ನಟಿ ರಶ್ಮಿಕಾ ಮಂದಣ್ಣ ಅವರು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಅಭಿಮಾನಿ ಬಳಗ ಹೊಂದಿದ್ದು, ಇದಕ್ಕೆ ಕಾರಣ ಆಗಿದ್ದು ಅವರ ಸಿನಿಮಾಗಳು. ಸಾಲು ಸಾಲು ಸಿನಿಮಾಗಳು ಹಿಟ್ ಆಗಿದ್ದರಿಂದ ಅವರ ಖ್ಯಾತಿ ಹೆಚ್ಚಿದೆ.
ಕನ್ನಡ, ತಮಿಳು, ತೆಲುಗು, ಹಿಂದಿ ಭಾಷೆಯಲ್ಲಿ ಅವರಿಗೆ ಫ್ಯಾನ್ಸ್ ಇದ್ದಾರೆ. ಈಗ ಅವರು ಅಟಲ್ ಸೇತು ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಈ ಟ್ವೀಟ್ನ ಪ್ರಧಾನಿ ನರೇಂದ್ರ ಮೋದಿ ರೀಟ್ವೀಟ್ ಮಾಡಿದ್ದಾರೆ.
ಭಾರತದ ಅತ್ಯಂತ ಉದ್ದನೆಯ ಸಮುದ್ರ ಸೇತುವೆ ಎನ್ನುವ ಖ್ಯಾತಿ ಅಟಲ್ ಸೇತುಗೆ ಇದೆ. ಮುಂಬೈ ಹಾಗೂ ನವಿ ಮುಂಬೈನ ಇದು ಕನೆಕ್ಟ್ ಮಾಡುತ್ತದೆ. ಈ ಬಗ್ಗೆ ರಶ್ಮಿಕಾ ಮೆಚ್ಚುಗೆಯ ಮಾತುಗಳನ್ನು ಆಡಿದರು.
‘ಭಾರತ ದೊಡ್ಡದಾಗಿ ಕನಸು ಕಾಣಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದರು. ಆದರೆ, ಏಳೇ ವರ್ಷಗಳಲ್ಲಿ ಈ ದೊಡ್ಡ ಬ್ರಿಡ್ಜ್ ನಿರ್ಮಾಣ ಮಾಡಿದ್ದೇವೆ. ಅಟಲ್ ಸೇತು ಇದು ಕೇವಲ ಸೇತುವೆ ಅಲ್ಲ, ಯುವ ಭಾರತಕ್ಕೆ ಇದು ಗ್ಯಾರಂಟಿ. ಈ ರೀತಿಯ ನೂರು ಅಟಲ್ ಸೇತುವೆ ಸ್ಥಾಪಿಸಬೇಕು ಎಂದರೆ ಅಭಿವೃದ್ಧಿಗೆ ಮತ ಹಾಕಿ’ ಎಂದು ರಶ್ಮಿಕಾ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿರುವ ರಶ್ಮಿಕಾ, ‘ಭಾರತದ ಅತಿ ಉದ್ದನೆಯ ಸಮುದ್ರ ಬ್ರಿಜ್. 22 ಕಿಲೋಮೀಟರ್ ಉದ್ದ ಇದೆ. ಎರಡು ಗಂಟೆಗಳ ಪ್ರಯಾಣ ಈಗ 20 ನಿಮಿಷಗಳಲ್ಲಿ ಮುಗಿಯುತ್ತದೆ. ನಂಬಲೂ ಅಸಾಧ್ಯ. ಕೆಲ ವರ್ಷಗಳ ಹಿಂದೆ ಯಾರೂ ಇದನ್ನು ಊಹಿಸಿಯೂ ಇರಲಿಲ್ಲ’ ಎಂದಿದ್ದಾರೆ ರಶ್ಮಿಕಾ ಎಂದು ಮಾಹಿತಿ ತಿಳಿದು ಬಂದಿದೆ.