This is the title of the web page
This is the title of the web page

Live Stream

February 2025
S M T W T F S
 1
2345678
9101112131415
16171819202122
232425262728  

| Latest Version 9.4.1 |

Agriculture NewsState News

ಬೆಂಬಲ ಬೆಲೆಯಲ್ಲಿ ಕಡಲೆಕಾಳು ಖರೀದಿ

ಬೆಂಬಲ ಬೆಲೆಯಲ್ಲಿ ಕಡಲೆಕಾಳು ಖರೀದಿ

ನೋಂದಣಿ ಪ್ರಕ್ರಿಯೆ ಪ್ರಾರಂಭ:ಎಡಿಸಿ ಮುರಗಿ

ನಿಮ್ಮ ಸುದ್ದಿ ಬಾಗಲಕೋಟೆ

ಪ್ರಸಕ್ತ ಸಾಲಿನ ಹಿಂಗಾರು ಹಂಗಾಮಿನಲ್ಲಿ ಕೇಂದ್ರ ಸರಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್‌ಎಕ್ಯೂ ಗುಣಮಟ್ಟದ ಕಡಲೆಕಾಳನ್ನು ಪ್ರತಿ ಕ್ವಿಂಟಲ್‌ಗೆ ೫,೧೦೦ ರೂ.ಗಳಂತೆ ಖರೀದಿಸಲು ನೋಂದಣಿ ಪ್ರಕ್ರಿಯೆ ಪ್ರಾರಂಭಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ತಿಳಿಸಿದರು.

ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಬುಧವಾರ ಜರುಗಿದ ಜಿಲ್ಲಾ ಟಾಸ್ಕ್ಪೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನೊಂದಣಿ ಪ್ರಕ್ರಿಯೆ ಪ್ರಾರಂಭಿಸಲಾಗಿದ್ದು, ಏ.೩೦ ಅಂತಿಮ ದಿನವಾಘಿದೆ. ಖರೀದಿ ಪ್ರಕ್ರಿಯೆ ಫೆ.೨೨ರಿಂದ ಮೇ ೧೪ರ ವರೆಗೆ ನಡೆಯುತ್ತದೆ. ಪ್ರತಿ ರೈತರಿಗೆ ಎಕರೆಗೆ ೪ ಕ್ವಿಂಟಲ್‌ನಂತೆ ಗರಿಷ್ಠ ೧೫ ಕ್ವಿಂಟಲ್ ಎಫ್‌ಎಕ್ಯೂ ಗುಣಮಟ್ಟದ ಕಡಲೆಕಾಳು ಖರೀದಿಸಲಾಗುತ್ತಿದೆ ಎಂದು ತಿಳಿಸಿದರು.

ಕೃಷಿ ಇಲಾಖೆಯಿಂದ ನೀಡಿರುವ ರೈತರ ನೊಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ (ಫ್ರುಟ್ಸ್) ಗುರುತಿನ ಸಂಖ್ಯೆ ಮೂಲಕ ನೋಂದಾಯಿತ ರೈತರಿಂದ ಮಾತ್ರ ಖರೀದಿಸಲಾಗುತ್ತಿದೆ. ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದಿAದ ಖರೀದಿಸಲಾಗುತ್ತಿದೆ. ನೊಂದಣಿ ಹಾಗೂ ಖರೀದಿಗೆ ಜಿಲ್ಲೆಯಲ್ಲಿ ೨೨ ಕೇಂದ್ರ ತೆರೆಯಲಾಗಿದೆ ಎಂದು ಹೇಳಿದರು.

ಖರೀದಿ ಕೇಂದ್ರಕ್ಕೆ ಕೃಷಿ ಇಲಾಖೆಯಿಂದ ಗ್ರೇಡರ್ ನೇಮಿಸಿ ಸರಕಾರದ ಮಾರ್ಗಸೂಚಿ ಪಾಲಿಸಬೇಕು. ಖರೀದಿ ಕೇಂದ್ರಗಳಲ್ಲಿ ಮೂಲ ಸೌಕರ್ಯಗಳಾದ ಅಂತರ್‌ಜಾಲ ವ್ಯವಸ್ಥೆ, ಕಂಪ್ಯೂಟರ್, ಪ್ರಿಂಟರ್ ಮತ್ತು ಅದಕ್ಕೆ ಬೇಕಾಗುವ ಇನ್ನಿತರ ಅಗತ್ಯ ಉಪಕರಣ, ಲೇಖನ ಸಾಮಗ್ರಿ ವ್ಯವಸ್ಥೆಯೊಂದಿಗೆ ಕೋವಿಡ್ ನಿಯಮ ಕಡ್ಡಾಯ ಪಾ¯ನೆ ಆಗಬೇಕೆಂದರು.

ಖರೀದಿ ನಂತರ ಪಾವತಿಗೆ ಸರಿಯಾದ ಕ್ರಮ ಕೈಗೊಳ್ಳಬೇಕು. ಆಧಾರ್ ಜೋಡಣೆಯಾದ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕವೇ ಜಮಾ ಆಗುವುದರಿಂದ ಎಚ್ಚರಿಕೆ ವಹಿಸಬೇಕು. ರೈತರ ಹೆಸರಿನಲ್ಲಿ ವರ್ತಕರು ತರುವ ಕಡಲೆಕಾಳನ್ನು ಖರೀದಿಸಂತೆ ಹಾಗೂ ಖರೀದಿ ಸಂಸ್ಥೆಗಳ ಯಾವುದೇ ರೀತಿಯ ದುರುಪಯೋಗ ಆಗದಂತೆ ತಾಲೂಕು ಮಟ್ಟದಲ್ಲಿ ನೋಡಲ್ ಅಧಿಕಾರಿ ನೇಮಿಸಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಆಹಾರ ಇಲಾಖೆಯ ಉಪನಿರ್ದೇಶಕ ಶ್ರೀಶೈಲ ಕಂಕಣವಾಡಿ, ಕೃಷಿ ಮಾರುಕಟ್ಟೆ ಇಲಾಖೆಯ ಸಹಾಯಕ ನಿರ್ದೇಶಕ ಎನ್.ಎ.ಲಕ್ಕುಂಡಿ, ಮಾರ್ಕೆಟ್ ಪೆರಡರೇಷನ್‌ನ ಪ್ರತಿನಿಧಿ ಲಿಂಗರಾಜ ಜಮಖಂಡಿ, ಎಪಿಎಂಸಿ ಕಾರ್ಯದರ್ಶಿ ಜಮಖಂಡಿಯ ಎಸ್.ಎನ್.ಪತ್ತಾರ, ಹುನಗುಂದದ ನದಾಫ್, ಬಾಗಲಕೋಟೆಯ ಉಣ್ಣಿಭಾವಿ, ಬಾದಾಮಿಯ ರಾಠೋಡ ಇತರರು ಇದ್ದರು.

ಖರೀದಿ ಕೇಂದ್ರಗಳ ವಿವರ
ಬೆಂಬಲ ಬೆಲೆಯಲ್ಲಿ ಕಡಲೆಕಾಳು ಖರೀದಿಸಲು ಜಿಲ್ಲೆಯಲ್ಲಿ ೨೨ ಖರೀದಿ ಕೇಂದ್ರ ಸ್ಥಾಪಿಸಲಾಗಿದೆ. ಬಾಗಲಕೋಟೆ ತಾಲೂಕಿನಲ್ಲಿ ಟಿಎಪಿಸಿಎಂಎಸ್ ಬಾಗಲಕೋಟೆ, ಪಿಕೆಪಿಎಸ್ ಹಳ್ಳೂರ, ಅಚನೂರ, ಬೆನಕಟ್ಟಿ, ಹುನಗುಂದ ತಾಲೂಕಿನ ಪಿಕೆಪಿಎಸ್ ಇಳಕಲ್, ನಂದವಾಡಗಿ, ಹಿರೇಆದಾಪೂರ, ಕೂಡಲಸಂಗಮ, ಕಂದಗಲ್ಲ, ಬೂದಿಹಾಳ, ಕರಡಿ, ಹುನಗುಂದ, ಟಿಎಪಿಸಿಎಂಎಸ್ ಹುನಗುಂದ, ಎಫ್‌ಪಿಓ ಅಮರಾವತಿ, ಸೂಳೇಬಾವಿ, ಮುಗನೂರ, ಪಿಕೆಪಿಎಸ್ ಬಾದಾಮಿ, ಟಿಎಪಿಸಿಎಂಎಸ್ ಬೀಳಗಿ, ಮುಧೋಳ, ಜಮಖಂಡಿ ತಾಲೂಕಿನ ಟಿಎಪಿಸಿಎಂಎಸ್ ಜಮಖಂಡಿ, ಪಿಕೆಪಿಎಸ್ ಸಾವಳಗಿ, ಎಫ್‌ಪಿಓ ತೊದಲಬಾಗಿಯಲ್ಲಿ ತೆರೆಯಲಾಗಿದೆ.

 

 

Nimma Suddi
";