ಉನ್ನತ ಶಿಕ್ಷಣ ಇವತ್ತು ಬಹಳ ದುಬಾರಿ. ಉತ್ತಮ ವೃತ್ತಿ ಆರಂಭಿಸಲು ಬಹಳ ಅಗತ್ಯ ಇರುವ ಉನ್ನತ ಶಿಕ್ಷಣವನ್ನು ಹಣವಿಲ್ಲವೆಂಬ ಅಸಹಾಯಕತೆಯಿಂದ ಕೈಬಿಡಲು ಆಗುವುದಿಲ್ಲ. ಸಾಲವಾದರೂ ಸರಿ ಶಿಕ್ಷಣ ಪೂರ್ಣಗೊಳಿಸಬೇಕಾಗುತ್ತದೆ. ಕೇಂದ್ರ ಸರ್ಕಾರ ಇಂಥ ಸಂದರ್ಭಗಳಿಗೆ ಸಹಾಯಕವಾಗುವಂತೆ ಪಿಎಂ ವಿದ್ಯಾಲಕ್ಷ್ಮೀ ಶಿಕ್ಷಣ ಸಾಲ ಯೋಜನೆ ಆರಂಭಿಸಿದೆ ಎಂದು ಮಾಹಿತಿ ತಿಳಿದು ಬಂದಿದೆ.
ಪಿಎಂ ವಿದ್ಯಾಲಕ್ಷ್ಮೀ ಯೋಜನೆ ಅಡಿಯಲ್ಲಿ ಬ್ಯಾಂಕುಗಳಿಂದ ಸಾಲ ಸಿಗುತ್ತದೆ. ಉನ್ನತ ಶಿಕ್ಷಣದ ಕೋರ್ಸ್ ಭಾರತದಲ್ಲಿಯಾದರೆ ಏಳೂವರೆ ಲಕ್ಷ ರೂವರೆಗೂ ಸಾಲ ಪಡೆಯಬಹುದು. ವಿದೇಶಗಳಲ್ಲಿ ಓದುವುದಾದರೆ 15 ಲಕ್ಷ ರೂವರೆಗೆ ಸಾಲ ಕೊಡಲಾಗುತ್ತದೆ.
ವಿದ್ಯಾಲಕ್ಷ್ಮೀ ಶಿಕ್ಷಣ ಸಾಲ ಒದಗಿಸುವ ಬ್ಯಾಂಕುಗಳಿವು
ಬ್ಯಾಂಕ್ ಆಫ್ ಇಂಡಿಯಾ
ಕೆನರಾ ಬ್ಯಾಂಕ್
ಐಡಿಬಿಐ ಬ್ಯಾಂಕ್
ಅಭ್ಯುದಯ ಬ್ಯಾಂಕ್
ಎಕ್ಸಿಸ್ ಬ್ಯಾಂಕ್
ಜಿಪಿ ಪಾರ್ಸಿಕ್ ಬ್ಯಾಂಕ್
ಎಚ್ಡಿಎಫ್ಸಿ ಬ್ಯಾಂಕ್
ಐಸಿಐಸಿಐ ಬ್ಯಾಂಕ್
ದೇನಾ ಬ್ಯಾಂಕ್
ದೊಂಬಿವಿಲಿ ನಗರಿ ಸಹಕಾರಿ ಬ್ಯಾಂಕ್
ಕೋಟಕ್ ಮಹೀಂದ್ರ ಬ್ಯಾಂಕ್
ಅಲಹಾಬಾದ್ ಬ್ಯಾಂಕ್
ಕರ್ಣಾಟಕ ಬ್ಯಾಂಕ್
ಪಂಜಾಬ್ ನ್ಯಾಷನಲ್ ಬ್ಯಾಂಕ್
ವಿದ್ಯಾಲಕ್ಷ್ಮೀ ಶಿಕ್ಷಣ ಸಾಲ ಪಡೆಯಲು ಅರ್ಹತೆ ಏನು?
ಅಭ್ಯರ್ಥಿಯು ಪ್ಲಸ್ 2 ಅಥವಾ ದ್ವಿತೀಯ ಪಿಯು ಮುಗಿಸಿರಬೇಕು. ಪದವಿ, ಮಾಸ್ಟರ್ಸ್ ಇತ್ಯಾದಿ ಕೋರ್ಸ್ಗೆ ಅರ್ಜಿ ಸಲ್ಲಿಸಿರಬೇಕು. ಈ ಯೋಜನೆಗೆ ಅಧಿಕೃತ ವೆಬ್ಸೈಟ್ ಅಭಿವೃದ್ದಿಪಡಿಸಲಾಗಿದೆ. ಅದರ ವಿಳಾಸ ಇಂತಿದೆ: vidyalakshmi.co.in/Students/
ಈ ಪೋರ್ಟಲ್ನಲ್ಲಿ ರಿಜಿಸ್ಟರ್ ಮಾಡಿಕೊಂಡು, ಕಾಮನ್ ಎಜುಕೇಶನ್ ಲೋನ್ ಅಪ್ಲಿಕೇಶನ್ (ಸೆಲಾಫ್) ಅನ್ನು ಭರ್ತಿ ಮಾಡಿ ಸಲ್ಲಿಸಬೇಕು.
ಈ ಯೋಜನೆ ಅಡಿಯಲ್ಲಿ 22 ವಿಧದ ಶಿಕ್ಷಣ ಸಾಲಗಳು ಸಿಗುತ್ತವೆ. 14 ಬ್ಯಾಂಕುಗಳನ್ನು ಈ ಯೋಜನೆಯ ವ್ಯಾಪ್ತಿಗೆ ತರಲಾಗಿದೆ. ಅಂದರೆ ಈ 14 ಬ್ಯಾಂಕ್ಗಳಲ್ಲಿ ಸಾಲ ಪಡೆಯಬಹುದು. ಎಚ್ಡಿಎಫ್ಸಿ ಬ್ಯಾಂಕ್, ಕರ್ಣಾಟಕ ಬ್ಯಾಂಕ್, ಐಸಿಐಸಿಐ, ಎಕ್ಸಿಸ್, ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ಐಡಿಬಿಐ ಬ್ಯಾಂಕ್ ಇದರಲ್ಲಿ ಒಳಗೊಂಡಿವೆ.
2015ರಿಂದ ಚಾಲನೆಯಲ್ಲಿರುವ ಈ ಸ್ಕೀಮ್ನಲ್ಲಿ ಭಾರತದ ಯಾವುದೇ ನಾಗರಿಕರು ಸಾಲ ಪಡೆಯಬಹುದಾಗಿದೆ. ಮನೆಯಲ್ಲಿ ಆರ್ಥಿಕ ಸಂಕಷ್ಟದ ಪರಿಸ್ಥಿತಿ ಇರುವ ವಿದ್ಯಾರ್ಥಿಗಳಿಗೆ ಈ ಸಾಲ ಉಪಯುಕ್ತವಾಗುತ್ತದೆ. ಹಣಕಾಸು ತೊಂದರೆಯಿಂದ ಓದಿಗೆ ತೊಂದರೆ ಆಗುವುದನ್ನು ಇದು ತಪ್ಪಿಸುತ್ತದೆ.