This is the title of the web page
This is the title of the web page

Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

State News

ಕ್ಷೇತ್ರದಾಚೆಯ ಜನ ಸಹ ನನಗೆ ಟಿಕೆಟ್ ಸಿಗಲಿ ಅಂತ ಪ್ರಾರ್ಥಿಸುತ್ತಿದ್ದಾರೆ: ಪ್ರತಾಪ್ ಸಿಂಹ

ಕ್ಷೇತ್ರದಾಚೆಯ ಜನ ಸಹ ನನಗೆ ಟಿಕೆಟ್ ಸಿಗಲಿ ಅಂತ ಪ್ರಾರ್ಥಿಸುತ್ತಿದ್ದಾರೆ: ಪ್ರತಾಪ್ ಸಿಂಹ

ಮೈಸೂರು: ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಟಿಕೆಟ್ ಹಾಲಿ ಸಂಸದ ಪ್ರತಾಪ್ ಸಿಂಹಗೆ ಸಿಗದಿರುವುದು ಹೆಚ್ಚು ಕಡಿಮೆ ಖಚಿತವಾಗಿದೆ. ಪ್ರತಾಪ್ ಅವರಿಗೆ ಆಘಾತ ಮತ್ತು ದುಃಖ ತಡೆದುಕೊಳ್ಳುವುದು ಕಷ್ಟವಾಗುತ್ತಿದೆ ಎಂದು ಮಾಹಿತಿ ತಿಳಿದು ಬಂದಿದೆ.

ಕಳೆದ ರಾತ್ರಿ ಸಾಮಾಜಿಕ ಜಾಲತಾಣವೊಂದರಲ್ಲಿ ತಮ್ಮ ದುಮ್ಮಾನವನ್ನು ಲೈವ್ ಆಗಿ ಹಂಚಿಕೊಂಡ ಪ್ರತಾಪ್ ಇಂದು ಬೆಳಗ್ಗೆ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದರು. ಟಿಕೆಟ್ ತಪ್ಪಿರುವುದು ಇನ್ನೂ ಖಚಿತವಾಗಿಲ್ಲ, ಸಿಈಸಿ ಸಭೆಯಲ್ಲಿದ್ದವರು ಯಾವ ನಿರ್ಧಾರ ತೆಗೆದುಕೊಂಡಿದ್ದಾರೆ ಅನ್ನೋದು ಗೊತ್ತಾಗಿಲ್ಲ. ಆದರೆ ಟಿಕೆಟ್ ಸಿಗಲಿ ಬಿಡಲಿ, ಜನರು ತನ್ನ ಮೇಲಿಟ್ಟಿರುವ ಪ್ರೀತಿ ವಿಶ್ವಾಸಕ್ಕೆ ಆಭಾರಿಯಾಗಿರುವುದಾಗಿ ಅವರು ಹೇಳಿದರು.

ಕೇವಲ ಕೊಡಗು-ಮೈಸೂರು ಭಾಗದ ಜನ ಮಾತ್ರವಲ್ಲ, ಕ್ಷೇತ್ರದಾಚೆಯ ಜನ ಸಹ ಪ್ರತಾಪ್ ಸಿಂಹಗೆ ಟಿಕೆಟ್ ಸಿಗಬೇಕು ಅಂತ ಹಾರೈಸುತ್ತಿದ್ದಾರೆ ಮತ್ತು ಪ್ರಾರ್ಥಿಸುತ್ತಿದ್ದಾರೆ, ತನಗೋಸ್ಕರ ಅವರು ಮಾಡುತ್ತಿರುವ ಪ್ರಚಾರ ಟ್ರೆಂಡಿಂಗ್ ಆಗಿದೆ. ಈ ಪಾಟಿ ಜನರ ಪ್ರೀತಿ ಗಳಿಸಿರುವ ತಾನು ನಿಜಕ್ಕೂ ಭಾಗ್ಯಶಾಲಿ ಎಂದು ಹೇಳಿದರು. ಆದರೆ, ಇದುವರೆಗೆ ಅಧಿಕೃತ ಘೋಷಣೆಯಾಗಿರದ ಕಾರಣ ಟಿಕೆಟ್ ಸಿಗುವ ವಿಶ್ವಾಸವಂತೂ ತನಗಿದೆ ಎಂದು ಸೂಚಿಸಿದರು.

Nimma Suddi
";