2026 ರ ICC ಪುರುಷರ T20 ವಿಶ್ವಕಪ್ ಟೂರ್ನಮೆಂಟ್ ಫೆಬ್ರವರಿ 7 ರಿಂದ ಮಾರ್ಚ್ 8 ರವರೆಗೆ ಆಯೋಜಿಸಲಾಗುತ್ತದೆ. ಭಾರತ ಮತ್ತು ಶ್ರೀಲಂಕಾದ 8 ಸ್ಟೇಡಿಯಂಗಳಲ್ಲಿ ಒಟ್ಟು 20 ತಂಡಗಳು ಭಾಗವಹಿಸುತ್ತವೆ. 20 ತಂಡಗಳನ್ನ ನಾಲ್ಕು ಗುಂಪುಗಳಾಗಿ (A, B, C, D) ವಿಂಗಡಿಸಲಾಗಿದೆ, ಪ್ರತಿ ಗುಂಪಿನಲ್ಲಿ 5 ತಂಡಗಳಿವೆ. ಮೊದಲು ಗ್ರೂಪ್ ಸ್ಟೇಜ್, ನಂತರ ಸೂಪರ್ ಎಯ್ಟ್, ಸೆಮಿಫೈನಲ್ ಮತ್ತು ಫೈನಲ್ ನಡೆಯಲಿದೆ. ಸೆಮಿಫೈನಲ್‌ಗಳು ಮುಂಬೈ ಮತ್ತು ಕೋಲ್ಕತಾದಲ್ಲಿ ನಡೆಯಲಿವೆ. ಫೈನಲ್ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಒಂದು ವೇಳೆ ಪಾಕಿಸ್ತಾನ ಫೈನಲ್ ತಲುಪಿದರೆ ಕೊಲಂಬೋದಲ್ಲಿ ಟೂರ್ನಮೆಂಟ್ ನಡೆಯಲಿದೆ. ಈ ಟೂರ್ನಮೆಂಟ್ಗೆ ಬ್ರಾಂಡ್ ಅಂಬಾಸಿಡರ್ ಆಗಿ ಟೀಮ್ ಇಂಡಿಯಾ ಸ್ಟಾರ್ ರೋಹಿತ್ ಶರ್ಮಾ ನೇಮಕಗೊಂಡಿದ್ದಾರೆ.
ಗುಂಪುಗಳ ವಿವರ
ಗ್ರೂಪ್ A : ಭಾರತ, ಪಾಕಿಸ್ತಾನ, USA, ನೆದರ್ಲ್ಯಾಂಡ್ಸ್, ನಮೀಬಿಯಾ
ಗ್ರೂಪ್ B: ಆಸ್ಟ್ರೇಲಿಯಾ, ಶ್ರೀಲಂಕಾ, ಜಿಂಬಾಬ್ವೆ, ಐರ್ಲೆಂಡ್, ಓಮನ್
ಗ್ರೂಪ್ C : ಇಂಗ್ಲೆಂಡ್, ವೆಸ್ಟ್ ಇಂಡೀಸ್, ಬಾಂಗ್ಲಾದೇಶ, ನೇಪಾಳ, ಇಟಲಿ
ಗ್ರೂಪ್ D : ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ಅಫ್ಘಾನಿಸ್ತಾನ್, ಕೆನಡಾ, ಯುಎಇ
ಭಾರತ ತಂಡದ ಗ್ರೂಪ್ ಸ್ಟೇಜ್ ವೇಳಾಪಟ್ಟಿ
07 ಫೆಬ್ರವರಿ 2026, 7:00 PM: ಭಾರತ vs USA, ಮುಂಬೈ
12 ಫೆಬ್ರವರಿ 2026, 7:00 PM: ಭಾರತ vs ನಮೀಬಿಯಾ, ದೆಹಲಿ (ಅರುಣ್ ಜೈಟ್ಲಿ ಸ್ಟೇಡಿಯಂ)
15 ಫೆಬ್ರವರಿ 2026, 7:00 PM: ಭಾರತ vs ಪಾಕಿಸ್ತಾನ, ಕೊಲಂಬೋ (ಆರ್. ಪ್ರೇಮದಾಸಾ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ)
18 ಫೆಬ್ರವರಿ 2026, 7:00 PM: ಭಾರತ vs ನೆದರ್ಲ್ಯಾಂಡ್ಸ್, ಅಹಮದಾಬಾದ್ (ನರೇಂದ್ರ ಮೋದಿ ಸ್ಟೇಡಿಯಂ)
ಸೆಮಿಫೈನಲ್
04 ಮಾರ್ಚ್ 2026, 7:00 PM: ಸೆಮಿಫೈನಲ್ 1, ಕೋಲ್ಕತಾ
04 ಮಾರ್ಚ್ 2026, 7:00 PM: ಸೆಮಿಫೈನಲ್ 1, ಪ್ರೇಮದಾಸಾ, ಕೊಲಂಬೋ ( ಪಾಕಿಸ್ಥಾನ ಅರ್ಹತೆ ಪಡೆದರೆ)
05 ಮಾರ್ಚ್ 2026, 7:00 PM: ಸೆಮಿಫೈನಲ್ 2, ಮುಂಬೈ
ಫೈನಲ್
08 ಮಾರ್ಚ್ 2026, 7:00 PM: ಫೈನಲ್, ಪ್ರೇಮದಾಸಾ, ಕೊಲಂಬೋ (ಪಾಕಿಸ್ತಾನ ಅರ್ಹತೆ ಪಡೆದರೆ
08 ಮಾರ್ಚ್ 2026, 7:00 PM: ಫೈನಲ್, ಅಹಮದಾಬಾದ್