This is the title of the web page
This is the title of the web page

Live Stream

July 2024
S M T W T F S
 123456
78910111213
14151617181920
21222324252627
28293031  

| Latest Version 9.4.1 |

Local NewsState News

ಐಬಿಯಲ್ಲಿ ಪಾರ್ಟಿ, ನೋಟಿಸ್

ಐಬಿಯಲ್ಲಿ ಪಾರ್ಟಿ, ನೋಟಿಸ್

ಬಾಗಲಕೋಟೆ

ಜಿಲ್ಲೆಯ ಜಮಖಂಡಿಯ ಐಬಿಯಲ್ಲಿ ಅಧಿಕಾರಿಗಳು ಮದ್ಯ ಸೇವನೆ ಮಾಡಿದ ವಿಡಿಯೊ ವೈರಲ್ ಆಗಿದೆ.

ನೀತಿ ಸಂಹಿತೆ ಜಾರಿಯಲ್ಲಿರುವಾಗ ಅಧಿಕಾರಿಗಳು ಗುರುವಾರ ಮಧ್ಯಾಹ್ನ ಐಬಿಯಲ್ಲಿ ಪಾರ್ಟಿ ಮಾಡಿದ್ದಾರೆ ಎನ್ನಲಾಗಿದೆ. ಸಂಹಿತೆ ಜಾರಿಯಲ್ಲಿರುವಾಗ ಐಬಿಯಲ್ಲಿ ಸಭೆ, ಔತಣಕೂಟಗಳಿಗೆ ನಿಷೇಧ ಹೇರಲಾಗಿದ್ದರೂ ಅಧಿಕಾರಿಗಳು ಗುತ್ತಿಗೆದಾರರೊಂದಿಗೆ ಪಾರ್ಟಿ ನಡೆಸಿದ್ದಾರೆ ಎನ್ನುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

ಜಮಖಂಡಿಯ ಜಿಪಂ ಎಂಜಿನಿಯರಿಂಗ್ ವಿಭಾಗದ ಎಇಇ ಎಂ. ಎಸ್.ನಾಯಕ, ಎಂಜಿನಿಯರ್‌ಗಳಾದ ರಾಮಪ್ಪ ರಾಠೋಡ, ಜಗದೀಶ ನಾಡಗೌಡ, ಗಜಾನನ ಪಾಟೀಲ, ಶ್ರೀಶೈಲ ಹೂಗಾರ ಗುತ್ತಿಗೆದಾರರೊಂದಿಗೆ ಪಾರ್ಟಿ ಮಾಡಿದ್ದಾರೆ ಎನ್ನಲಾದ ವಿಡಿಯೊ ವೈರಲ್ ಆಗಿದೆ.

ಘಟನೆ ಬೆಳಕಿಗೆ ಬರುತ್ತಿದ್ದಂತೆ ಜಿಲ್ಲಾಧಿಕಾರಿ ಕೆ.ಎಂ.ಜಾನಕಿ ಎಂಜಿನಿಯರ್‌ಗಳು, ಐಬಿ ಉಸ್ತುವಾರಿ, ತಹಸೀಲ್ದಾ‌ರ್ ಸದಾಶಿವ ಮುಕ್ಕೋಜಿ ಅವರಿಗೆ ಕಾರಣ ಕೇಳಿ ನೋಟಿಸ್‌ ಜಾರಿ ಮಾಡಿದ್ದಾರೆ. ಘಟನೆ ಬಗ್ಗೆ ಐಬಿ ಸಿಬ್ಬಂದಿಯಿಂದ ವಿವರಣೆ ಪಡೆದು ವರದಿ ಸಲ್ಲಿಸುವಂತೆ ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ ಅವರಿಗೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.