ನಿಮ್ಮ ಸುದ್ದಿ ಬಾಗಲಕೋಟೆ
ಸುಲಿದ ಬಾಳೆ ಹಣ್ಣಿನಂತೆಯಿರುವ ನಮ್ಮ ಕನ್ನಡ ಭಾಷೆಯನ್ನು ತೆಲುಗು,ತಮಿಳು, ಮರಾಠಿ ಸೇರಿದಂತೆ ವಿವಿಧ ಭಾಷೀಕರಿಗೆ ಕನ್ನಡ ಕಲಿಸುವ ಕಾರ್ಯವಾಗಬೇಕು ಎಂದು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಹೇಳಿದರು.
ನವನಗರದ ಕಲಾಭವನದ ಆವರಣದಲ್ಲಿ ರವಿವಾರ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಕರ್ನಾಟಕ ಲಲಿತಕಲಾ ಅಕಾಡೆಮಿ ಬೆಂಗಳೂರು ಇವರ ಸಹಯೋಗದಲ್ಲಿ ಮಾತಾಡ್ ಮಾತಾಡ್ ಕನ್ನಡ ಅಭಿಯಾನಡಿಯಲ್ಲಿ ಕನ್ನಡಕ್ಕಾಗಿ ನಾವು ಎಂಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಉದ್ಯೋಗಕ್ಕಾಗಿ ನಮ್ಮ ಕನ್ನಡ ಭಾಷಿಕರು ಅನ್ಯ ರಾಜ್ಯ ಹಾಗೂ ದೇಶಗಳಿಗೆ ಹೋದಾಗ ಅಲ್ಲಿಯ ಭಾಷೆಯನ್ನು ಬಹುಬೇಗ ಕಲಿಯುತ್ತಾರೆ ಆದರೆ ನಮ್ಮ ಕನ್ನಡ ಭಾಷೆ ಪಸರಿಸಿ ಬೆಳೆಸಬೇಕೆಂಬ ಕಾರ್ಯ ಮಾಡುತ್ತಿಲ್ಲವೆಂದರು.
ನೇರೆ ರಾಜ್ಯಗಳಾದ ತಮಿಳು,ಆಂಧ್ರ ಹಾಗೂ ಮಹಾರಾಷ್ಟ್ರ ತಮ್ಮ ಮಾತೃ ಭಾಷೆಯನ್ನು ಹಿಡಿತದಲ್ಲಿ ಇಟ್ಟುಕೊಂಡು ಅಲ್ಪ ಸ್ವಲ್ಪ ಕನ್ನಡ ಬರುತ್ತಿದ್ದರು ನಮ್ಮ ರಾಜ್ಯಕ್ಕೆ ಬಂದಾಗ ತಮ್ಮ ಭಾಷೆಯನ್ನೆ ಬಳಸುತ್ತಾರೆ. ಇದನ್ನು ಕನ್ನಡಿಗರಾದ ನಾವು ಗಮನಿಸಿ ಈಂತಹ ಅಭಿಯಾನುಗಳನ್ನು ಹಮ್ಮಿಕೊಳ್ಳುವ ಮೂಲಕ ಕನ್ನಡಿಗರಲ್ಲಿ ಕನ್ನಡ ಬೆಳೆಸುವ ಕಾರ್ಯ ಮಾಡಬೇಕು. ಇಂದು ದೃಶ್ಯ ಮಾಧ್ಯಮದ ಮೂಲಕ ಪ್ರಾರಂಭಗೊಂಡ ಈ ಅಭಿಯಾನ ಇನ್ನೂ ಹಲವು ಕಾರ್ಯಕ್ರಮಗಳೊಂದಿಗೆ ಕನ್ನಡಿರಲ್ಲಿ ಜಾಗೃತ ಮೂಡಿಸಲಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕಿ ಹೇಮಲತಾ ಎನ್. ಮಾತನಾಡುತ್ತಾ ಈ ಬಾರಿ 66 ನೇ ಕನ್ನಡ ರಾಜ್ಯೋತ್ಸವನ್ನು ಆಚರಿಸಲಾಗುತ್ತಿದ್ದು ಅದರ ಅಂಗವಾಗಿ 66 ಅಡಿ ಕ್ಯಾನ್ವಸ್‍ನಲ್ಲಿ ಕನ್ನಡ ನಾಡುನುಡಿಗಾಗಿ ಸಂಬಂಧಿಸಿದ ಕಲಾಕೃತಿಗನ್ನು ಆಸಕ್ತ ಮತ್ತು ಪ್ರತಿಭಾನ್ವಿತ ಕಲಾವಿದರ ಮೂಲಕ ಅಭಿಯಾನ ಪ್ರಾರಂಭಿಸಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಹೇಶ ಬಂಡಿ, ಲಲಿತಾ ಕಲಾ ಅಕಾಡೆಮಿಯ ಸದಸ್ಯ ವಿರೇಶ ರುದ್ರಸ್ವಾಮಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.