This is the title of the web page
This is the title of the web page

Live Stream

December 2024
S M T W T F S
1234567
891011121314
15161718192021
22232425262728
293031  

| Latest Version 9.4.1 |

Education NewsLocal NewsPolitics NewsState News

ಜನ ಸೇವೆಯಲ್ಲಿ ಶತಮಾನೋತ್ಸವ ಸಂಭ್ರಮವನ್ನು ಆಚರಿಸುತ್ತಿರುವ ಧಾರವಾಡದ ರೆಡ್ಡಿ ಬ್ಯಾಂಕ್

ಜನ ಸೇವೆಯಲ್ಲಿ ಶತಮಾನೋತ್ಸವ ಸಂಭ್ರಮವನ್ನು ಆಚರಿಸುತ್ತಿರುವ ಧಾರವಾಡದ ರೆಡ್ಡಿ ಬ್ಯಾಂಕ್

ಧಾರವಾಡದ ರೆಡ್ಡಿ ಸಹಕಾರಿ ಬ್ಯಾಂಕಿನ ನೂತನ ಕಟ್ಟಡದ ಉದ್ಘಾಟನೆ ಹಾಗೂ ಶತಮಾನೋತ್ಸವ ಸಮಾರಂಭ ಜರುಗಲಿದ್ದು ತನಿಮಿತ್ಯ ಈ ಕಿರು ಲೇಖನ 

ಭಾರತದ ಇತಿಹಾಸವನ್ನು ಅವಲೋಕಿಸಿದಾಗ ಸಹಕಾರ ತತ್ವವು ನಾಗರೀಕತೆಯಷ್ಟು ಪ್ರಾಚೀನವಾಗಿದೆ. ಮನುಷ್ಯನ ನಾಗರೀಕತೆ ಬೆಳೆದಂತೆಲ್ಲ ಪರಸ್ಪರ ಸಹಕಾರದಿಂದ ಬದುಕುವದು ಆತನಿಗೆ ರಕ್ತಗತವಾಗಿದೆ.

ಆಧುನಿಕ ಸಮಾಜದಲ್ಲಿ ಸಹಕಾರ ತತ್ವವಿಲ್ಲದೆ ಜೀವನ ಸಾಗಿಸುವದನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ ಇಂಥ ಸನ್ನಿವೇಶದಲ್ಲಿ ‘ತಾನು ಎಲ್ಲರಿಗಾಗಿ, ಎಲ್ಲರೂ ತನಗಾಗಿ’ ಇಂದಿನ ಅತ್ಯಂತ ಜರೂರಿಯಾಗಿದೆ

ಭಾರತದ ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರೊತ್ತರ ಘಟನಾವಳಿಗಳನ್ನು ಅವಲೋಕಿಸಿದಾಗ ಸಹಕಾರಿ ಚಳುವಳಿ, ಸಹಕಾರಿ ಸಂಘಸ್ಥೆಗಳು ವ್ಯಾಪಕವಾಗಿ ದೇಶದ ಉದ್ದಗಲಕ್ಕೂ ಬೆಳೆದು ಬಂದುದು, ದೇಶದ ಆರ್ಥಿಕ, ಸಾಮಾಜಿಕ ಅಭಿವೃದ್ಧಿಗೆ ಕೊಡುಗೆ ನೀಡಿದ್ದು ಗೊತ್ತಾಗುತ್ತದೆ.

ಕಳೆದ ಶತಮಾನದ ಕೊನೆಯ ಕಾಲಘಟ್ಟದಲ್ಲಿ ಅಂದರೆ ೯೦ ರ ದಶಕದಲ್ಲಿ ಪ್ರಾರಂಭವಾದ ಉದಾರೀಕರಣ, ಖಾಸಗೀಕರಣ ಹಾಗೂ ಜಾಗತೀಕರಣದ ಆರಂಭದ ವರೆಗೂ ಅನೇಕ ಸಹಕಾರಿ ಸಂಸ್ಥೆಗಳು ರಾಷ್ಟçಮಟ್ಟದಲ್ಲಿ, ಅಂತರಾಷ್ಟ್ರೀಯ ಮಟ್ಟದಲ್ಲಿ ಮುಂಚೂಣಿಯಲ್ಲಿದ್ದುದು ಸ್ಪಷ್ಟವಾಗುತ್ತದೆ.

ಸಹಕಾರಿ ಚಳುವಳಿ ಹಾಗೂ ನಾಯಕತ್ವ ಎರಡೂ ಸಂಗತಿಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಸಹಕಾರಿ ಆಂದೋಲನವು ಪ್ರಮುಖವಾಗಿ ಮಹಾರಾಷ್ಟ್ರ ಗುಜರಾತ, ಕರ್ನಾಟಕಗಳಲ್ಲಿ ಸಫಲವಾದಷ್ಟು ಭಾರತದ ಇತರ ರಾಜ್ಯಗಳಲ್ಲಿ ಕಂಡುಬರುವುದಿಲ್ಲ.

ಕರ್ನಾಟಕದಲ್ಲಿ ಅದರಲ್ಲೂ ಉತ್ತರ ಕರ್ನಾಟಕ ( ಹಿಂದಿನ ಮುಂಬಯಿ ಕರ್ನಾಟಕ)ದಲ್ಲಿ ಯಶಸ್ವಿಯಾದಷ್ಟು ದಕ್ಷಿಣ ಕರ್ನಾಟಕದಲ್ಲಿ ಕಾಣುವುದಿಲ್ಲ.
ಉತ್ತರ ಕರ್ನಾಟಕದ ಅನೇಕ ಸಹಕಾರಿ ಸಂಘ-ಸಂಸ್ಥೆಗಳ ಸ್ಥಾಪನೆ, ವಿಸ್ತರಣೆ ಹಾಗೂ ಅಭಿವೃದ್ಧಿಯ ಹಿಂದೆ ಸ್ವಾತಂತ್ರ ಹೋರಾಟ, ಗಾಂಧೀಜಿಯವರ ತತ್ವಗಳ ಆಳವಡಿಕೆ, ಸಮಾನತೆ, ಕೆಳವರ್ಗದ ಜನರ ಅಭ್ಯುದಯ ಇವು ಪ್ರಮುಖ ಗುರಿಗಳಾಗಿರುವದು ಕಂಡುಬರುತ್ತವೆ.

ಇಂಥ ಅಗ್ರಗಣ್ಯ ಸಹಕಾರಿ ಸಂಸ್ಥೆಗಳಲ್ಲಿ ಒಂದಾದ ರಡ್ಡಿ ಸಹಕಾರಿ ಬ್ಯಾಂಕ ಕೇವಲ ಸಮುದಾಯದ ಜನರಿಗೆ ಮಾತ್ರವಲ್ಲದೇ ಸಮಾಜದ ಎಲ್ಲ ಬಡವರ, ನಿರ್ಗತಿಕರ, ಮಹಿಳೆಯರ ಸಾಮಾಜಿಕ ಆರ್ಥಿಕ ಸಬಲತೆಗೆ ಕಾರಣವಾಗಿದ್ದು ಇತಿಹಾಸದಲ್ಲಿ ದಾಖಲಾಗಿದೆ.

ರಡ್ಡಿ ಸಹಕಾರಿ ಬ್ಯಾಂಕ್ ದುರ್ಬಲ ವರ್ಗದ ಏಳಿಗೆ, ಸ್ವಾವಲಂಬನೆಗೆ ಕಾರಣವಾಗುವದರ ಜೊತೆಗೆ ಬ್ಯಾಂಕಿನ ಆಡಳಿತ ಚುಕ್ಕಾಣಿ ಹಿಡಿದ ಅನೇಕ ಸಾಧಕರನ್ನು ರಾಜ್ಯಮಟ್ಟದ ಹಾಗೂ ರಾಷ್ಟçಮಟ್ಟದ ನಾಯಕರನ್ನಾಗಿ ರೂಪಿಸಿ ರಾಜಕೀಯ ನಾಯಕತ್ವಕ್ಕೂ ತನ್ನ ಕೊಡುಗೆಯನ್ನು ನೀಡಿದ್ದು ಗಮರ್ನಾಹ ಸಂಗತಿಯಾಗಿದೆ.

ಇಂಥ ನಾಯಕರ ಸಾಲಿನಲ್ಲಿ ಸಹಕಾರಿ ಭೀಷ್ಮ ದಿ. ಕೆ. ಎಚ್. ಪಾಟೀಲ, ಡಿ. ಆರ್. ಪಾಟೀಲ, ಎಚ್. ಕೆ. ಪಾಟೀಲ, ದಿ. ಆರ್. ಎಂ. ಪಾಟೀಲ (ನರಗುಂದ) ಕೆ. ಬಿ. ಕೋಳಿವಾಡ (ರಾಣೆಬೆನ್ನೂರ), ದಿ. ಬಿ. ಎಸ್. ಪಾಟೀಲ (ಸಾಸನೂರ), ಜಿ. ಎಚ್. ಅಶ್ವತ್ಥ ರೆಡ್ಡಿ, ಸಿ. ಆರ್. ಸೋರಗಾವಿ, ಬಿ. ಆರ್. ಯಾವಗಲ್ಲ (ನರಗುಂದ), ಆರ್. ಎಸ್. ಪಾಟೀಲ (ಉದುಪುಡಿ), ಎನ್. ಎಚ್. ಕೋನರೆಡ್ಡಿ (ನವಲಗುಂದ), ಜೆ. ಟಿ. ಪಾಟೀಲ, ಜಿ. ಎಚ್. ತಿಪ್ಪಾರೆಡ್ಡಿ, ಆರ್. ವಿ. ಪಾಟೀಲ (ಸವದತ್ತಿ), ವಿ. ಎಸ್. ಅಗಡಿ (ಕೊಪ್ಪಳ) ಹಾಗೂ ಪ್ರಸ್ತುತ ಅಧ್ಯಕ್ಷರಾದ ಕೆ. ಎಲ್. ಪಾಟೀಲ ಮುಂತಾದವರನ್ನು ಸ್ಮರಣೀಯ ಕರ‍್ಯ ದಾಖಲಾರ್ಹ.

ಪ್ರಸ್ತುತ ರಡ್ಡಿ ಸಹಕಾರಿ ಬ್ಯಾಂಕಿನ ನಿರ್ದೇಶಕರಾಗಿ, ಅಧ್ಯಕ್ಷರಾಗಿ ರಾಜಕಾರಣಕ್ಕೆ ಯಶಸ್ಸಿನ ಮೆಟ್ಟಿಲುಗಳನ್ನಾಗಿ ಮಾಡಿಕೊಂಡ ಮಹನೀಯರನ್ನು ಹಾಗೂ ಅವರು ಸಾಧಿಸಿದ ಯಶೋಗಾಥೆಯನ್ನು ಈ ಸಂದರ್ಭದಲ್ಲಿ ಪ್ರಸ್ತುತವೆನಿಸುತ್ತದೆ. ಕೆಲವು ಸಾಧಕರು ಶಾಸಕರು, ಮಂತ್ರಿಗಳಾದ ಮೇಲೆ ನಿರ್ದೇಶಕರಾದರೆ, ಇನ್ನು ಕೆಲವರು ಬ್ಯಾಂಕಿನ ನಿರ್ದೇಶಕರಾದ ನಂತರ ರಾಜಕಾರದಲ್ಲಿ ಸಾಧನೆಗೈದಿದ್ದನ್ನು ನಾವು ಕಾಣುತ್ತೆವೆ.

ದಿ. ಕೆ. ಎಚ್. ಪಾಟೀಲ : ಹಿಂದಿನ ಧಾರವಾಡ (ಈಗಿನ ಗದಗ) ಜಿಲ್ಲೆಯ ಗದಗ ತಾಲೂಕಿನ ಹುಲಕೋಟಿಯಲ್ಲಿ ೧೯೨೫ರಲ್ಲಿ ಜನಿಸಿದ ಕೃಷ್ಣಗೌಡ ಹನುಮಂತಗೌಡ ಪಾಟೀಲ ಇವರು ಪ್ರಾಥರ್ಮಿಕ ಪ್ರೌಢಶಿಕ್ಷಣವನ್ನು ಹುಲಕೋಟಿ ಗದಗಗಳಲ್ಲಿ ಪಡೆದು ಯುವಕರಾಗಿದ್ದಾಗಲೇ ಸಾಮಾಜಿಕ ರಾಜಕೀಯ ಕ್ಷೇತ್ರಕ್ಕೆ ಧುಮುಕಿದರು. ೧೯೫೯ ರಿಂದ ಬ್ಯಾಂಕಿನ ನಿರ್ದೇಶಕರಾಗಿ, ೧೯೬೧ ರಿಂದ ಬ್ಯಾಂಕಿನ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಕರ‍್ಯ ಪ್ರಾರಂಭಮಾಡಿದರು.

೧೯೬೭ ರಲ್ಲಿ ಪ್ರಥಮಬಾರಿ ಶಾಸಕರಾಗಿ ವಿಧಾನಸಭೆ ಪ್ರವೇಶ ಮಾಡಿದ ಅವರು ೧೯೮೩-೮೫ರ ಅವಧಿಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಕರ್ನಾಟಕ ರಾಜ್ಯ ನಾಮಕರಣ ಸಂದರ್ಭದಲ್ಲಿ ಗದಗನಲ್ಲಿ ಅದ್ದೂರಿ ಕರ‍್ಯಕ್ರಮ ನಡೆಸಿ ಆಗಿನ ರಾಜ್ಯಪಾಲರು, ಮುಖ್ಯಮಂತ್ರಿಗಳನ್ನು ಕರೆಸಿದ್ದು ಅತ್ಯಂತ ಮಹತ್ವಪೂರ್ಣ ಸಂತತಿ. ಗದಗ ಹುಲಕೋಟಿ ಭಾಗದ ಸಹಕಾರಿ ಸಂಸ್ಥೆಗಳನ್ನು ಕಟ್ಟಿಬೆಳೆಸಿದ್ದೂ ಅಲ್ಲದೆ ಅವುಗಳಿಗೆ ತೊಂದರೆಗಳು ಬಂದಾಗ ಎದುರಿಸಿ, ಸಂಘ ಸಂಸ್ಥೆಗಳನ್ನು ಕಾಪಾಡಿ ‘ಹುಲಕೋಟಿ ಹುಲಿ’ ಎಂಬ ಬಿರುದಿಗೆ ಪಾತ್ರರಾಗಿದ್ದಾರೆ.

ದಿ. ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದ ಸಚಿವ ಸಂಪುಟದಲ್ಲಿ ಕೆ. ಎಚ್. ಪಾಟೀಲರು ಕೃಷಿ, ಅರಣ್ಯ, ಆಹಾರ ಹಾಗೂ ನಾಗರಿಕಪೂರೈಕೆ ಸಚಿವರಾಗಿದ್ದರು. ಮುಂದೆ ವಿರೇಂದ್ರ ಪಾಟೀಲರು ಎರಡನೆಯ ಬಾರಿ ಮುಖ್ಯಮಂತ್ರಿಗಿದ್ದಾಗ ಅವರ ಸಚಿವ ಸಂಪುಟದಲ್ಲಿ ಕಂದಾಯ ಹಾಗೂ ಕಾರ್ಮಿಕ ಸಚಿವರಾಗಿದ್ದರು. ನಂತರ ೧೯೯೧-೯೨ ರಲ್ಲಿ ಆಗಿನ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಸಚಿವ ಸಂಪುಟದಲ್ಲಿ ಸಹಕಾರ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತರಾಜ್ ಸಚಿವರಾಗಿ ಅವರ ನಿಧನದ-ವರೆಗೂ ಮಂತ್ರಿಯಾಗಿ ನಾಡಿನ ನೆಲ, ಜಲ, ಭಾಷೆ, ಶಿಕ್ಷಣದ ಸಲುವಾಗಿ, ರಾಜ್ಯದ ಅಭಿವೃದ್ಧಿಗೆ ಅದರಲ್ಲೂ ರೈತರ ಪರವಾಗಿ ಧ್ವನಿ ಎತ್ತಿದ ರಾಜಕಾರಣಿಗಳಲ್ಲಿ ಅಗ್ರಗಣ್ಯರು.

ಡಿ. ಆರ್. ಪಾಟೀಲ (ಹುಲಕೋಟಿ) : ಅವಿಭಜಿತ ಧಾರವಾಡ ಜಿಲ್ಲೆಯ ಹುಲಕೋಟಿಯಲ್ಲಿ (ತಾ: ಗದಗ) ೧೯೪೭ ಮೇ ೧೯ ರಂದು ಜನಿಸಿ ದ್ಯಾವನಗೌಡ ರಂಗನಗೌಡ ಪಾಟೀಲರು ರಡ್ಡಿ ಬ್ಯಾಂಕಿನ ನಿರ್ದೇಶಕರಲ್ಲಿ ಒಬ್ಬರು. ಬಿಇ ಪದವಿಧರರಾದ ಇವರು ಸಹಕಾರಿ ನೂಲಿನ ಗಿರಣಿಗಳ ಸ್ಥಾಪನೆ, ಅಖಿಲ ಭಾರತ ಮಹಾಮಂಡಳ ಅಧ್ಯಕ್ಷರಾಗಿ ರಾಷ್ಟಿಯ ಸಹಕಾರಿ ಅಭಿವೃದ್ಧಿ ನಿಗಮದ ಸದಸ್ಯರಾಗಿ ಕರ್ನಾಟಕ ರಾಜ್ಯ ಸಹಕಾರ ಮಾರುಕಟ್ಟೆ ಮಹಾಮಂಡಳ (ಜನತಾಬಜಾರ್)ದ ನಿರ್ದೇಶಕರಾಗಿ, ಹುಲಕೋಟಿಯ ರೈತರ ಸಹಕಾರಿ ನೂಲಿನ ಗಿರಣಿಯ ಅಧ್ಯಕ್ಷರಾಗಿ ಕರ‍್ಯ ನಿರ್ವಹಿಸಿದರೆ, ೧೯೮೭ ರಿಂದ ೯೨ ರವರೆಗೆ ಧಾರವಾಡ ಜಿಲ್ಲಾ ಪರಿಷತ್ ಸದಸ್ಯರಾಗಿ ಗದಗ ವಿಧಾನಸಭಾ ಮತಕ್ಷೇತ್ರದಿಂದ ೧೯೯೨ ರಿಂದ ೨೦೦೭ ರವರೆಗೆ (ನಾಲ್ಕು ಅವಧಿಗೆ) ಶಾಸಕರಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯ ಉಪಾಧ್ಯಕ್ಷರಾಗಿಯೂ ಕಾರ‍್ಯ ನಿರ್ವಹಿಸುತ್ತಿದ್ದಾರೆ.

ಇತ್ತೀಚಿಗೆ ಶೈಕ್ಷಣಿಕ, ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವ ಇವರು, ಕೆಲವು ಕಾಲ ‘ವಿಶಾಲ ಕರ್ನಾಟಕ ‘ (ಹುಬ್ಬಳ್ಳಿ) ಪತ್ರಿಕೆಯ ಸಂಪಾದಕರಾಗಿಯೂ ಕಾರ‍್ಯ ನಿರ್ವಹಿಸಿದ್ದಾರೆ. ಸದ್ಯ ‘ಸಂಯುಕ್ತ ಕರ್ನಾಟಕ ‘ ದಿನಪತ್ರಿಕೆಯ ಆಡಳಿತ ಮಂಡಳಿ ಲೋಕ ಶಿಕ್ಷಣ ಟ್ರಸ್ಟ ಕಮಿಟಿಯ ಸದಸ್ಯರಾಗಿಯೂ ಕರ‍್ಯ ನಿರ್ವಹಿಸುತ್ತಿದ್ದಾರೆ.

ಎಚ್. ಕೆ. ಪಾಟೀಲ (ಗದಗ) : ರಡ್ಡಿ ಸಹಕಾರಿ ಬ್ಯಾಂಕಿನ ಹಿಂದಿನ ಅಧ್ಯಕ್ಷರೂ ಈಗಿನ ನಿರ್ದೇಶಕರು ಆಗಿರುವ ಹುಲಕೋಟಿಯ ಹನುಮಂತಗೌಡ ಕೃಷ್ಟಗೌಡ ಪಾಟೀಲ ವಿದ್ಯಾರ್ಥಿ ಜೀವನದಿಂದಲೇ ನಾಯಕತ್ವದ ಗುಣಗಳನ್ನು ಬೆಳೆಸಿಕೊಂಡವರು, ಕ.ವಿ.ವಿ ಧಾರವಾಡದ ಸಿನೇಟ್ ಹಾಗೂ ಸಿಂಡಿಕೇಟ್ (೧೯೭೮-೧೯೮೪) ಸದಸ್ಯರಾಗಿ ಸೇವೆ ಸಲ್ಲಿಸಿದ ಇವರು ಬಿ.ಎಸ್‌ಸಿ, ಎಲ್‌ಎಲ್‌ಬಿ ಪದವೀಧರರು. ರಾಜ್ಯದಲ್ಲಿಯೇ ಮೊದಲ ಸಹಕಾರಿ ಉದ್ಯಮ ವಸಾಹತುಗಳ ಸ್ಥಾಪನೆ ಇವರ ಹೆಗ್ಗಳಿಕೆ ರಾಜ್ಯ ಹಾಗೂ ರಾಷ್ಟç ಮಟ್ಟಗಳ ಕೃಷಿ, ಬ್ಯಾಂಕಿಂಗ್ ಸಮಿತಿಗಳ ಸದಸ್ಯರೂ, ಅಧ್ಯಕ್ಷರೂ ಆದ ಇವರು ರಾಷ್ಟಿçÃಯ ಪಟ್ಟಣ ಸಹಕಾರಿ ಬ್ಯಾಂಕುಗಳ ಒಕ್ಕೂಟದ ಅಧ್ಯಕ್ಷರಾಗಿ ಕರ‍್ಯ ನಿರ್ವಹಿಸಿದ್ದಾರೆ.

೧೯೮೪ ರಿಂದ ೨೦೦೮ ರವರೆಗೆ ಒಟ್ಟು ನಾಲ್ಕು ಅವಧಿಗೆ ಕರ್ನಾಟಕ ರಾಜ್ಯ ವಿಧಾನ ಪರಿಷತ್ತಿಗೆ ಪಶ್ಚಿಮ ಪದವೀಧರ ಕ್ಷೇತ್ರದಿಂದ ೨೪ ವರ್ಷ ಅಖಂಡ ಶಾಸಕರಾಗಿ ಸೇವೆ ಸಲ್ಲಿಸಿರುವದು ಉಲ್ಲೇಖಾರಕ. ೧೯೯೪ ರಿಂದ ೧೯೯೯ ಹಾಗೂ ೨೦೦೬ ರಿಂದ ೨೦೦೮ರ ವರೆಗೆ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾಗಿ ರಾಜಕೀಯ ಕ್ಷೇತ್ರಕ್ಕೆ ಸೇವೆ ಸಲ್ಲಿಕೆಯಾಗಿದೆ. ೧೯೯೩ ರಿಂದ ೧೯೯೪ ರವರೆಗೆ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಅವರ ಸಂಪುಟದಲ್ಲಿ ಜವಳಿ, ಆಹಾರ ಸಂಸ್ಕರಣೆ ಸಚಿವರಾಗಿ, ೧೯೯೯ ರಿಂದ ೨೦೦೩ ರವರೆಗೆ ಎಸ್. ಎಂ. ಕೃಷ್ಣ ಅವರ ಸಚಿವ ಸಂಪುಟದಲ್ಲಿ ಜಲಸಂಪನ್ಮೂಲ ೨೦೦೩ ರಿಂದ ೨೦೦೪ ರವರೆಗೆ ಕೃಷಿ ಸಚಿವರಾಗಿ ಕರ‍್ಯ ನಿರ್ವಹಿಸಿದ್ದಾರೆ. ನಂತರ ಮುಖ್ಯಮಂತ್ರಿ ಧರ್ಮಸಿಂಗ್ ಅವರ ಸಚಿವ ಸಂಪುಟದಲ್ಲಿ ೨೦೦೪ ರಿಂದ ೨೦೦೬ ರವರೆಗೆ ಕಾನುನೂ, ಮಾನವ ಹಕ್ಕುಗಳ ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾಗಿ ಕರ‍್ಯ ನಿರ್ವಹಣೆ, ೨೦೧೩ ರಿಂದ ೨೦೧೮ ವರೆಗೆ ಆಗಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಸಚಿವ ಸಂಪುಟದಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತರಾಜ್ ಸಚಿವರಾಗಿ ಗ್ರಾಮೀಣ ಜನರ ಬದುಕು ಮೇಲೆತ್ತಲು ಹಲವಾರು ವಿಧಾಯಕ ಕರ‍್ಯಕ್ರಮಗಳನ್ನು ರೂಪಿಸಿ ಉತ್ತಮ ಪಂಚಾಯತರಾಜ ವ್ಯವಸ್ಥೆಗೆ ಕೇಂದ್ರ ಸರ್ಕಾರದ ಪ್ರಶಸ್ತಿಗೆ ಭಾಜನರಾದರು. ಸದ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಸಚಿವ ಸಂಪುಟದಲ್ಲಿ ಕಾನೂನುರಚನೆ , ಮಾನವ ಹಕ್ಕುಗಳು, ಪ್ರವಾಸೋದ್ಯಮ ಸಚಿವರಾಗಿ ಕರ‍್ಯ ನಿರ್ವಹಿಸುತ್ತಿದ್ದಾರೆ.

ದಿ. ಆರ್. ಎಮ್. ಪಾಟೀಲ¯ : ರಾಮನಗೌಡ ಮರಿಗೌಡ ಪಾಟೀಲ. ಬಿ.ಎ. ಎಲ್.ಎಲ್.ಬಿ ಅವರು ೧೯೩೮-೧೯೫೦ ರಲ್ಲಿ ಬ್ಯಾಂಕಿನ ಡೈರೆಕ್ಟರರೂ ಆಗಿದ್ದರು.

೧೯೦೭ ರಲ್ಲಿ ನರಗುಂದ ತಾಲೂಕಿನ ವಾಸನದಲ್ಲಿ ಜನಿಸಿದರು. ಜನ್ಮ ಸ್ಥಳದಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣವನ್ನೂ ಹಾಗೂ ಧಾರವಾಡದಲ್ಲಿ ಮಾಧ್ಯಮಿಕ ಶಿಕ್ಷಣವನ್ನು ಪಡೆದು ಧಾರವಾಡದ ಕರ್ನಾಟಕ ಕಾಲೇಜಿನಿಂದ ಆಟ್ಸ್ ಪಧವಿಧರರಾದರು ಮುಂದೆ ಕೊಲ್ಲಾಪುರದ ಕಾಲೇಜಿನಿಂದ ಪದವಿ ಪಡೆದರು. ನಂತರ ಧಾರವಾಡದಲ್ಲಿ ವಕೀಲ ವೃತ್ತಿ ಪ್ರಾರಂಭಿಸಿ ಹೆಸರುಗಳಿಸಿ ೧೯೬೫ ರ ವರೆಗೆ ಡಿಸ್ಟಿçಕ್ಟ ಪಬ್ಲಿಕ್ ಪ್ರಾಸಿಕ್ಯೂಟರರಾಗಿ ನೇಮಕ ಮಾಡಲ್ಪಟ್ಟರು.

ಅವರು ಧಾರವಾಡದ ಜನತಾ ಶಿಕ್ಷಣ ಸಮಿತಿಯ ಆಡಳಿತ ಮಂಡಳಿಯ ಸದಸ್ಯರೂ ಆಗಿದ್ದರು. ೧೯೩೦ ರಿಂದ ಕಾಂಗ್ರೆಸ್ ಪಕ್ಷದ ಚುನಾವಣಾ ನ್ಯಾಯಮಂಡಳದ ಸದಸ್ಯರಾಗಿದ್ದರು. ೧೯೫೬ ರಲ್ಲಿ ಆರೋಗ್ಯಮಂತ್ರಿಯಾಗಿ ಮೈಸೂರು ಮಂತ್ರಿ ಸಂಪುಟ ಸೇರಿದ್ದರು. ಹಾಗೂ ೧೯೫೬ ರಿಂದ ೧೯೫೮ ರವರೆಗೆ ಆ ಹುದ್ದೆಯಲ್ಲಿದ್ದರು.

ಮುಂದೆ ಬೆಂಗಳೂರಿನಲ್ಲಿ ತಮ್ಮ ವಕೀಲವೃತ್ತಿ ಪ್ರಾರಂಭಿಸಿ ರಾಜಕಾರಣದಲ್ಲಿ ಸಕ್ರಿಯ ಪಾತ್ರ ವಹಿಸಿದರು. ಪುನಃ ಗೃಹಮಂತ್ರಿಯಾಗಿ ಮೈಸೂರು ಮಂತ್ರಿಸAಪುಟ ಸೇರಿದರು. ಅಲ್ಲದೆ ೧೯೬೫ ರ ಜೂನ ವರೆಗೆ ಆ ಅಧಿಕಾರ ವಹಿಸಿದರು. ನಂತರ ಗ್ರಾಮೀಣ ಅಭಿವೃದ್ಧಿ ಪಂಚಾಯತರಾಜ್ಯ ಹಾಗೂ ಮುನಸಿಪಲ್ ಆಡಳಿತದ ಮಂತ್ರಿಗಳಾಗಿದ್ದರು.

ಕೃಷ್ಟಪ್ಪ .ಬೀಮಪ್ಪ. ಕೋಳಿವಾಡ : ಅವಿಭಜಿತ ಧಾರವಾಡ ಜಿಲ್ಲೆಯ ರಾಣಿಬೆನ್ನೂರ ತಾಲೂಕಿನ (ಈಗಿನ ಹಾವೇರಿ ಜಿಲ್ಲೆ) ಗುಡಗೂರಿನಲ್ಲಿ ೧೯೪೪ ರಲ್ಲಿ ಜನಿಸಿದ ಕೆ. ಬಿ. ಕೋಳಿವಾಡ ಅವರು ಬಿ.ಕಾಮ್., ಎಲ್.ಎಲ್.ಬಿ (೨ ರ‍್ಯಾಂಕ ಕೆ.ಯು.ಡಿ.) ಪದವೀಧರರು ಕೃಷಿ ಕುಟುಂಬದಿAದ ಬಂದಿರುವ ಇವರು ೨೪ನೇ ವಯಸ್ಸಿಗೆ ಎಪಿಎಮ್‌ಸಿ ಸದಸ್ಯರಾಗಿ, ೧೯೭೨ ರಲ್ಲಿ, ೧೯೮೫ ರಲ್ಲಿ, ೧೯೮೯ ರಲ್ಲಿ ಹಾಗೂ ೧೯೯೯ರಲ್ಲಿ ನಾಲ್ಕನೇಬಾರಿ ಶಾಸಕರಾಗಿ ಅಂದಿನ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರ ಸಚಿವ ಸಂಪುಟದಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ರಡ್ಡಿ ಸಹಕಾರಿ ಬ್ಯಾಂಕಿನ ನಿರ್ದೇಶಕರೂ ಆಗಿದ್ದ ಇವರು ೨೦೧೩ ರಲ್ಲಿ ಮತ್ತೆ ಶಾಸಕರಾಗಿ ಆಯ್ಕೆಯಾಗಿ ರಾಜ್ಯ ವಿಧಾನಸಭೆಯ ಸ್ಪೀಕರ ಆಗಿ ಕರ‍್ಯನಿರ್ವಹಿಸಿದ್ದಾರೆ.

ದಿ. ಬಿ. ಎಸ್. ಪಾಟೀ¯ (ಸಾಸನೂರ) : ವಿಜಯಪುರ ಜಿಲ್ಲೆಯ ಕೃಷಿಮೂಲ ಕುಟುಂಬದ ಸಾಸನೂರ ಗ್ರಾಮದಲ್ಲಿ ೧೯೩೩ ರಲ್ಲಿ ಜನಿಸಿದ ಬಿ, ಎಸ್. ಪಾಟೀಲರು ಬಿಎ, ಬಿಕಾಮ್ ಹಾಗೂ ಎಲ್‌ಎಲ್‌ಬಿ ಪದವೀಧರರು. ಕರ್ನಾಟಕ ವಿಧಾನಸಭೆಯ ಹೂವಿನಹಿಪ್ಪರಗಿ ಮತಕ್ಷೇತ್ರದಿಂದ ಆಯ್ಕೆಯಾದ ಅವರು ನಾಲ್ಕು ಬಾರಿ ವಿಧಾನಸಭಾ ಸದಸ್ಯರಾಗಿ ಎರಡು ರಾಜ್ಯ ಸಚಿವ ಸಂಪುಟಗಳಲ್ಲಿ ಮಂತ್ರಿಯಾಗಿದ್ದರು. ೧೯೯೩ ರಲ್ಲಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಅವರ ಸಚಿವ ಸಂಪುಟದಲ್ಲಿ ಆರೋಗ್ಯ, ಕುಟುಂಬ ಕಲ್ಯಾಣ ಕೆಲವು ಅವಧಿಗೆ ಹಾಗೂ ಆಹಾರ ನಾಗರಿಕ ಪೂರೈಕೆ, ಸಕ್ಕರೆ, ಭೂಸೇನಾ ನಿಗಮದ ಸಚಿವರಾಗಿದ್ದರು. ಮುಂದೆ ೧೯೯೯ ರಲ್ಲಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರ ಸಚಿವ ಸಂಪುಟದಲ್ಲಿ ಕೃಷಿ ಮಾರುಕಟ್ಟೆ ಸಚಿವರಾಗಿದ್ದರು. ಇವರ ಪುತ್ರ ಸೋಮನಗೌಡ ಬಿ. ಪಾಟೀಲರು ದೇವರಹಿಪ್ಪರಗಿ ಮತಕ್ಷೇತ್ರದ ಶಾಸಕರಾಗಿದ್ದು ಇಲ್ಲಿ ಉಲ್ಲೇಖಾರ್ಹ

ದಿ. ಜಿ. ಎಚ್. ಅಶ್ವತ್ಥ ರೆಡ್ಡಿ (ಚಿತ್ರದುರ್ಗ) : ರಡ್ಡಿ ಸಹಕಾರಿ ಬ್ಯಾಂಕಿನ ಹಿಂದಿನ ನಿರ್ದೇಶಕರಾಗಿದ್ದ ದಿ. ಜಿ. ಎಚ್. ಅಶ್ವತ್ಥ ರೆಡ್ಡಿ ಅವರು ಚಿತ್ರದುರ್ಗ ಜಿಲ್ಲೆ, ತಾಲೂಕಿನ ಕಡಬನಕಟ್ಟೆಯಲ್ಲಿ ೧೯೩೫ ರಲ್ಲಿ ಜನಿಸಿದರು. ಬೆಂಗಳೂರಿನಲ್ಲಿ ಬಿ,ಎಸ್.ಸಿ ಆನರ್ಸ ಪದವಿಯನ್ನು ಪಡೆದ ಇವರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರುತ್ತಾರೆ. ಚಿತ್ರದುರ್ಗ ಜಿಲ್ಲೆಯ ಜಗಳೂರು ವಿಧಾನಸಭಾ ಕ್ಷೇತ್ರದಿಂದ ಆರು ಬಾರಿ ಶಾಸಕರಾಗಿ ಆಯ್ಕೆಯಾದ ಇವರು ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಸಚಿವರಾಗಿ ಎರಡು ಅವಧಿಗೆ ಸೇವೆ ಸಲ್ಲಿಸಿದ್ದು ೨೦೧೪ ರಲ್ಲಿ ನಿಧನರಾಗಿರುತ್ತಾರೆ.

ಜಿ. ಎಚ್. ತಿಪ್ಪಾರೆಡ್ಡಿ (ಚಿತ್ರದುರ್ಗ) : ಜಿ. ಹನಮಂತರೆಡ್ಡಿ ಅವರ ಪುತ್ರರಾಗಿರುವ ಜಿ. ಎಚ್. ತಿಪ್ಪಾರೆಡ್ಡಿ ಅವರು ೧೯೪೭ ರಲ್ಲಿ ಚಿತ್ರದುರ್ಗದ ಕಡಬನಕಟ್ಟೆಯಲ್ಲಿ ಜನನ, ಕೃಷಿ ಹಾಗೂ ವ್ಯಾಪಾರ ಮೂಲದ ಕುಟುಂಬದಿAದ ಬಂದ ಇವರು ಚಿತ್ರದುರ್ಗ ಜಿಲ್ಲಾ ರೆಡ್ಡಿ ಜನಸಂಘದ ಅಧ್ಯಕ್ಷರೂ ಆಗಿದ್ದಾರೆ. ೧೯೯೪ ರಲ್ಲಿ ವಿಧಾನಸಭೆ ಪ್ರವೇಶಿಸಿದ ಇವರು ಐದು ಬಾರಿ ಚಿತ್ರದುರ್ಗದ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ ಆಗಿದ್ದಾರೆ. ಒಂದು ಬಾರಿ ವಿಧಾನ ಪರಿಷತ್ ಸದಸ್ಯರಾದ ಇವರು ಕರ್ನಾಟಕ ಸರ್ಕಾರದ ಗೃಹ ಮಂಡಳಿಯ ಮಾಜಿ ಅಧ್ಯಕ್ಷರಾಗಿದ್ದಾರೆ.

ಬಿ. ಆರ್. ಯಾವಗಲ್ಲ (ನರಗುಂದ) : ಹಿಂದಿನ ಧಾರವಾಡ ಜಿಲ್ಲೆಯ ಇಂದಿನ ಗದಗ ಜಿಲ್ಲೆಯ ನರಗುಂದ ವಿಧಾನ ಸಭಾಕ್ಷೇತ್ರದಿಂದ ನಾಲ್ಕು ಬಾರಿ ವಿಧಾನಸಭಾ ಸದಸ್ಯರಾದ ಬಸವರಡ್ಡಿ ರಂಗರಡ್ಡಿ ಯಾವಗಲ್ಲ ಅವರು ನವಲಗುಂದ ತಾಲೂಕಿನ ಜಾವೂರಿನಲ್ಲಿ ೧೯೪೭ ರಲ್ಲಿ ಜನಿಸಿದರು. ಬಿ. ಎಸ್.ಸಿ, ಎಲ್‌ಎಲ್‌ಬಿ ಪದವೀಧರರಾದ ಇವರು ವಕೀಲರಾಗಿಯೂ ಹಾಗೂ ಕೃಷಿಕರಾಗಿಯೂ ಪ್ರಸಿದ್ಧಿ ಪಡೆದವರು. ೧೯೮೩ ರಲ್ಲಿ ಕ್ರಾಂತಿರAಗ ಪಕ್ಷದ ಮೂಲಕ ವಿಧಾನಸಭೆ ಪ್ರವೇಶಿಸಿದ ಇವರು ೧೯೮೫ ರಲ್ಲಿ ಜನತಾದಳದ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆಯಾಗಿ ದಿ. ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ ಸಚಿವ ಸಂಪುಟದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರು ಹಾಗೂ ವಿಧಾನಸಭೆಯ ಉಪ ಸಭಾಧ್ಯಕ್ಷರೂ ಆಗಿ ಸೇವೆ ಸಲ್ಲಿಸಿದ್ದಾರೆ. ಇವರು ರಡ್ಡಿ ಸಹಕಾರಿ ಬ್ಯಾಂಕಿನ ನಿರ್ದೇಶಕರಾಗಿದ್ದಲ್ಲದೆ ೧೯೯೩ ರಲ್ಲಿ ಮಲಪ್ರಭಾ ಸಹಕಾರಿ ಎಣ್ಣೆ ಗಿರಣಿಯನ್ನು ಸ್ಥಾಪಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಸಿ. ಆರ್. ಸೋರಗಾವಿ : ಅಖಂಡ ವಿಜಯಪುರ ಜಿಲ್ಲೆಯಿಂದ ಸ್ಥಳೀಯ ಸಂಘ ಸಂಸ್ಥೆಗಳ ಜನಪ್ರತಿನಿಧಿಯಾಗಿ ಶಾಸಕರಾಗಿ ವಿಧಾನ ಪರಿಷತ್ತನ್ನು ಪ್ರವೇಶಿಸಿದ ಚಿನ್ನಪ್ಪ. ರಾಮಪ್ಪ. ಸೋರಗಾವಿ ಅವರು ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಅರಕೇರಿ ಗ್ರಾಮದವರು. ಕೃಷಿ ಮೂಲ ಕುಟುಂಬದಿAದ ಬಂದಿರುವ ಚಿನ್ನಪ್ಪ ಸೋರಗಾವಿ ಅವರು ಬಿ.ಎಸ್ಸಿ. ಪದವೀಧರರು. ೧೯೯೨-೯೩ ರಲ್ಲಿ ಅವಿರೋಧವಾಗಿ ಆಯ್ಕೆಯಾದ ಇಬ್ಬರು ಸದಸ್ಯರಲ್ಲಿ ಇವರೂ ಕೂಡ ಒಬ್ಬರು.

( ಮತ್ತೋರ್ವ ಈಗಿನ ಬಾಗಲಕೋಟ ಲೋಕಸಭಾ ಸದಸ್ಯರಾದ ಪಿ.ಸಿ. ಗದ್ದಿಗೌಡರ) ಬಾಗಲಕೋಟ ತೋಟಗಾರಿಕೆ ವಿಶ್ವವಿದ್ಯಾಲಯ ಮಂಡಳಿ ಸದಸ್ಯರಾಗಿರುವ ಸಿ. ಆರ್. ಸೋರಗಾವಿ ಅವರು ರಡ್ಡಿ ಸಹಕಾರಿ ಬ್ಯಾಂಕಿನ ಹಿರಿಯ ನಿರ್ದೇಶಕರಲ್ಲಿ ಒಬ್ಬರಾಗಿದ್ದಾರೆ.

ದಿ. ಆರ್. ಎಸ್. ಪಾಟೀಲ (ಉದುಪುಡಿ) :
ಆರ್. ವಿ ಪಾಟೀಲ (ಕಗದಾಳ) : ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಕಗದಾಳ ಗ್ರಾಮದಲ್ಲಿ ೧೯೫೦ ರಲ್ಲಿ ಜನಿಸಿದ ರಾಮನಗೌಡ ಪಾಟೀಲ ಇವರು ಬಿ.ಎ. ಪದವಿಧರರು, ಕೃಷಿ ಮೂಲ ಕುಟುಂಬದಿಂದ ಬಂದವರು. ೧೯೮೩ ರಿಂದ ೧೯೮೫ ರವರೆಗೆ ಸವದತ್ತಿ ವಿಧಾನಸಭಾ ಕ್ಷೇತ್ರವನ್ನು ರಾಜ್ಯ ವಿಧಾನಸಭೆಯಲ್ಲಿ ಪ್ರತಿನಿಧಿಸಿದ ಹಿರಿಯ ರಡ್ಡಿ ಸಹಕಾರಿ ಬ್ಯಾಂಕಿನ ನಿರ್ದೇಶಕರು ಸವದತ್ತಿಯ ಮಲಪ್ರಭಾ ಸಹಕಾರಿ ನೂಲಿನ ಗಿರಣಿಯ ಸಂಸ್ಥಾಪಕ ನಿರ್ದೇಶಕರು, ಹಿಂದಿನ ಕೆಪಿಸಿಸಿ ಸದಸ್ಯರು, ನಿರ್ದೇಶಕರು, ಟಿಎಪಿಸಿಎಮ್‌ಎಸ್ ಹಾಗೂ ಪಿಎಲ್‌ಡಿ ಬ್ಯಾಂಕ ಸವದತ್ತಿ.

ಜೆ. ಟಿ. ಪಾಟೀಲ (ಬೀಳಗಿ) : ಬಾಗಲಕೋಟ ಜಿಲ್ಲೆ, ಬೀಳಗಿ ತಾಲೂಕಿನ ಯಡಹಳ್ಳಿ ಗ್ರಾಮದಲ್ಲಿ ಒಕ್ಕಲುತನದ ಕುಟುಂಬದಲ್ಲಿ ೧೯೫೦ ರಲ್ಲಿ ಜನಿಸಿದ ಜಗದೀಶಗೌಡ ತಮ್ಮನಗೌಡ ಪಾಟೀಲರು ಬಿ.ಎಸ್‌ಸಿ. (ಅಗ್ರಿ)ಪದವೀಧರರು. ಬೀಳಗಿ ವಿಧಾನಸಭಾ ಕ್ಷೇತ್ರದಿಂದ ನಾಲ್ಕುಬಾರಿ ಆಯ್ಕೆಯಾಗಿರುವ ಹೆಗ್ಗಳಿಕೆ ಇವರದು. ರಡ್ಡಿ ಸಹಕಾರಿ ಬ್ಯಾಂಕಿನ ನಿರ್ದೇಶಕರಾಗಿರುವ ಇವರು ಸಧ್ಯ ಕರ್ನಾಟಕ ರಾಜ್ಯ ಸರ್ಕಾರದ ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷರೂ ಆಗಿದ್ದಾರೆ. ನಂದಿ ಸಹಕಾರ ಸಕ್ಕರೆ ಕಾರ್ಖಾನೆಯ ಹಿಂದಿನ ನಿರ್ದೇಶಕರು, ಬಾಗಲಕೋಟ ಜನತಾ ಬಜಾರ್‌ನ ಹಿಂದಿನ ನಿರ್ದೇಶಕರು, ಬೀಳಗಿಯ ಶ್ರೀ ಸಿದ್ದೇಶ್ವರ ಸೌಹಾರ್ದ ಸಹಕಾರಿ ಸಂಘ (೨೦೦೬) ದ ಸಂಸ್ಥಾಪಕ ಅಧ್ಯಕ್ಷರೂ ಆಗಿದ್ದಾರೆ.

ಗಲಗಲಿಯ ಗಾವಲ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರೂ ಆದ ಇವರು ೧೯೮೫ ರಲ್ಲಿ ವಿಜಯಪುರ ತಾಲೂಕಿನ (ಸದ್ಯ ಬಬಲೇಶ್ವರ ತಾಲೂಕು) ಗುಣದಾಳದಲ್ಲಿ ನ್ಯೂ ಇಂಗ್ಲೀಷ ಹೈಸ್ಕೂಲ ಸ್ಥಾಪನೆ ಮಾಡಿದ್ದಾರೆ.

 

ದಿ ವಿಎಸ್ ಅಗಡಿ (ಕೊಪ್ಪಳ) ವಿರೂಪಾಕ್ಷಪ್ಪ ಸಂಗಣ್ಣ ಅಗಡಿ ಇವರು 1940 ರಲ್ಲಿ ಜನಿಸಿದರು ಶಾಸಕರಾಗಿದ್ದ ಇವರು ರೆಡ್ಡಿ ಸಹಕಾರಿಬ್ಯಾಂಕಿನ ಹಿರಿಯ ಸದಸ್ಯರಲ್ಲಿ ಒಬ್ಬರಾಗಿದ್ದರು ಶಾಸಕರು ಅಲ್ಲದೆ ಕೆಲವು ಕಾಲ 1989 ರಲ್ಲಿ ಅಂದಿನ ಮುಖ್ಯಮಂತ್ರಿ ದಿ ಎಸ್ ಆರ್ ಬೊಮ್ಮಾಯಿ ಸಚಿವ ಸಂಪುಟದಲ್ಲಿ ಮಂತ್ರಿ ಕೂಡ ಆಗಿದ್ದರು 2021 ರಲ್ಲಿ ನಿಧನರಾದ ಇವರು ಕೊಪ್ಪಳ ನಗರಸಭೆ ಹಾಗೂ ಎಪಿಎಂಸಿಗಳ ಮಾಜಿ ಸದಸ್ಯರು ಹಾಗೂ ಅಧ್ಯಕ್ಷರು ಆಗಿದ್ದರು

ಪ್ರಕಾಶ್ ಕೆ ಕೋಳಿವಾಡ (ರಾಣಿಬೆನ್ನೂರು)
ಕಳೆದ 2023 ರಲ್ಲಿ ಜರುಗಿದ ವಿಧಾನಸಭಾ ಚುನಾವಣೆಯಲ್ಲಿ ರಾಣೆಬೆನ್ನೂರು ಮತ ಕ್ಷೇತ್ರದಿಂದ ಆಯ್ಕೆಯಾದ ಪ್ರಕಾಶ ಕೋಳಿವಾಡ ಅವರು ಬ್ಯಾಂಕಿನ ಜೊತೆ ನಿಕಟ ಸಂಪರ್ಕಹೊಂದಿರುವ ವ್ಯಕ್ತಿತ್ವವಾದವರಾಗಿದ್ದಾರೆ

ಕೆ.ಎಲ್.ಪಾಟೀಲ (ಸದ್ಯದ ಅಧ್ಯಕ್ಷರು)

ಕೆ ಎಲ್ ಪಾಟೀಲ್ ಹೈಕೋರ್ಟ್ ನ್ಯಾಯಾಧೀಶರು ಪ್ರಸ್ತುತ ಅಧ್ಯಕ್ಷರು ರೆಡ್ಡಿ ಸಹಕಾರಿ ಬ್ಯಾಂಕ್ ಧಾರವಾಡ
ಕೆ ಎಲ್ ಪಾಟೀಲ್ ಇವರು ಮೂಲತಃ ಗದಗ್ ಜಿಲ್ಲೆ ನರಗುಂದ ತಾಲೂಕಿನ ರೆಡ್ಡೇರ ನಾಗನೂರು ಗ್ರಾಮದವರು 22 11 1952 ರಂದು ಧಾರವಾಡದಲ್ಲಿ ಜನಿಸಿದ್ದು ಶಿಕ್ಷಣ ಧಾರವಾಡದ ಕೆಇ ಬೋರ್ಡ್ ನಲ್ಲಿ ಶಾಲೆಯಲ್ಲಿ ಬಿಎ ಪದವಿಯನ್ನು ಕರ್ನಾಟಕ ಕಾಲೇಜು ಧಾರವಾಡದಲ್ಲಿ ಯುನಿವರ್ಸಿಟಿ ಲಾ ಕಾಲೇಜ್ನಲ್ಲಿ ಕಾನೂನು ಪದವಿಯನ್ನು ಪೂರೈಸಿಕೊಂಡು 1977 ರಲ್ಲಿ ಧಾರವಾಡದಲ್ಲಿ ತಮ್ಮ ವಕೀಲ ವೃತ್ತಿಯನ್ನು ದಿವಂಗತ ನ್ಯಾಯವಾದಿ ಶ್ರೀ ಜೆಎಂ ಪಾಟೀಲ ಇವರ ಮಾರ್ಗದರ್ಶನದಲ್ಲಿ ಪ್ರಾರಂಭಿಸಿದರು ವೃತ್ತಿಯಲ್ಲಿ 47 ವರ್ಷಗಳಿಂದ ತೊಡಗಿದ್ದು ಪ್ರಖ್ಯಾತ ಮತ್ತು ಪ್ರಮುಖ ನ್ಯಾಯಾಲಯಗಳಲ್ಲಿ ಮುಂಚೂಣಿಯಲ್ಲಿದ್ದಾರೆ ಇವರು ರಾಜ್ಯದ ಕೆಲವೇ ಕೆಲವು ಪ್ರತಿಷ್ಠಿತ ಸಹಕಾರಿ ಬ್ಯಾಂಕುಗಳಲ್ಲಿ ಒಂದಾದ ಮತ್ತು 110 ವರ್ಷಗಳ ಪೂರೈಸಿದ ರೆಡ್ಡಿ ಸಹಕಾರಿ ಬ್ಯಾಂಕ್ ಇದರ ನಿರ್ದೇಶಕರೆಂದು ಸಣ್ಣ 1991 ರಿಂದ ಹಾಗೂ 1998ರಿಂದ ಸತತ 25 ವರ್ಷಗಳಿಂದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತಿದ್ದು ಬ್ಯಾಂಕು ಇಂದು ರಾಜ್ಯದ ಅತ್ಯಂತ ಸದೃಢ ಮತ್ತು ವಿಶ್ವಾಸರ ಸಹಕಾರಿ ಬ್ಯಾಂಕ್ ಆಗಿರುವುದಕ್ಕೆ ಇವರ ಸಮಾಜದ ಸಮಾನ ಮನೋಸ್ಕರೊಂದಿಗೆ ಇವರ ಸಮಾಜದ ಸಮಾನ ಮನಸ್ಕರು ಒಂದಿಗೆ ಕೂಡಿ ನಿಸ್ವಾರ್ಥ ಮತ್ತು ಆಡಳಿತವೇ ಕಾರಣ ಇವರು ಸುಮಾರು 25 ವರ್ಷಗಳಿಂದ ನಾಡಿನ ಪ್ರತಿಷ್ಠಿತ ಮಠವಾದ ಹುಬ್ಬಳ್ಳಿಯ ಶ್ರೀ ಸಿದ್ದಾರೂಢ ಸ್ವಾಮಿ ಮಠದ ಆಡಳಿತ ಮಂಡಳಿಯ ಟ್ರಸ್ಟಿ ಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ

ಲೇಖಕರು

ಡಾ.ಎಚ್.ಕೆ.ಯಡಹಳ್ಳಿಸ

ಸದಸ್ಯರು, ವಿಜಯಪುರ ರಡ್ಡಿ ಬ್ಯಾಂಕ್ ಶಾಖೆ ಸಲಹಾ ಮಂಡಳಿ,

ಪ್ರಾಚಾರ್ಯರು,ಸಿಕ್ಯಾಬ ಎ.ಆರ್.ಎಸ್. ಇನಾಮದಾರ ಮಹಿಳಾ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಕೇಂದ್ರ, ವಿಜಯಪುರ
9448816804.

Nimma Suddi
";