This is the title of the web page
This is the title of the web page

Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

State News

ಜಿಲ್ಲೆಯಲ್ಲಿ ರೆಮ್‍ಡೆಸಿವರ್ ಘಟಕ ಸ್ಥಾಪನೆ:ಸಚಿವ ನಿರಾಣಿ*

ನಿಮ್ಮ ಸುದ್ದಿ ಬಾಗಲಕೋಟೆ

ಮುಂದಿನ ದಿನಗಳಲ್ಲಿ ಬಾಗಲಕೋಟೆ ಜಿಲ್ಲೆ ಮುಧೋಳ ನಗರದಲ್ಲಿ ರೆಮ್‍ಡೆಸಿವರ್ ತಯಾರು ಮಾಡುವ ಘಟಕ ಆರಂಭವಾಗಲಿದೆ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವರಾದ ಮುರುಗೇಶ ನಿರಾಣಿ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಾದ್ಯಮದೊಂದಿಗೆ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಸಾಕಷ್ಟು ಪ್ರಮಾಣದ ಔಷಧಗಳು ಬರುತ್ತಿವೆ. ಈಗಾಗಲೇ ಟಾಪ್ 20 ಔಷಧಗಳು ಶಿಪ್ಲಾದಿಂದ ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ರೆಮ್‍ಡಿಸಿವಿರ್ ತಯಾರಿಸುವ ಘಟಕಗಳನ್ನು ಸ್ಥಾಪಿಸಿ ಮುಂದಿನ ದಿನಗಳಲ್ಲಿ ಇಲ್ಲಿಂದಲೇ ರೆಮ್‍ಡಿಸಿವಿರ್ ವಿತರಿಸುವಂತಾಗಲಿದೆ ಎಂದರು.

ಬರುವ ಇಪ್ಪತ್ತರಿಂದ ಮೂವತ್ತು ದಿನಗಳಲ್ಲಿ ರಾ ಮೇಟರಿಯಲ್ ಬಳಸುವ ಮೂಲಕ ತಯಾರಿಸುವ ಯೋಜನೆ ನಮ್ಮಲ್ಲಿಯೆ ಪ್ರಾರಂಭವಾಗಲಿದೆ. ಇದರಿಂದು ರೆಮ್‍ಡಿಸಿವಿರ್ ಕೊರತೆ ಅಭಾವ ನೀಗಲಿದೆ ಎಂದು ತಿಳಿಸಿದರು.

ಕೇಂದ್ರ ಸರಕಾರ ದೇಶದಲ್ಲಿ 20 ಕಡೆಗೆ ಉತ್ಪಾದನೆಗೆ ಅವಕಾಶ ಕಲ್ಪಿಸಿದೆ. ಇದರಲ್ಲಿ ಕರ್ನಾಟಕದಲ್ಲಿ ಎರಡು ಕಡೆಗಳಲ್ಲಿ ಉತ್ಪಾದನೆ ಘಟಕ ಸ್ಥಾಪನೆಗೆ ಅವಕಾಶ ಕಲ್ಪಿಸಲಾಗಿದೆ. ಅದರಲ್ಲಿ ಒಂದು ಬಾಗಲಕೋಟೆ ಜಿಲ್ಲೆಗೆ ಸಿಕ್ಕಿರುವುದು ಸಂತೋಷದ ವಿಷಯವೆಂದರು.

ಹೀಗಾಗಿ ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟಕದಲ್ಲಿ ರೆಮ್‍ಡೆಸಿವರ ಅಭಾವ ಕೊರತೆ ನೀಗಿಸಲಿದೆ. ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಸಾಕಷ್ಟು ಔಷಧಿಗಳು ಬರುತ್ತಿವೆ ಎಂದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೋವಿಡ್ ನಿಯಂತ್ರಣಕ್ಕಾಗಿ ಕಪ್ರ್ಯೂ ಜಾರಿ ಮಾಡಿ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಚಾಚು ತಪ್ಪದೆ ಪಾಲಿಸಬೇಕು. ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸ್ಯಾನಿಟೈಜರ್ ಬಳಕೆ ಮಾಡುವುದು ಮತ್ತು ಕಾಲಕಾಲಕ್ಕೆ ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು.

ರ್ಯಾಪಿಡ್ ಪರೀಕ್ಷೆ ಮತ್ತು ಆರ್‍ಟಿಪಿಎಸ್‍ಆರ್ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು. ಈ ಪರೀಕ್ಷೆಗಳನ್ನು ಮಾಡಿದ ನಂತರ ಅವರ ಐಡಿ ತಯಾರಾಗುತ್ತದೆ. ಆ ರೋಗಿಯ ಹಿನ್ನಲೆ ಮತ್ತು ಕೋವಿಡ್ ಯಾವ ಹಂತದಲ್ಲಿದೆ ಎಂದು ತಿಳಿದು ಆ ರೋಗಿಗೆ ಬೇರೆ ಬೇರೆ ವೈದ್ಯಕೀಯ ಚಿಕಿತ್ಸೆಯನ್ನು ನೀಡಲಾಗುತ್ತದೆ.

ಕೆಲವೂಬ್ಬರು ರೆಮ್‍ಡಿಸಿವಿರ್ ಬೇಕು ನಮಗೆ ಅದು ಸಿಗುತ್ತಿಲ್ಲ ಎಂದು ಹೇಳುತ್ತಾರೆ. ರೆಮ್‍ಡಿಸಿವಿರನ ಕೊರತೆ ಇದ್ದು ಅದನ್ನು ಪೂರೈಸುವ ನಿಟ್ಟಿನಲ್ಲಿ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದರು.

ರೆಮ್‍ಡಿಸಿವಿರ್ ಇದು ಒಂದು ತೆರನಾದ ಡ್ರಗ್ಸ್ ಕೋವಿಡ್ ಕುರಿತಾಗಿ ಗುಣಮುಖವಾದರೆ ಮತ್ತೊಂದು ರೀತಿಯಲ್ಲಿ ಕಿಡ್ನಿ, ಹೃದಯ ಮತ್ತು ಇನ್ನಿತರ ವೈದ್ಯಕೀಯ ಚಿಕಿತ್ಸೆಗಳಿಗೆ ಒಳಪಟ್ಟವರಿಗೆ ಇದು ಪರಿಣಾಮಕಾರಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ವಿದೇಶಗಳಲ್ಲಿ ಇದರ ಬಳಕೆಯನ್ನು ನಿಷೇಧಿಸಲಾಗಿದೆ. ಇದರ ಹಿನ್ನಲೆಯಲ್ಲಿ ಎಲ್ಲರೂ ವಿನಂತಿಸುವುದೆನೆಂದರೆ ವೈದ್ಯಕೀಯ ಸಲಹೆ ಪಡೆಯದೆ ಯಾರೂ ಈ ವ್ಯಾಕ್ಸಿನ್ ತೆಗೆದುಕೊಳ್ಳಬಾರದು ಎಂದರು.

ಇದೆ ರೀತಿ ಆಕ್ಸಿಜನ್ ಕೊರತೆ ಇದ್ದು, ಎಲ್ಲವನ್ನು ಪೂರೈಸಲು ನಾವು ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಆಕ್ಸಿಜನ್ ಅನ್ನು ಬಾಯಿಲರನಲ್ಲಿ ತುಂಬಿಸುವ ವ್ಯವಸ್ಥೆಗಳನ್ನು, ಇನ್ನಿತರ ಕಾರ್ಯಗಳನ್ನು ಮಾಡುವಲ್ಲಿ ಸರಿ ಸುಮಾರು ಮೂರು ತಿಂಗಳ ಕಾಲಾವಕಾಶ ಬೇಕಾಗುತ್ತದೆ. ರಾಮ ಬಲದೋಟಾ ಸ್ಟೀಲ್ ಕಾರ್ಖಾನೆ ಆಕ್ಸಿಜನ್ ಅವಶ್ಯಕತೆ ಇಲ್ಲದ ಕಾರಣಕ್ಕೆ ಸ್ಥಗಿತಗೊಳಿಸಿದ್ದು, ಸಚಿನ ಜಿಂದಾಲ ಅವರು ಆಕ್ಸಿಜನ್ ಪೂರೈಕೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಒಂದು ಕಾರ್ಖಾನೆಯಲ್ಲಿ ಆಕ್ಸಿಜನ್ ತಯಾರಿಸುವ ಘಟಕವನ್ನು ಪ್ರಾರಂಭಿಸಲು ನಾಲ್ಕೈದು ವಸ್ತುಗಳು ನಮ್ಮ ಬಳಿ ಇದ್ದು, ಇನ್ನುಳಿದ ವಸ್ತುಗಳನ್ನು ಬೇರೆ ಕಡೆಯಿಂದ ತರಿಸಬೇಕಾದರೆ ಸುಮಾರು 6 ತಿಂಗಳ ಕಾಲಾವಕಾಶ ಬೇಕಾಗುತ್ತದೆ. ಶೇ.50 ರಷ್ಟು ನಮ್ಮಲ್ಲಿ ಕಚ್ಚಾ ವಸ್ತುಗಳಿದ್ದು, ಆಕ್ಸಿಜನ್ ತಯಾರಿಸಲು ಬೇಕಾದ ಕಚ್ಚಾ ವಸ್ತುಗಳ ಕೊರತೆ ಇದೆ. ಸದ್ಯ ನಮ್ಮ ಬಾಗಲಕೋಟೆ ಜಿಲ್ಲೆಯಲ್ಲಿ ಪೂರೈಸುವಷ್ಟು ಆಕ್ಸಿಜನ್ ತಯಾರಿಸಲಾಗುತ್ತದೆ ಎಂದರು .

Nimma Suddi
";