This is the title of the web page
This is the title of the web page

Live Stream

July 2024
S M T W T F S
 123456
78910111213
14151617181920
21222324252627
28293031  

| Latest Version 9.4.1 |

National NewsPolitics News

ರಾಹುಲ್ ಗಾಂಧಿ ‘ಭಾರತ ಐಕ್ಯತಾ ಜೋಡೊ ಯಾತ್ರೆ’ ಮತ್ತು ‘ನ್ಯಾಯ್‌’ ಯಾತ್ರೆ ಹೆಜ್ಜೆಗೆ ಮಿಡಿದ ‘ಹಿಂದಿ’ ಹೃದಯ

ರಾಹುಲ್ ಗಾಂಧಿ ‘ಭಾರತ ಐಕ್ಯತಾ ಜೋಡೊ ಯಾತ್ರೆ’ ಮತ್ತು ‘ನ್ಯಾಯ್‌’ ಯಾತ್ರೆ ಹೆಜ್ಜೆಗೆ ಮಿಡಿದ ‘ಹಿಂದಿ’ ಹೃದಯ

ದೆಹಲಿ: ಕೇಂದ್ರದ ಎನ್‌ಡಿಎ ಸರಕಾರದ ದಮನಕಾರಿ ನೀತಿಗಳ ವಿರುದ್ಧ ಧ್ವನಿ ಎತ್ತಿ, ಆ ಬಗ್ಗೆ ಜನರಲ್ಲಿಜಾಗೃತಿ ಮೂಡಿಸುವುದು ಹಾಗೂ ಪಕ್ಷ ಸಂಘಟಿಸುವ ಉದ್ದೇಶದಿಂದ ಕಾಂಗ್ರೆಸ್‌ ಹಿರಿಯ ನಾಯಕ ರಾಹುಲ್‌ ಗಾಂಧಿ ದೇಶಾದ್ಯಂತ ಕೈಗೊಂಡ ಎರಡು ಯಾತ್ರೆಗಳು ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಪ್ರಭಾವವನ್ನು ಹೆಚ್ಚಿಸಿಕೊಳ್ಳಲು ಸಹಕಾರಿಯಾಗಿವೆ ಎಂದು ಮಾಹಿತಿ ತಿಳಿದು ಬಂದಿದೆ.

ಲೋಕಸಭಾ ಚುನಾವಣೆಯ ಫಲಿತಾಂಶವನ್ನು ಅವಲೋಕಿಸಿದರೆ ‘ಭಾರತ ಐಕ್ಯತಾ ಜೋಡೊ ಯಾತ್ರೆ’ ಮತ್ತು ‘ನ್ಯಾಯ್‌’ ಯಾತ್ರೆಗಳು ಸಾಗಿದ ರಾಜ್ಯಗಳಲ್ಲಿ ಕಾಂಗ್ರೆಸ್‌ ಗಳಿಸಿರುವ ಸ್ಥಾನಗಳು ಮತ್ತು ಮತ ಗಳಿಕೆ ಪ್ರಮಾಣ ಗಮನಿಸಿದರೆ ಭಾರತ್‌ ಜೋಡೋ ಯಾತ್ರೆಗಳು ಸ್ವಲ್ಪ ಮಟ್ಟಿಗೆ ಪಕ್ಷವನ್ನು ಜನರೊಂದಿಗೆ ಬೆಸೆಯುವಲ್ಲಿ ಯಶಸ್ವಿಯಾಗಿರುವ ಅಂಶ ವೇದ್ಯವಾಗುತ್ತದೆ.

ಅಂದರೆ 2019ರ ಲೋಕಸಭಾ ಚುನಾವಣೆಯಲ್ಲಿ ಹಿಂದಿ ಪ್ರಾಬಲ್ಯದ ರಾಜ್ಯಗಳಲ್ಲೂ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ವಿಫಲವಾಗಿದ್ದ ಕಾಂಗ್ರೆಸ್‌ ಈ ಬಾರಿ ಉತ್ತಮ ಸಾಧನೆಯನ್ನೇ ಮಾಡಿದೆ.

ಆ ಅವಧಿಯಲ್ಲಿ ಗುಂಡ್ಲುಪೇಟೆಯಿಂದ 22 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಯಾತ್ರೆ ಸಂಚರಿಸಿತ್ತು. ಅದು 2023ರ ರಾಜ್ಯ ವಿಧಾನಸಭಾ ಚುನಾವಣೆಯ ಮೇಲೆ ಪರಿಣಾಮ ಬೀರಿ, ಕಾಂಗ್ರೆಸ್‌ 136 ಸ್ಥಾನಗಳಲ್ಲಿಗೆಲವು ಸಾಧಿಸಲು ಸಹಕಾರಿಯಾಗಿತ್ತು.

‘ಸಾಮಾಜಿಕ ನ್ಯಾಯ’ದ ಹೆಸರಿನಲ್ಲಿ ರಾಹುಲ್‌ ಗಾಂಧಿ ನಡೆಸಿದ ಎರಡನೇ ಹಂತದ ಯಾತ್ರೆ ಸಾಗಿದ ಎಲ್ಲಾರಾಜ್ಯಗಳಲ್ಲೂಪಕ್ಷದ ಪರವಾದ ಭಾರಿ ಅಲೆ ಇಲ್ಲದಿದ್ದರೂ ಸ್ವಲ್ಪ ಮಟ್ಟಿಗೆ ತನ್ನ ವರ್ಚಸ್ಸು ವೃದ್ಧಿಸಿಕೊಳ್ಳಲು ಕಾಂಗ್ರೆಸ್‌ಗೆ ಸಹಕಾರಿಯಾಗಿದೆ.

ಅದರಲ್ಲೂ ವಿಶೇಷವಾಗಿ ಹಿಂದಿ ಭಾಷಿಕ ರಾಜ್ಯಗಳಲ್ಲಿ ಯಾತ್ರೆಗಳು ಸ್ವಲ್ಪ ಮಟ್ಟಿನ ಹೆಜ್ಜೆ ಗುರುತು ಮೂಡಿಸುವಲ್ಲಿಯಶಸ್ವಿಯಾಗಿವೆ. ಮೊದಲ ಯಾತ್ರೆ ಸಾಗಿದ ಉತ್ತರಪ್ರದೇಶ, ರಾಜಸ್ಥಾನ, ಹರಿಯಾಣ ಹಾಗೂ ಮಹಾರಾಷ್ಟ್ರದಲ್ಲಿ ಪಕ್ಷಕ್ಕೆ ದೊಡ್ಡ ಮಟ್ಟದಲ್ಲಿ ನೆರವಾಗಿದೆ.