This is the title of the web page
This is the title of the web page

Live Stream

March 2025
S M T W T F S
 1
2345678
9101112131415
16171819202122
23242526272829
3031  

| Latest Version 9.4.1 |

Education NewsHealth & FitnessLocal News

ಜೀವನದ ಯಶಸ್ಸಿಗೆ ಪ್ರೇರಣಾದಾಯಕ ಸಲಹೆ

ಜೀವನದ ಯಶಸ್ಸಿಗೆ ಪ್ರೇರಣಾದಾಯಕ ಸಲಹೆ

ಜೀವನದ ಯಶಸ್ಸಿಗೆ ಪ್ರೇರಣಾದಾಯಕ ಸಲಹೆ

ಯಶಸ್ಸು ಕಾಣಲು ಬಯಸುವವರಿಗೆ ಸ್ಪೂರ್ತಿಯಾಗುವಂತೆ, ಪ್ರೇರಣೆಯಾಗುವಂತೆ  ಸಲಹೆಗಳನ್ನು ಇಲ್ಲಿ ನೀಡಲಾಗಿದೆ. ಇದು ಜೀವನದಲ್ಲಿ ಈಗಾಗಲೇ ಸಾಧಿಸಿರುವವರು ತಿಳಿಸಿದ ಪ್ರೇರಣಾದಾಯಕ ಮಾತುಗಳು. ನಿಮ್ಮ ಯಶಸ್ಸಿಗೂ ಇದು ಪ್ರೇರಣೆ ನೀಡಬಲ್ಲದು.

ಕನಸು ಈಡೇರಿಸಿಕೊಂಡು ಜೀವನದಲ್ಲಿ ಯಶಸ್ಸು ಪಡೆಯುವುದು ಎಲ್ಲರ ಕನಸು. ಕನಸು ಈಡೇರಿಸಲು ಶಿಸ್ತು, ದೃಢತೆ, ಅತ್ಯುತ್ತಮ ದೃಷ್ಟಿಕೋನ, ಸತತ ಪ್ರಯತ್ನ ಇತ್ಯಾದಿ ಹಲವು ವಿಷಯಗಳು ಬೇಕು. ಇವೆಲ್ಲದರ ಜತೆಗೆ ನಿಮ್ಮಲ್ಲಿ ಅತ್ಯುತ್ತಮ ಪ್ರೇರಣಾದಾಯಕ ಮನಸ್ಥಿತಿ ಇರಬೇಕು. ನಿಮ್ಮಲ್ಲಿ ಸ್ಪೂರ್ತಿದಾಯಕ ವ್ಯಕ್ತಿತ್ವ ಇರಬೇಕು. ಮೋಟಿವೇಷನ್‌ ಇಲ್ಲದೆ ಇದ್ದರೆ ಯಶಸ್ಸು ಸುಲಭವಾಗಿ ದೊರಕದು.

ಪ್ರೇರಣೆ ಇಲ್ಲದೆ ಇದ್ದರೆ ಕನಸನ್ನು ನಿಜವಾಗಿಸುವ ನಿಮ್ಮ ಆಸಕ್ತಿ ಕಡಿಮೆಯಾಗಬಹುದು. ಯಶಸ್ಸು ಕಾಣಲು ಬಯಸುವವರಿಗೆ ಸ್ಪೂರ್ತಿಯಾಗುವಂತೆ, ಪ್ರೇರಣೆಯಾಗುವಂತೆ ಹತ್ತು ಸಲಹೆಗಳನ್ನು ಇಲ್ಲಿ ನೀಡಲಾಗಿದೆ. ಇದು ಜೀವನದಲ್ಲಿ ಈಗಾಗಲೇ ಸಾಧಿಸಿರುವವರು ತಿಳಿಸಿದ ಪ್ರೇರಣಾದಾಯಕ ಮಾತುಗಳು. ನಿಮ್ಮ ಯಶಸ್ಸಿಗೂ ಇದು ಪ್ರೇರಣೆ ನೀಡಬಲ್ಲದು.

ದೊಡ್ಡ ಕನಸು ಕಾಣಿರಿ
ಅಬ್ದುಲ್‌ ಕಲಾಂ ಸೇರಿದಂತೆ ಸಾಕಷ್ಟು ಮಹನೀಯರು ದೊಡ್ಡ ಕನಸು ಕಾಣುವಂತೆ ಪ್ರೇರಪಣೆ ನೀಡಿದ್ದಾರೆ. “ನಿಮ್ಮ ಕನಸುಗಳು ನಿಮಗೆ ಭಯ ಹುಟ್ಟಿದೆ ಇದ್ದರೆ ನಿಮ್ಮ ಕನಸುಗಳು ಸಾಕಷ್ಟು ದೊಡ್ಡದ್ದಲ್ಲ” ಎಂದು ಎಲೆನ್‌ ಜಾನ್ಸನ್‌ ಸರ್‌ಲೀಫ್‌ ಹೇಳಿದ್ದಾರೆ. ನಾವು ದೊಡ್ಡ ಕನಸು ಕಂಡರೆ ದೊಡ್ಡ ಯಶಸ್ಸು ಪಡೆಯಬಹುದು. “ನೀವು ಸಣ್ಣ ಆಟ ಆಡಿದರೆ ಸಣ್ಣ ಲಾಭ ದೊರಕುತ್ತದೆ. ದೊಡ್ಡ ಆಟ ಆಡಿದರೆ ದೊಡ್ಡ ಲಾಭ ದೊರಕುತ್ತದೆ” ಎಂದು ಮೋಟಿವೇಷನಲ್‌ ಸ್ಪೀಕರ್‌ ಲೆಸ್‌ ಬ್ರೌನ್‌ ಹೇಳಿದ್ದಾರೆ.

ಕುತೂಹಲದಿಂದ ಇರಿ
“ನೀವು ನಕ್ಷತ್ರಗಳನ್ನು ನೋಡಿರಿ, ಕಾಲಿನ ಬುಡ ನೋಡಿದರೆ ಪ್ರಯೋಜನವಿಲ್ಲ. ನೀವು ಏನು ನೋಡುವಿರೋ ಅಷ್ಟು ಸಾಧನೆ ಮಾಡುವ ಕುರಿತು ಆಲೋಚಿಸಿ, ಈ ಬ್ರಹ್ಮಾಂಡ ಏಕಿದೆ, ಕುತೂಹಲ ಹೆಚ್ಚಿಸಿಕೊಳ್ಳಿ- ಎಂದು ಸ್ಟಿಫನ್‌ ಹಾಕಿಂಗ್‌ ಹೇಳಿದ್ದಾರೆ. ಸ್ಟಿಫನ್‌ ಹಾಕಿಂಗ್‌ ಎಂಬ ವ್ಯಕ್ತಿಯು ಎಷ್ಟು ಕುತೂಹಲಿ ಎಂದರೆ ಅವರು ಬ್ರಹ್ಮಾಂಡದ ಕುರಿತು ಸಾಕಷ್ಟು ಆಲೋಚನೆಗಳನ್ನು ಪ್ರಕಟಿಸಿದ್ದಾರೆ.

ನಿಮ್ಮ ಸುತ್ತಮುತ್ತ ಅದ್ಭುತ ವ್ಯಕ್ತಿಗಳು ಇರಲಿ
:ನೀವು ದಿನದಲ್ಲಿ ಬಹುತೇಕ ಸಮಯ ಕಳೆಯುವ ವ್ಯಕ್ತಿಗಳಿಗಿಂತ ನಿಮ್ಮ ಮಟ್ಟ ಕೆಳಗೆ ಇರಲಿ. ದೊಡ್ಡ ವ್ಯಕ್ತಿಗಳು ನಿಮ್ಮ ಸುತ್ತಮುತ್ತ ಇರಲಿ ಎಂದು ಜಿಮ್‌ ರಾನ್‌ ಹೇಳಿದ್ದಾರೆ. ನಮ್ಮ ಸುತ್ತಮುತ್ತಲಿನ ವ್ಯಕ್ತಿಗಳು ನಮ್ಮ ಮೇಲೆ ದೊಡ್ಡ ಪರಿಣಾಮ ಬೀರುತ್ತಾರೆ. ಇದೇ ಕಾರಣಕ್ಕೆ ಒಳ್ಳೆಯವರ ಗೆಳೆತನ ಕಲ್ಲು ಸಕ್ಕರೆ ಹಾಂಗ ಎಂದು ಕನ್ನಡದ ಹಾಡಿದೆ. ಜೀವನದಲ್ಲಿ ನಕಾರಾತ್ಮಕ ವ್ಯಕ್ತಿಗಳನ್ನು ದೂರವಿರಿಸಿ, ಸಕಾರಾತ್ಮಕವಾಗಿ ಇರುವವರ ಜತೆಗಿರಿ.

ಸೋಲೇ ಗೆಲುವಿನ ಸೋಪಾನ
“ಯಶಸ್ಸಿನತ್ತ ಸಾಗಲು ಸೋಲು ಒಂದು ಮೆಟ್ಟಿಲು” ಎಂದು ಓಪ್ರಾ ವಿನ್‌ಫ್ರೇ ತಿಳಿಸಿದ್ದಾರೆ. ಸೋಲು ಬಂದಾಗ ಹಿಂಜರಿಯಬಾರದು. ಅದು ನಮ್ಮನ್ನು ಯಶಸ್ಸಿನಡೆಗೆ ಕೊಂಡೊಯ್ಯಲು ಇರುವ ಮೆಟ್ಟಿಲು ಎಂದು ತಿಳಿಯಬೇಕು.

ವಿಭಿನ್ನವಾಗಿರಿ
ಎರಡು ದಾರಿಗಳಿದ್ದವು. ಒಂದು ದಾರಿಯಲ್ಲಿ ತುಂಬಾ ಜನರು ಹೋಗುತ್ತಿದ್ದರು. ನಾನು ಕಡಿಮೆ ಜನರು ಪ್ರಯಾಣಿಸಿದ ದಾರಿಯನ್ನು ಆಯ್ಕೆ ಮಾಡಿದೆ. ದೊಡ್ಡ ವ್ಯತ್ಯಾಸ ಕಾಣಿಸಿತ್ತು ಎಂದು ರಾಬರ್ಟ್‌ ಫಾಸ್ಟ್‌ ಹೇಳಿದ್ದಾರೆ. ಆಪಲ್‌ ಕಂಪನಿಯು ವಿಭಿನ್ನವಾಗಿ ಯೋಚಿಸಿ ಎಂಬ ಘೋಷಣೆ ಮಾಡಿತು. ಅದು ಅದರ ಬ್ರ್ಯಾಂಡಿಂಗ್‌ಗೆ ಸಹಾಯ ಮಾಡಿತ್ತು. ಇತರೆ ಕಂಪನಿಗಳು ಪ್ರತಿಸ್ಪರ್ಧಿಗಳ ಉತ್ಪನ್ನವನ್ನು ನಕಲು ಮಾಡುತ್ತಿರುವಾಗ ಆಪಲ್‌ ಭಿನ್ನವಾಗಿ ಯೋಚಿಸಿ ದೊಡ್ಡ ಯಶಸ್ಸು ಪಡೆಯಿತು.

ಯಶಸ್ವಿ ವ್ಯಕ್ತಿಗಳ ಕುರಿತು ಓದಿ
ಯಶಸ್ಸು ಕಂಡ ವ್ಯಕ್ತಿಗಳ ಯಶೋಗಾಥೆ ಓದಿ. ಅವರ ಪುಸ್ತಕದಲ್ಲಿ ಅವರು ಸೋಲು ಅನುಭವಿಸಿದ, ಯಶಸ್ಸು ಸಾಧಿಸಿದ ಕತೆಗಳು ಇರುತ್ತವೆ. ವ್ಯಕ್ತಿಗಳ ಬಯೋಗ್ರಫಿ, ಆಟೋಬಯೋಗ್ರಫಿ ಇತ್ಯಾದಿಗಳನ್ನು ಓದಿ ಸ್ಪೂರ್ತಿ ಪಡೆಯಿರಿ.

ಯೋಜನೆಯನ್ನು ಕಾರ್ಯರೂಪಕ್ಕೆ ತನ್ನಿ
ಸದಾ ಕನಸು ಕಾಣುತ್ತ ಇದ್ದರೆ ಸಾಲದು. ಯೋಜನೆಯನ್ನು ಅನುಷ್ಠಾನಕ್ಕೆ ತರುವುದು ತುಂಬಾ ಅಗತ್ಯ. “ದೊಡ್ಡ ಉದ್ದಿಮೆಗಳು ಯಶಸ್ಸು ಪಡೆದಿರುವುದು ಕೇವಲ ಅದ್ಭುತ ದೃಷ್ಟಿಕೋನದಿಂದ ಮಾತ್ರವಲ್ಲ, ತಮ್ಮ ಆಲೋಚನೆಗಳನ್ನು ಕಾರ್ಯರೂಪಕ್ಕೆ ತಂದಿರುವುದು ಯಶಸ್ಸಿಗೆ ಪ್ರಮುಖ ಕಾರಣ” ಎಂದು ಜೆಫ್‌ ಬಿಜೋಸ್‌ ಹೇಳಿದ್ದಾರೆ.

ನಿಮ್ಮ ಜೀವನದ ಜವಾಬ್ದಾರಿ ತೆಗೆದುಕೊಳ್ಳಿ
ನೀವು ನಿಮ್ಮ ವೈಯಕ್ತಿಕ ಜವಾಬ್ದಾರಿ ತೆಗೆದುಕೊಳ್ಳಬೇಕು. ನಿಮ್ಮನ್ನು ನೀವು ಬದಲಾಯಿಸಲು ಪ್ರಯತ್ನಿಸಬೇಕು ಎಂದು ಜಿಮ್‌ ರಾನ್‌ ಹೇಳುತ್ತಾರೆ. ನಿಮ್ಮ ಬಡತನ, ನಿಮ್ಮ ಸೋಲು, ನಿಮ್ಮ ಪರಿಸ್ಥಿತಿ ಯಾವುದೂ ಯಶಸ್ಸಿಗೆ ಅಡ್ಡಿಯಾಗದು.

ಇತರರಿಗೆ ಸಹಾಯ ಮಾಡಿ
“ಯಶಸ್ಸು ಎನ್ನುವುದು ನೀವು ಎಷ್ಟು ಹಣ ಮಾಡುವಿರಿ ಎಂದಲ್ಲ. ಇದು ನೀವು ಜನರೊಂದಿಗೆ ಹೇಗೆ ಇರುವಿರಿ, ಏನು ಸಹಾಯ ಮಾಡುವಿರಿ ಎನ್ನುವುದನ್ನು ಅವಲಂಬಿಸಿದೆ” ಎಂದು ಮೈಕೆಲ್‌ ಒಬಾಮಾ ಹೇಳಿದ್ದಾರೆ.

ನಿಮಗೆ ಇಷ್ಟವಾಗಿರುವುದನ್ನು ಮಾಡಿ
“ನೀವು ಮಾಡುವ ಕೆಲಸವು ನಿಮ್ಮ ಜೀವನದ ಬಹುಪಾಲು ಸಮಯ ನಿಮ್ಮ ಜತೆಗೆ ಇರುತ್ತದೆ. ನಿಮಗೆ ತೃಪ್ತಿದಾಯಕವಾದ ಕೆಲಸವನ್ನು, ಗುರಿಯನ್ನು ಆಯ್ಕೆ ಮಾಡಿಕೊಳ್ಳಿ” ಎಂದು ಸ್ಟೀವ್‌ ಜಾಬ್ಸ್‌ ಹೇಳಿದ್ದಾರೆ.

Nimma Suddi
";