This is the title of the web page
This is the title of the web page

Live Stream

November 2024
S M T W T F S
 12
3456789
10111213141516
17181920212223
24252627282930

| Latest Version 9.4.1 |

State News

ವಾಯವ್ಯ ಪದವಿಧರರ, ಶಿಕ್ಷಕರ ಮತಕ್ಷೇತ್ರ

ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ನವೆಂಬರ 6 ಕೊನೆಯ ದಿನ

ನಿಮ್ಮ ಸುದ್ದಿ ಬಾಗಲಕೋಟೆ

ವಿಧಾನ ಪರಿಷತ್ತಿನ ಕರ್ನಾಟಕ ವಾಯವ್ಯ ಪದವಿಧರರ ಮತ್ತು ಶಿಕ್ಷಕರ ಮತಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿಗೆ ನವೆಂಬರ 6 ಕೊನೆಯ ದಿನವಾಗಿದೆ ಎಂದು ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರು ಆಗಿರುವ ವಾಯವ್ಯ ಪದವಿಧರರ ಮತಕ್ಷೇತ್ರದ ಮತದಾರರ ನೋಂದಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಕ್ಟೋಬರ 2, 2021 ರಂದು ಪ್ರಕಟಿಸಲಾದ ಸೂಚನೆಯಲ್ಲಿ ಸಂಬಂಧಿಸಿದ ಪದವಿಧರರ ಮತ್ತು ಶಿಕ್ಷಕರ ಮತಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಅರ್ಹರಿಂದ ಪ್ರತಿಯೊಬ್ಬ ವ್ಯಕ್ತಿಯು ಮತದಾರರ ನೋಂದಣಿ ನಿಯಮಗಳು 1960ರ 3(4) ನಿಯಮದ ಮೇರೆಗೆ 2ನೇ ಅಧಿಸೂಚನೆಯಲ್ಲಿ ಪುನರುದ್ದಿಸಿರುವ ವಾಯವ್ಯ ಮತಕ್ಷೇತ್ರಕ್ಕೆ ನಮೂನೆ 18 ರಲ್ಲಿ ಮತ್ತು ಶಿಕ್ಷಕರ ಮತಕ್ಷೇತ್ರಕ್ಕೆ ನಮೂನೆ 19ರಲ್ಲಿ ಅರ್ಜಿಯನ್ನು ನವೆಂಬರ 6 ಅಥವಾ ಅದಕ್ಕೂ ಮೊದಲು ಮತದಾರರ ನೋಂದಣಾಧಿಕಾರಿಗಳು, ಸಹಾಯಕ ಮತದಾರರ ನದಣಾಧಿಕಾರಿಗಳು, ನಿಯೋಜಿತ ಅಧಿಕಾರಿಗಳ ಕಚೇರಿಗೆ ತಲುಪಿಸಲು ಕರೆ ನೀಡಲಾಗಿತ್ತು.

ಮೇಲೆ‌ ತಿಳಿಸಲಾದ ಎಲ್ಲ ವ್ಯಕ್ತಿಗಳು ತಮ್ಮ‌ ಹೆಸರನ್ನು ಇದುವರೆಗೂ ಸೇರಿಸದೇ ಇದ್ದಲ್ಲಿ ನಿಗದಿತ ನಮೂನೆ 18 ಮತ್ತು 19ರಲ್ಲಿ ನವೆಂಬರ 6 ರೊಳಗಾಗಿ ಅಥವಾ ಅದಕ್ಕೂ ಮುಂಚೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ಬಗ್ಗೆ ಹೆಚ್ಚಿನ ವಿವರವನ್ನು ಮುಖ್ಯ ಚುನಾವಣಾಧಿಕಾರಿಗಳ ವೆಬ್ ಸೈಟ್ www.ceokarnataka.kar.nic.in ನಿಂದ ಪಡೆದುಕೊಳ್ಳಬಹುದಾಗಿದೆ ಎಂದು ಬೆಳಗಾವಿ ಪ್ರದೇಶಿಕ ಆಯುಕ್ತರು ತಿಳಿಸಿದ್ದಾರೆ.

";