ಬಾಗಲಕೋಟೆ:
ತ್ರೈಮಾಸಿಕ ವಿದ್ಯುತ್ ನಿರ್ವಹಣೆ ಕಾರ್ಯ ಕೈಗೊಳ್ಳುತ್ತಿರುವ ಪ್ರಯುಯಕ್ತ ಸೆಪ್ಟೆಂಬರ್ 9 ರಂದು ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ಬಾಗಲಕೋಟೆ ನಗರ, ಕೊಪ್ಪಳ ಎಲ್ ಐ ಎಸ್ , ಹಳೆ ಬಾಲಕೋಟೆ ಶೀಗಿಕೇರಿ, ನವನಗರ, ನವನಗರ ಯೂನಿಟ್-2, ಕಲಾದಗಿ, ಸಾಲಹಳ್ಳಿ, ಗುಳೆದಗುಡ್ಡ, ಕೆರೂರು, ಬದಾಮಿ, ನೀರಬೂದಿಹಾಳ, ಕುಳಗೇರಿ, ಲೋಕಾಪೂರ, ಹೊಸಕೋಟೆ,ಗಾಮೀಶ ವಿಂಡ್, ಬಾಗಲಕೋಟೆ ಸಿಮೇಂಟ್ಸ್, ದಾಲ್ಮಿಯಾ ಸಿಮೆಂಟ್ಸ್, ಹೇರಕಲ್ ಎಲ್ ಐ ಎಸ್, ಕೇದರನಾಥ ಶುಗರ್ಸ್, ಎಮ್ ಆರ್ ಎನ್ ಶುಗರ್ಸ್, ಶಿವಸಾಗರ ಶುಗರ್ಸ್, ಮಾಲತಿ ರೆಡ್ಡಿ ಸೋಲಾರ, ನಂದಿಕೇಶ್ವರ, ಹಾಲಗೇರಿ, ಶಿರೂರ, ಕಟಗೇರಿ, ಬಂಟನೂರ, ಗದ್ದನಕೇರಿ, ಕಮತಗಿ, ಕಾಟವಾ ಸಿಮೆಂಟ್ಸ್ ಅಕಮಿ ಸೋಲಾರ್ ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.
ಬಂಗಾರಗೊಂಡ 110ಕೆವ್ಹಿ ಉಪಕೇಂದ್ರದಿಂದ ಕೂಡಲ ಸಂಗಮ 110 ಕೆವ್ಹಿ ಉಪ ವಿದ್ಯುತ್ಯ್ ಕೇಂದ್ರದವರೆಗೆ ವಿದ್ಯುತ್ಯ್ ಮಾರ್ಗದ ಗೋಪೂರ ಅಳವಡಿಸುವ ಕಾರ್ಯಕೈಗೊಳ್ಳುವ ಪ್ರಯುಕ್ತ ಸೆ.11 ರಂದು ಬೆಳಿಗ್ಗೆ 8 ರಿಂದ ಸಂಜೆ 6 ರವರೆಗೆ ಗಂಜಿಹಾಳ, ಡೊಮನಾಳ, ಸಂಗಮ ಆರ್/ಸಿ ಎನ್ ಜೆ ವಾಯ್, ಕಟಗೂರ್ ಮತ್ತು ಮ್ಯಾಗೇರಿ ಮಾರ್ಗಗಳಲ್ಲಿ ವಿದ್ಯುತ್ಯ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.