LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಅಷ್ಟೆಲ್ಲ ಬಟ್ಟೆಯಿದ್ರೂ ಗಿಲ್ಲಿ ನಟ ಬನಿಯನ್‌ನಲ್ಲೇ ಓಡಾಡೋದು ಯಾಕೆ?

ಬಿಗ್‌ ಬಾಸ್‌ ಕನ್ನಡ 12 ಶೋನಲ್ಲಿ ಗಿಲ್ಲಿ ನಟ ಯಾವಾಗಲೂ ಟ್ರ್ಯಾಕ್‌ ಪ್ಯಾಂಟ್‌ ಹಾಗೂ ಬನಿಯನ್‌ ಹಾಕಿಕೊಂಡು ಇರುತ್ತಾರೆ. ಅಶ್ವಿನಿಯಿಂದ ಹಿಡಿದು, ಧ್ರುವಂತ್‌ವರೆಗೆ ಅನೇಕರು ಅವರಿಗೆ ಬಟ್ಟೆ ಕಳಿಸಿದ್ದರು. ಎರಡು ವಾರಗಳಿಂದ ಅವರಿಗೆ ಬಕೆಟ್‌ಗಟ್ಟಲೇ ಬಟ್ಟೆ ಬರುತ್ತಿದೆ, ಆದರೆ ಅವರು ಅದನ್ನು ಹಾಕಿಕೊಳ್ತಿಲ್ಲ.

ಮ್ಯಾಕ್ಸ್‌ ಮಂಜು ಅವರು ಗಿಲ್ಲಿ ನಟನ ಬಟ್ಟೆಗಳನ್ನು ನೋಡಿದ್ದಾರೆ. ಇಷ್ಟೆಲ್ಲ ಚೆನ್ನಾಗಿ ಬಟ್ಟೆ ಇದ್ದರೂ ಕೂಡ ಹಾಕಿಕೊಳ್ತಿಲ್ಲ ಎಂದು ಮಂಜು ಅವರು ಪ್ರಶ್ನೆ ಮಾಡಿದ್ದಾರೆ. ಗಿಲ್ಲಿ ಮಂಜು ಅವರ ಬಾಸ್ಕೆಟ್‌ನಲ್ಲಿರುವ ಬಟ್ಟೆ, ಶೂಗಳನ್ನು ಹೊರಗಡೆ ತೆಗೆದು ತೋರಿಸಿದ್ದಾರೆ.

ಅಮಾಯಕ, ಬಡವ ಎಂದು ಮ್ಯಾಕ್ಸ್‌ ಮಂಜು, ಧ್ರುವಂತ್‌ ಹೇಳಿದ್ದಾರೆ. ಇಲ್ಲಿ ನೋಡಿ ಎಂದು ಮಂಜು ಅವರು ಗಿಲ್ಲಿ ನಟನ ಬಟ್ಟೆಗಳನ್ನು ತೆಗೆದು ಎಲ್ಲರಿಗೆ ತೋರಿಸಿದ್ದಾರೆ. 30 ರೂಪಾಯಿ ಚಡ್ಡಿ ಹಾಕಿಕೊಂಡು ಓಡಾಡ್ತಿದ್ದೀಯಾ, ಬನಿಯನ್‌ ಹಾಕಿಕೊಂಡು ತಿರುಗಾಡುತ್ತಿದ್ದೀಯಾ ಎಂದು ಮಂಜು ಕೂಗಾಡಿದ್ದಾರೆ. ರಘು ಅವರು 50000 ರೂಪಾಯಿ ಬಟ್ಟೆ ಕಳಿಸಿದ್ದಾರೆ ಎಂದಿದ್ದಾರೆ. ಬಟ್ಟೆ ಹಾಕಿದರೆ ದೃಷ್ಟಿ ಆಗುತ್ತದೆ ಎಂದು ಮಂಜು ಹೇಳಿದ್ದಾರೆ.

ಪ್ರೀತಿಯಿಂದ ಕಳಿಸಿದ್ದಾರೆ, ಆದರೆ ನೀನು ಹಾಕಿಕೊಳ್ತಿಲ್ಲ. ಚಿಕ್ಕಪೇಟೆಯಲ್ಲಿ ಸೆಕೆಂಡ್ಸ್‌ಗೆ ಮಾರುತ್ತೀಯಾ ಎಂದು ಪ್ರಶ್ನೆ ಮಾಡಿದ್ದಾರೆ. ಇದಾದ ಬಳಿಕ ರಘು, ಮಂಜು ಅವರು ಬಟ್ಟೆಯನ್ನು ತಗೊಂಡು ಡ್ರಾಯರ್‌ ಒಳಗಡೆ ಹಾಕಿದ್ದಾರೆ.

ನನ್ನ ಹತ್ರ ಬಟ್ಟೆ ಇಲ್ಲ, ಅದನ್ನೇ ರಿಪೀಟ್‌ ಹಾಕುತ್ತಿದ್ದೇನೆ, ನನಗೆ ಬಟ್ಟೆ ಕೊಟ್ಟರೆ ದಿನಕ್ಕೊಂದು ಹಾಕುವೆ ಎಂದು ಮಾಳು ನಿಪನಾಳ ಅವರು ಹೇಳಿದ್ದಾರೆ.

ಬಿಗ್‌ ಬಾಸ್‌ ಮನೆಯಲ್ಲಿರುವ ಬಹುತೇಕ ಸ್ಪರ್ಧಿಗಳು ಒಮ್ಮೆ ಹಾಕಿದ ಬಟ್ಟೆಯನ್ನು ಮತ್ತೆ ರಿಪೀಟ್‌ ಹಾಕೋದಿಲ್ಲ. ಡಿಸೈನರ್ಸ್‌ಗಳು ಅವರಿಗೆ ಪ್ರತಿ ವಾರ ಬಟ್ಟೆ ಕಳಿಸುತ್ತಾರೆ.

Author
Nimma Suddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಸತಿ ನಿಲಯಗಳಿಗೆ ದೀಡಿರ್ ಬೇಟಿ ನೀಡಿದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಬೆಂಗಳೂರು-ಹಾಸನ-ಮಂಗಳೂರು ಜೋಡಿ ರೈಲು ಹಳಿ ನಿರ್ಮಾಣ; ಸಚಿವ ಎಂ.ಬಿ. ಪಾಟೀಲ ಚರ್ಚೆ!ಸಾರ್ವಜನಿಕ ಹಣದಲ್ಲಿ ಬಾಬರಿ ಮಸೀದಿ ನಿರ್ಮಿಸಲು ಬಯಸಿದ್ದ ನೆಹರೂ ಎಂದ ರಾಜನಾಥ ಸಿಂಗ್ಪುಟಿನ್ ಭೇಟಿ: ಭಾರತದ ಜೊತೆ ಅಣು ಸಹಕಾರ ಒಪ್ಪಂದಕ್ಕೆ ರಷ್ಯಾ ಸಂಪುಟ ಅಸ್ತುಕರ್ನಾಟಕದ ಸಹಕಾರ ಸಂಘಗಳ ಅಭಿವೃದ್ಧಿಗೆ ₹4,164 ಕೋಟಿ: ರಾಜ್ಯಸಭೆಗೆ ಅಮಿತ್ ಶಾ70ಕ್ಕೂ ಹೆಚ್ಚು ಇಂಡಿಗೋ ವಿಮಾನಗಳ ಹಾರಾಟ ರದ್ದು ; ಬೆಂಗಳೂರು, ಮುಂಬೈ ಸೇರಿ ಅನೇಕ ಏರ್ಪೋರ್ಟ್'ನಲ್ಲಿ ಅವ್ಯವಸ್ಥೆದ. ಆಫ್ರಿಕಾ ವಿರುದ್ಧದ 5 ಪಂದ್ಯಗಳ T20I ಸರಣಿಗೆ ಬಲಿಷ್ಠ ಭಾರತ ತಂಡ ಪ್ರಕಟ |IND vs SAಮೊಬೈಲ್‌ಗಳಲ್ಲಿ 'ಸಂಚಾರ ಸಾಥಿ' ಆಯಪ್‌ ಕಡ್ಡಾಯ ಆದೇಶ ಹಿಂಪಡೆದ ಕೇಂದ್ರ ಸರ್ಕಾರವಾಯುಭಾರ ಕುಸಿತ, ಮುಂದಿನ 24 ಗಂಟೆಗಳಲ್ಲಿ ಧಾರಾಕಾರ ಮಳೆ! ಈ ಭಾಗಕ್ಕೆ ಹವಾಮಾನ ಇಲಾಖೆ ಎಚ್ಚರಿಕೆ!ಸಿಬಿಐ ತನಿಖೆ ಆದೇಶ ರದ್ದುಗೊಳಿಸುವಂತೆ ಸುಪ್ರೀಂ ಕೋರ್ಟ್‌ಗೆ ತಮಿಳುನಾಡು ಸರ್ಕಾರ ಮನವಿ