This is the title of the web page
This is the title of the web page

Live Stream

March 2025
S M T W T F S
 1
2345678
9101112131415
16171819202122
23242526272829
3031  

| Latest Version 9.4.1 |

Local NewsPolitics NewsState News

Navarasanayaka Jaggesh : ಸಂಸದ, ನಟ ಜಗ್ಗೇಶ್‌ಗೆ ಅನಾರೋಗ್ಯ; ಆತಂಕ ಹುಟ್ಟಿಸಿದ ಫೋಟೊಗಳು!

Navarasanayaka Jaggesh : ಸಂಸದ, ನಟ ಜಗ್ಗೇಶ್‌ಗೆ ಅನಾರೋಗ್ಯ; ಆತಂಕ ಹುಟ್ಟಿಸಿದ ಫೋಟೊಗಳು!

ಬೆಂಗಳೂರು: ಸಂಸದ, ನಟ ನವರಸ ನಾಯಕ ಜಗ್ಗೇಶ್‌ಗೆ (Navarasanayaka Jaggesh) ಅನಾರೋಗ್ಯ ಕಾಡಿದೆಯೇ? ಅವರಿಗೆ ಏನಾಗಿದೆ? ಅವರು ಆಸ್ಪತ್ರೆಗೆ ಏಕೆ ದಾಖಲಾಗಿದ್ದಾರೆ ಎಂಬ ಆತಂಕ ಅವರ ಅಭಿಮಾನಿ ವಲಯ ಹಾಗೂ ಆಪ್ತರಲ್ಲಿ ಕಾಡತೊಡಗಿದೆ. ಆದರೆ, ಈ ಬಗ್ಗೆ ಈಗ ಸ್ವತಃ ಜಗ್ಗೇಶ್‌ ಅವರೇ ಟ್ವೀಟ್‌ ಮಾಡಿದ್ದು, ತಮಗೆ ಯಾವ ಅನಾರೋಗ್ಯ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ಜಗ್ಗೇಶ್‌ ಅವರು ಆಸ್ಪತ್ರೆಯೊಂದರಲ್ಲಿ ದಾಖಲಾಗಿರುವ ಬಗ್ಗೆ ಫೋಟೊಗಳು ಈಗ ಹರಿದಾಡಿರುವುದು ಕೆಲ ಕಾಲ ಆತಂಕಕ್ಕೆ ಕಾರಣವಾಗಿತ್ತು. ಆದರೆ, ತಮ್ಮ ಸಿಟಿ ಸ್ಕ್ಯಾನ್‌ ಮಾಡುತ್ತಿರುವ ಫೋಟೊವನ್ನು ಜಗ್ಗೇಶ್‌ ಅವರೇ ಸೋಷಿಯಲ್‌ ಮೀಡಿಯಾ (Social Media) “ಎಕ್ಸ್‌” ಮೂಲಕ ಪೋಸ್ಟ್‌ ಮಾಡಿದ್ದಾರೆ. ತಮಗಾಗಿರುವ ಆರೋಗ್ಯ ಸಮಸ್ಯೆ ಬಗ್ಗೆಯೂ ಬರೆದುಕೊಂಡಿದ್ದಾರೆ.

ಎಲ್ 4 ಮತ್ತು ಎಲ್ 5 ಕಂಪ್ರೆಶನ್‌ನಿಂದ ಬಳಲುತ್ತಿರುವುದಾಗಿ ಜಗ್ಗೇಶ್‌ ಬರೆದುಕೊಂಡಿದ್ದಾರೆ. ಹೀಗಾಗಿ ತಮಗೆ ಯಾವ ಕಾರ್ಯದಲ್ಲಿಯೂ ತೊಡಗಿಸಿಕೊಳ್ಳಲು ಆಗುತ್ತಿಲ್ಲ. ತಮಗೆ ಬೆಡ್‌ ರೆಸ್ಟ್‌ ಮಾಡಲು ವೈದ್ಯರು ಸಲಹೆ ನೀಡಿದ್ದಾರೆ ಎಂದೂ ಜಗ್ಗೇಶ ಬರೆದುಕೊಂಡಿದ್ದಾರೆ.

ರಾಜ್ಯದಲ್ಲಿ ಕಾವೇರಿ ಜಲ ವಿವಾದಕ್ಕೆ ಸಂಬಂಧಪಟ್ಟಂತೆ ಭಾರಿ ಹೋರಾಟಗಳು ನಡೆಯುತ್ತಿವೆ. ಇದಕ್ಕೆ ಕನ್ನಡ ಚಲನಚಿತ್ರರಂಗದವರು ಭಾಗಿಯಾಗುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿದ್ದವು. ಕೊನೆಗೆ ಶುಕ್ರವಾರ ನಡೆದ ಕರ್ನಾಟಕ ಬಂದ್‌ ಪ್ರಯುಕ್ತ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಮ್ಮಿಕೊಂಡಿದ್ದ ಪ್ರತಿಭಟನೆಗೆ ನಟರಾದ ಶಿವರಾಜಕುಮಾರ್‌, ದರ್ಶನ್‌, ದ್ರುವ ಸರ್ಜಾ, ವಿಜಯ್‌ ರಾಘವೇಂದ್ರ, ಶ್ರೀ ಮುರುಳಿ, ವಸಿಷ್ಠ ಸಿಂಹ, ಚಿಕ್ಕಣ್ಣ ಸೇರಿದಂತೆ ಹಲವರು ಭಾಗಿಯಾಗಿದ್ದರು. ಆದರೆ, ರಾಜ್ಯಸಭಾ ಸದಸ್ಯರೂ ಆಗಿರುವ ನಟ ಜಗ್ಗೇಶ್‌ ಈಚೆಗೆ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ.

MP Navarasanayaka Jaggesh falls ill
ಈ ಬಗ್ಗೆ ಈ ಬಗ್ಗೆ ಸ್ಪಷ್ಟನೆ ನೀಡುವ ಸಂಬಂಧ ಜಗ್ಗೇಶ್‌ ಅವರು ಫೋಟೊಗಳನ್ನು ಅಪ್ಲೋಡ್‌ ಮಾಡುವ ಮೂಲಕ ಟ್ವೀಟ್‌ ಮಾಡಿದ್ದು, ತಮಗಾಗಿರುವ ತೊಂದರೆಯನ್ನು ಹೇಳಿಕೊಂಡಿದ್ದಾರೆ. ಈ ಕಾರಣಕ್ಕಾಗಿಯೇ ತಾವು ಕಾವೇರಿ ಹೋರಾಟದಲ್ಲಿಯೂ ಭಾಗಿಯಾಗಲು ಆಗುತ್ತಿಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ.

ಜಗ್ಗೇಶ್‌ ಟ್ವೀಟ್‌ನಲ್ಲೇನಿದೆ?
“L4L5 compression ಆಗಿ ನಡೆದಾಡಲು ಕಷ್ಟವಾಗಿ ಯಾವ ಕಾರ್ಯದಲ್ಲೂ ಭಾಗಿಯಾಗಲು ಸಾಧ್ಯವಾಗಲಿಲ್ಲ! 2 ವಾರ ಫಿಸಿಯೋಥೆರಪಿ ಚಿಕಿತ್ಸೆ ಹಾಗೂ ಬೆಡ್‌ ರೆಸ್ಟ್‌ ಕಡ್ಡಾಯ ಎಂದು ವೈದ್ಯರು ಸಲಹೆ ನೀಡಿದ್ದಾರೆ. ನಿಮ್ಮ ಮಾಹಿತಿಗಾಗಿ ಧನ್ಯವಾದ” ಜಗ್ಗೇಶ್‌ ಬರೆದುಕೊಂಡಿದ್ದಾರೆ.

ಏನಿದು ಸಮಸ್ಯೆ?
ಎಲ್ 4 ಮತ್ತು ಎಲ್ 5 ಸೊಂಟದ ಬೆನ್ನುಮೂಳೆಯ ಎರಡು ಕಶೇರುಕಗಳಾಗಿವೆ. ಇಂಟರ್ವರ್ಟೆಬ್ರಲ್ ಡಿಸ್ಕ್, ಕೀಲುಗಳು, ನರಗಳು ಮತ್ತು ಮೃದು ಅಂಗಾಂಶಗಳೊಂದಿಗೆ ಎಲ್ 4-ಎಲ್ 5 ಬೆನ್ನುಮೂಳೆಯ ಚಲನೆ ವಿಭಾಗವು ದೇಹದ ಮೇಲ್ಭಾಗಕ್ಕೆ ಬಲವನ್ನು ನೀಡುವುದು ಮತ್ತು ಇತರ ಕಡೆ ಕಾಂಡದ ಚಲನೆಯನ್ನು ಸುಗಮಗೊಳಿಸುವುದು ಸೇರಿದಂತೆ ವಿವಿಧ ಕಾರ್ಯ ಚಟುವಟಿಕೆಯನ್ನು ಅನುಕೂಲ ಮಾಡಿಕೊಡುತ್ತದೆ. ಹೀಗಾಗಿ ಇದಕ್ಕೆ ಯಾವುದೇ ಒತ್ತಡದ ಇಲ್ಲವೇ ಭಾರ ಆಗುವಂತಹ ಕೆಲಸವನ್ನು ಮಾಡಲಾಗುವುದಿಲ್ಲ. ಇದು ಬೆನ್ನುಮೂಳೆಗೆ ಸಂಬಂಧಿಸಿದ ಸಮಸ್ಯೆಯಾಗಿದ್ದು, ವಯಸ್ಸಿಗೆ ಸಂಬಂಧಿಸಿದಂತೆ ಸವಕಲು ಉಂಟಾಗಿ ಬರುತ್ತದೆ.

ಈಚೆಗೆ ಬಿಡುಗಡೆಯಾದ ತೋತಾಪುರಿ 2 ಟ್ರೈಲರ್‌
ನವರಸ ನಾಯಕ ಜಗ್ಗೇಶ್‌ (navarasanayaka Jaggesh) ಅಭಿನಯದ ತೋತಾಪುರಿ ಚಿತ್ರದ ಮುಂದುವರಿದ ಭಾಗ ತೋತಾಪುರಿ -2 ಟ್ರೈಲರ್‌ ಗೌರಿ ಗಣೇಶ ಹಬ್ಬದಂದು ಬಿಡುಗಡೆಯಾಗಿದೆ. ವಿಜಯಪ್ರಸಾದ್ ನಿರ್ದೇಶನದಲ್ಲಿ (Dolly Dhananjay) ಮೂಡಿಬಂದಿರುವ ಈ ಚಿತ್ರವನ್ನು ಸುರೇಶ್ ಆರ್ಟ್ಸ್, ಮೋನ್ ಫ್ಲಿಕ್ಸ್ ಸ್ಟುಡಿಯೋಸ್ ಮೂಲಕ‌ ಕೆ.ಎ. ಸುರೇಶ್ ಅವರು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಟ್ರೈಲರ್‌ಅನ್ನು (Thothapuri 2 Trailer) ಹ್ಯಾಟ್ರಿಕ್‌ ಹೀರೊ ಶಿವರಾಜ್‌ಕುಮಾರ್‌ (Shivarajkumar) ಅವರು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಸಾಥ್‌ ಕೊಟ್ಟಿದ್ದಾರೆ.

Nimma Suddi
";