ನಟಿ ರಶ್ಮಿಕಾ ಮಂದಣ್ಣ ಅವರ ಕಾಲ್ಶೀಟ್ ಪಡೆಯಲು ಅನೇಕ ನಿರ್ದೇಶಕರು ಹಾಗೂ ನಿರ್ಮಾಪಕರು ಕಾದು ಕುಳಿತಿದ್ದಾರೆ. ಅವರ ಜೊತೆ ಸಿನಿಮಾ ಮಾಡೋದು ಅಷ್ಟು ಸುಲಭವಿಲ್ಲ. ಕಥೆ ಹಾಗೂ ಪಾತ್ರ ಎರಡೂ ಇಷ್ಟ ಆದರೆ ಮಾತ್ರ ಸಿನಿಮಾ ಮಾಡೋಕೆ ಗ್ರೀನ್ ಸಿಗ್ನಲ್ ಕೊಡುತ್ತಾರೆ.
ಇತ್ತೀಚೆಗೆ ವಿಜಯ್ ದೇವರಕೊಂಡ ಸಹೋದರ ಆನಂದ್ ದೇವರಕೊಂಡ ನಟನೆಯ ಸಿನಿಮಾ ‘ಗಂ ಗಂ ಗಣೇಶಾ’ ಈವೆಂಟ್ಗೆ ಅತಿಥಿಯಾಗಿ ತೆರಳಿದ್ದರು. ಈ ವೇಳೆ ರಶ್ಮಿಕಾ ಅವರು ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಇದೇ ವೇಳೆ ಅವರು ‘ಬೇಬಿ’ ಸಿನಿಮಾ ಯಶಸ್ಸಿನ ಬಗ್ಗೆ ಮಾತನಾಡಿದ್ದಾರೆ. ಈ ಚಿತ್ರ ನಿರ್ದೇಶಕ ಸಾಯಿ ರಾಜೇಶ್ ನೀಲಂ ಜೊತೆ ಸಿನಿಮಾ ಮಾಡೋ ಬಯಕೆ ವ್ಯಕ್ತಪಡಿಸಿದ್ದಾರೆ.
‘ನಾನು ಬೇಬಿ ಸಿನಿಮಾ ನೋಡಿ ಕಣ್ಣೀರು ಹಾಕಿದೆ. ಅವರ ಜೊತೆ ಕೆಲಸ ಮಾಡಬೇಕು ಎನ್ನುವ ಬಯಕೆ ಇದೆ. ಸಾಯಿ ರಾಜೇಶ್ ನಿರ್ದೇಶನ ನಿಜಕ್ಕೂ ಮೆಚ್ಚಿಕೊಳ್ಳುವಂಥದ್ದು. ಅವರ ನಿರ್ದೇಶನದಲ್ಲಿ ಒಂದು ಸಂಕೀರ್ಣ ಪಾತ್ರವನ್ನು ಮಾಡುವ ಬಯಕೆ ನನ್ನದು’ ಎಂದಿದ್ದಾರೆ ರಶ್ಮಿಕಾ ಮಂದಣ್ಣ.
ನಿರ್ದೇಶಕರಿಗೆ ಈ ರೀತಿಯ ಮೆಚ್ಚುಗೆ ಸಿಕ್ಕರೆ ಅವರಿಗೆ ಖುಷಿ ಆಗುತ್ತದೆ. ಅಲ್ಲದೆ, ರಾಷ್ಟ್ರ ಮಟ್ಟದಲ್ಲಿ ಖ್ಯಾತಿ ಪಡೆದಿರೋ ರಶ್ಮಿಕಾ ಮಂದಣ್ಣ ಅವರು ಈ ರೀತಿಯ ಕಮೆಂಟ್ ಮಾಡಿದಾಗ ಸಹಜವಾಗಿಯೇ ನಿರ್ದೇಶಕರಿಗೆ ಖುಷಿ ಆಗುತ್ತದೆ. ಹೀಗಾಗಿ ರಶ್ಮಿಕಾ ಅವರು ಬಯಸಿದ ರೀತಿಯಲ್ಲಿ ಸಾಯಿ ರಾಜೇಶ್ ಕಥೆ ಸಿದ್ಧಪಡಿಸುತ್ತಾರಾ ಎನ್ನುವ ಕುತೂಹಲ ಮೂಡಿದೆ.
ಅಚ್ಚರಿ ಎಂದರೆ ರಶ್ಮಿಕಾ ಅವರಿಗೆ ಓರ್ವ ನಿರ್ದೇಶಕರ ಕೆಲಸ ಸಾಕಷ್ಟು ಇಷ್ಟ ಆಗಿದೆ. ಅವರ ಜೊತೆ ಕೆಲಸ ಮಾಡಬೇಕು ಎಂದು ರಶ್ಮಿಕಾ ಬಯಸಿದ್ದಾರೆ.