This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Entertainment News

ರಶ್ಮಿಕಾ ಬರ್ತ್​ಡೇ ಬಗ್ಗೆ ಹೊಸ ಅಪ್​ಡೇಟ್ , ಹುಟ್ಟಿದ ದಿನವೇ ವಿಜಯ್ ಸಿನಿಮಾ ರಿಲೀಸ್​; ಅಬು ಧಾಬಿಯಲ್ಲಿ ಸೆಲೆಬ್ರೇಷನ್?

ರಶ್ಮಿಕಾ ಬರ್ತ್​ಡೇ ಬಗ್ಗೆ ಹೊಸ ಅಪ್​ಡೇಟ್ , ಹುಟ್ಟಿದ ದಿನವೇ ವಿಜಯ್ ಸಿನಿಮಾ ರಿಲೀಸ್​; ಅಬು ಧಾಬಿಯಲ್ಲಿ ಸೆಲೆಬ್ರೇಷನ್?

‘ನಾವಿಬ್ಬರೂ ಬೆಸ್ಟ್ ಫ್ರೆಂಡ್ಸ್’ ಎಂದು ಹೇಳಿಕೊಳ್ಳುತ್ತಲೇ ಬರುತ್ತಿದ್ದು, ರಶ್ಮಿಕಾ ಮಂದಣ್ಣ ಅವರು ಏಪ್ರಿಲ್ 5ರಂದು ಬರ್ತ್​ಡೇ ಆಚರಿಸಿಕೊಳ್ಳುತ್ತಿದ್ದಾರೆ. ಅದೇ ದಿನ ವಿಜಯ್ ದೇವರಕೊಂಡ ನಟನೆಯ ‘ಫ್ಯಾಮಿಲಿ ಸ್ಟಾರ್’ ಸಿನಿಮಾ ಕೂಡ ರಿಲೀಸ್ ಆಗುತ್ತಿದೆ. ಈಗ ರಶ್ಮಿಕಾ ಬರ್ತ್​ಡೇ ಬಗ್ಗೆ ಹೊಸ ಅಪ್​ಡೇಟ್ ಒಂದು ಸಿಕ್ಕಿದೆ.ರಶ್ಮಿಕಾ ಮಂದಣ್ಣ ಅವರು ಸದ್ಯ ಅಬು ಧಾಬಿಯಲ್ಲಿ ಇದ್ದಾರೆ. ಇದರ ವಿಡಿಯೋನ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.

‘ನನ್ನ ಬರ್ತ್​ಡೇ ವೀಕ್’ ಎಂದು ಅವರು ವಿಡಿಯೋಗೆ ಕ್ಯಾಪ್ಶನ್ ನೀಡಿದ್ದಾರೆ. ಏಪ್ರಿಲ್ 3ರಂದೇ ವಿಜಯ್ ಅವರು ಇಲ್ಲಿಗೆ ತೆರಳಿದ್ದಾರೆ ಎಂದು ವರದಿ ಆಗಿದೆ. ರಶ್ಮಿಕಾ ಸದ್ಯ ಅಬು ಧಾಬಿಯಲ್ಲಿರುವ ಸರ್ ಬನಿಯಾಸ್ ಐಸ್​ಲ್ಯಾಂಡ್​ನಲ್ಲಿದ್ದಾರೆ. ವಿಜಯ್ ದೇವರಕೊಂಡ ಕೂಡ ಇಲ್ಲಿಗೆ ತೆರಳಲಿದ್ದಾರೆ ಎನ್ನಲಾಗಿದೆ.ಇಂದು (ಏಪ್ರಿಲ್ 4) ವಿಜಯ್ ದೇವರಕೊಂಡ ಅವರು ಅಬು ಧಾಬಿಗೆ ತೆರಳೋ ಸಾಧ್ಯತೆ ಇದೆ. ಅಲ್ಲಿ ಅವರು ರಶ್ಮಿಕಾ ಜೊತೆಗೂಡಿ ಹುಟ್ಟುಹಬ್ಬ ಆಚರಿಸಲಿದ್ದಾರೆ ಎಂದು ವರದಿ ಆಗಿದೆ. ಆದರೆ, ಯಾವುದೂ ಖಚಿತ ಇಲ್ಲ. ಮೃಣಾಲ್ ಠಾಕೂರ್ ಜೊತೆ ನಟಿಸಿದ ‘ಫ್ಯಾಮಿಲಿ ಸ್ಟಾರ್’ ಸಿನಿಮಾ ಕೂಡ ಏಪ್ರಿಲ್ 5ಕ್ಕೆ ರಿಲೀಸ್ ಆಗಲಿದೆ.

ಸೋಶಿಯಲ್ ಮೀಡಿಯಾದಲ್ಲಿ ಇಬ್ಬರೂ ಫೋಟೋಗಳನ್ನು ಬೇರೆ ಬೇರೆ ಸಂದರ್ಭದಲ್ಲಿ ಹಂಚಿಕೊಳ್ಳುತ್ತಾರೆ. ಇದನ್ನು ಫ್ಯಾನ್ಸ್ ಸುಲಭದಲ್ಲಿ ಕಂಡು ಹಿಡಿಯುತ್ತಾರೆ.ವಿಜಯ್ ದೇವರಕೊಂಡ ಅವರು ‘ಫ್ಯಾಮಿಲಿ ಸ್ಟಾರ್’ ಬಳಿಕ ‘VD 12’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಳ್ಳಲಿದ್ದಾರೆ. ರಶ್ಮಿಕಾ ಮಂದಣ್ಣ ಅವರು ‘ಪುಷ್ಪ 2’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ನಾಳೆ ಚಿತ್ರದ ಬಗ್ಗೆ ಅಪ್​ಡೇಟ್ ಸಿಗೋ ಸಾಧ್ಯತೆ ಇದೆ. ರಶ್ಮಿಕಾ ಲುಕ್ ರಿವೀಲ್ ಆಗಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ.

ಈ ಸಿನಿಮಾ ಹಿಟ್ ಆದರೆ ವಿಜಯ್ ದೇವರಕೊಂಡ ಅವರು ಇದನ್ನು ಕೂಡ ಅಲ್ಲಿಯೇ ಸಂಭ್ರಮಿಸಲಿದ್ದಾರೆ.ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮೊದಲ ಬಾರಿಗೆ ಒಂದಾಗಿದ್ದು ‘ಗೀತ ಗೋವಿಂದಂ’ ಸಿನಿಮಾ ಸಂದರ್ಭದಲ್ಲಿ. ಈ ಚಿತ್ರದಲ್ಲಿ ಇವರ ಕೆಮಿಸ್ಟ್ರಿ ಕೆಲಸ ಮಾಡಿತ್ತು. ಇವರನ್ನು ಅಭಿಮಾನಿಗಳು ಸಖತ್ ಇಷ್ಟಪಟ್ಟರು. ಆ ಬಳಿಕ ವಿಜಯ್ ಹಾಗೂ ರಶ್ಮಿಕಾ ‘ಡಿಯರ್ ಕಾಮ್ರೇಡ್’ ಸಿನಿಮಾದಲ್ಲಿ ನಟಿಸಿದರು. ಈ ಚಿತ್ರ ಹೇಳಿಕೊಳ್ಳುವಂಥ ಗೆಲುವು ಕಂಡಿಲ್ಲ. ಆ ಬಳಿಕ ಇವರು ಅನೇಕ ಕಡೆಗಳಲ್ಲಿ ಒಟ್ಟಾಗಿ ಸುತ್ತಾಟ ನಡೆಸಿದ್ದು ಇದೆ. ವಿಯೆಟ್ನಾಂ, ಮಾಲ್ಡೀವ್ಸ್​ಗೆ ಈ ಜೋಡಿ ಒಟ್ಟಾಗಿ ಪ್ರವಾಸ ಮಾಡಿದ್ದರು ಎನ್ನಲಾಗಿದೆ.

";