾಗಿದೆ: ಸಚಿವ ಎಂ.ಬಿ ಪಾಟೀಲ್

ಬೆಂಗಳೂರು : ರಾಜ್ಯದಲ್ಲಿ ಬೆಂಗಳೂರನ್ನು ಹೊರತುಪಡಿಸಿ ಹೂಡಿಕೆ ಮಾಡಲು 241 ಕಂಪನಿಗಳಿಗೆ ಅನುಮತಿ ನೀಡಲಾಗಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ. ಬಿ ಪಾಟೀಲ್ ಬಜೆಟ್​ ಅಧಿವೇಶನದಲ್ಲಿ ಸೂಚಿಸಿದರು.

ಬಜೆಟ್​ ಅಧಿವೇಶನದಲ್ಲಿ ಪರಿಷತ್​ ಸದಸ್ಯ ಕೇಶವ ಪ್ರಸಾದ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಬೆಂಗಳೂರು ಹೊರತುಪಡಿಸಿ ರಾಜ್ಯದಲ್ಲಿ ಹೂಡಿಕೆಗೆ ಮಾಡಲು 241 ಕಂಪನಿಗಳಿಗೆ ಅನುಮತಿ ನೀಡಲಾಗಿದ್ದು, ಕರ್ನಾಟಕ ರಾಜ್ಯ ಮಟ್ಟದ ಏಕ ಗವಾಕ್ಷಿ ಅನುಮೋದನೆ ಸಮಿತಿಯು ಒಟ್ಟು 6,407.82 ಕೋಟಿ ರೂಪಾಯಿ ಮೌಲ್ಯದ 128 ಯೋಜನೆಗಳಿಗೆ ಅನುಮೋದನೆ ನೀಡಿದ್ದು, ಇದರಿಂದ ರಾಜ್ಯಾದ್ಯಂತ 33,771 ಜನರಿಗೆ ಉದ್ಯೋಗಾವಕಾಶ ಕಲ್ಪಿಸುವ ಸಾಮರ್ಥ್ಯ ಹೊಂದಿದೆ.

128 ಯೋಜನೆಗಳಲ್ಲಿ 24 ಯೋಜನೆಗಳು ಬೆಂಗಳೂರಿನಲ್ಲಿದ್ದು, ಇನ್ವೆಸ್ಟ್ ಕರ್ನಾಟಕದಲ್ಲಿ ಕುದುರಿಸಲಾದ 57 ಒಡಂಬಡಿಕೆ ಎಂಒಯು ಪೈಕಿ 7 ಯೋಜನೆಗಳಿಗೆ ಎಕಗವಾಕ್ಷಿ ಸಮಿತಿಯಲ್ಲಿ ಅನುಮೋದನೆ ನೀಡಲಾಗಿದೆ. ಇವುಗಳಿಗೆ ಭೂಮಿ, ನೀರು ಮತ್ತು ವಿದ್ಯುತ್ ಪೂರೈಕೆ ಒದಗಿಸಲಾಗುವುದು ಎಂದು ಸೂಚಿಸಿದರು.

 

Nimma Suddi
";