This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Entertainment News

ಪುಷ್ಪ 2’ಸಿನಿಮಾ ಭಾರತದ ಅತ್ಯಂತ ನಿರೀಕ್ಷೆಯ ಸಿನಿಮಾ, ಸದ್ಯಕ್ಕೆ ಸಿನಿಮಾಕ್ಕೆ ಸಂಕಷ್ಟ, ತಂಡ ತೊರೆದ ಪ್ರಮುಖ ತಂತ್ರಜ್ಞ

ಪುಷ್ಪ 2’ಸಿನಿಮಾ ಭಾರತದ ಅತ್ಯಂತ ನಿರೀಕ್ಷೆಯ ಸಿನಿಮಾ, ಸದ್ಯಕ್ಕೆ ಸಿನಿಮಾಕ್ಕೆ ಸಂಕಷ್ಟ, ತಂಡ ತೊರೆದ ಪ್ರಮುಖ ತಂತ್ರಜ್ಞ

ಪುಷ್ಪ 2’ಸಿನಿಮಾ ಭಾರತದ ಅತ್ಯಂತ ನಿರೀಕ್ಷೆಯ ಸಿನಿಮಾ. ಈ ಸಿನಿಮಾದ ಚಿತ್ರೀಕರಣ ಬಹುತೇಕ ಅಂತ್ಯವಾಗಿದ್ದು, ಪೋಸ್ಟ್ ಪ್ರೊಡಕ್ಷನ್ ಕಾರ್ಯ ಪ್ರಾರಂಭವಾಗಿದೆ.

ಇಂಥಹಾ ಮಹತ್ವದ ಸಂದರ್ಭದಲ್ಲಿ ಸಿನಿಮಾದ ಪ್ರಮುಖ ತಂತ್ರಜ್ಞರೊಬ್ಬರು ಸಿನಿಮಾ ತಂಡವನ್ನು ಬಿಟ್ಟು ಹೊರಹೋಗಿದ್ದಾರೆ. ಇದು ‘ಪುಷ್ಪ’ ಚಿತ್ರತಂಡಕ್ಕೆ ಭಾರಿ ದೊಡ್ಡ ಹೊಡೆತ ನೀಡಿದೆ. ಹಠಾತ್ತನೆ ತಂತ್ರಜ್ಞರೊಬ್ಬರು ಹೊರ ಹೋಗಿದ್ದರಿಂದಾಗಿ ಸಿನಿಮಾದ ಬಿಡುಗಡೆ ತಡವಾಗಬಹುದೇ ಎಂಬ ಅನುಮಾನ ಸಹ ಅಭಿಮಾನಿಗಳಲ್ಲಿ ಮೂಡಿದೆ ಎಂದು ಮಾಹಿತಿ ತಿಳಿದು ಬಂದಿದೆ.

ಆಂಟೊನಿ ರುಬೇನ್ ಈ ಹಿಂದೆ ಶಾರುಖ್ ಖಾನ್​ರ ‘ಜವಾನ್’, ‘ವಿಸ್ವಾಸಂ’, ‘ಬಿಗಿಲ್’, ‘ರಾಜಾ ರಾಣಿ’, ‘ತೇರಿ’, ‘ಇರುಂಬು ತುರೈ’ ಇನ್ನೂ ಹಲವು ಸಿನಿಮಾಗಳಿಗೆ ಸಂಕಲನ ಮಾಡಿದ್ದಾರೆ. ಕನ್ನಡದ ‘ಅಯೋಗ್ಯ’, ‘ಜಾಗ್ವಾರ್’ ಸಿನಿಮಾಗಳಿಗೂ ಎಡಿಟಿಂಗ್ ಮಾಡಿದ್ದಾರೆ. ತಮಿಳು, ತೆಲುಗಿನ ಜನಪ್ರಿಯ ಎಡಿಟರ್ ಆಗಿರುವ ಆಂಟೊನಿ ರುಬೇನ್ ಹಲವು ದೊಡ್ಡ ಬಜೆಟ್ ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಹಾಗಾಗಿ ಅವರ ಕೈಯಲ್ಲಿ ಹಲವು ಸಿನಿಮಾಗಳಿವೆ. ಇದರ ನಡುವೆ ‘ಪುಷ್ಪ 2’ ಸಿನಿಮಾ ಚಿತ್ರೀಕರಣ ತಡವಾದ ಕಾರಣ ಆಂಟೊನಿ ರುಬೇನ್, ಅದೇ ಸಮಯಕ್ಕೆ ಬೇರೆ ಸಿನಿಮಾಗಳಿಗೆ ಡೇಟ್ಸ್ ಕೊಟ್ಟಿದ್ದರಿಂದ ‘ಪುಷ್ಪ 2’ ಸಿನಿಮಾವನ್ನು ತ್ಯಜಿಸಿ ಹೊರಟಿದ್ದಾರೆ.

‘ಪುಷ್ಪ’ ಸಿನಿಮಾದ ಮೊದಲ ಭಾಗದಲ್ಲಿ ಪ್ರೇಕ್ಷಕರು ಅಲ್ಲು ಅರ್ಜುನ್ ನಟನೆ, ಸುಕುಮಾರ್ ಕತೆ, ಹಿನ್ನೆಲೆ ಸಂಗೀತದ ಜೊತೆಗೆ ಎಡಿಟಿಂಗ್ ಅನ್ನು ಸಹ ಬಹುವಾಗಿ ಮೆಚ್ಚಿಕೊಂಡಿದ್ದರು. ಸಿನಿಮಾದ ಶಾರ್ಪ್​ನೆಸ್​ಗೆ ಕಾರಣವಾಗಿದ್ದು ಎಡಿಟರ್ ನುರಿತ ಎಡಿಟರ್ ಆಂಟೊನಿ ರುಬೇನ್. ಆದರೆ ಈಗ ಆಂಟೊನಿ ರುಬೇನ್ ಪುಷ್ಪ 2 ಚಿತ್ರತಂಡವನ್ನು ಬಿಟ್ಟು ಹೊರನಡೆದಿದ್ದಾರೆ. ಬೇರೆ ಸಿನಿಮಾಗಳಿಗೆ ತಾವು ನೀಡಿದ್ದ ಡೇಟ್ಸ್​​ ಜೊತೆ ‘ಪುಷ್ಪ 2’ ಸಿನಿಮಾದ ಡೇಟ್ಸ್ ಕ್ಲ್ಯಾಷ್ ಆಗುತ್ತಿದ್ದ ಕಾರಣಕ್ಕೆ ಆಂಟೊನಿ ರುಬೇನ್ ಈ ನಿರ್ಧಾರ ತಳೆದಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.

 

";