ನಿಮ್ಮ ಸುದ್ದಿ ಬಾಗಲಕೋಟೆ
ಹಾರುವ ವಸ್ತುಗಳನ್ನು ಟಿಪ್ಪರ್‌ನಲ್ಲಿ ಸಾಗಿಸುವಾಗ ಮೇಲ್ಗಡೆ ತಾಡಪಾಲ್ ಹಾಕಿಕೊಳ್ಳಬೇಕೆಂಬ ನಿಯಮವಿದ್ದರೂ ಕೆಲ ಟಿಪ್ಪರ್‌ಗಳು ಬೇಕಾಬಿಟ್ಟಿಯಾಗಿ ಸಂಚರಿಸುತ್ತವೆ ಎಂದು ವಾಹನ ಸವಾರರು ದೂರಿದ್ದಾರೆ.
ರಾಜ್ಯ ಹೆದ್ದಾರಿಯಲ್ಲಿ ಮರಳು ತುಂಬಿದ ಟಿಪ್ಪರ್‌ಗಳು ಸಂಚರಿಸುತ್ತಿದ್ದು ಕೆಲ ಟಿಪ್ಪರ್‌ಗಳು ಕಡ್ಡಾಯವಾಗಿ ತಾಡಪಾಲ್‌ಗಳನ್ನು ಹಾಕಿಕೊಂಡು ಯಾರಿಗೂ ತೊಂದರೆ ಕೊಡದಂತೆ ಸಂಚರಿಸುತ್ತಿದ್ದರೆ ಇನ್ನೂ ಕೆಲ ಟಿಪ್ಪರ್‌ಗಳು ಹೆಚ್ಚಿನ ಲೋಡ್ ಮರಳಿನೊಂದಿಗೆ ಹಾಗೇ ಸಂಚರಿಸುತ್ತಿದ್ದು ಸವಾರರಿಗೆ ಇದರಿಂದ ಅಪಾಯವಾಗುವ ಸಂಭವ ಹೆಚ್ಚಿದೆ.
ಇಳಕಲ್ ಭಾಗದಿಂದ ಬಾಗಲಕೋಟೆಯತ್ತ ಮರಳು ತುಂಬಿದ ಟಿಪ್ಪರ್‌ಗಳು ಈಗಂತೂ ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುತ್ತಿವೆ. ರಸ್ತೆಯಲ್ಲಿ ಸಂಚರಿಸುವಾಗ ತಾಡಪಾಲ್ ಹಾಕಬೇಕೆಂಬ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿಯಮವಿದ್ದರೂ ನಿಯಮ ಮೀರಿ ಸಂಚಾರ ಆರಂಭಿಸಿವೆ.
ಇಂತಹ ನಿಯಮ ಮೀರುವ ಟಿಪ್ಪರ್‌ಗಳ ಸಂಚಾರದಿAದ ಟಿಪ್ಪರ್‌ನಲ್ಲಿನ ಮರಳು ಗಾಳಿಗೆ ಹಾರಿ ಸವಾರರ ಕಣ್ಣಿಗೆ ಎರಚಿದರೆ ಅಪಾಯ ಸಂಭವಿಸಬಹುದಾದ ಸಾಧ್ಯತೆ ಇದ್ದು ಪೊಲೀಸರು ಹಾಗೂ ಇಲಾಖೆ ಅಕಾರಿಗಳು ಇಂತಹ ಟಿಪ್ಪರ್‌ಗಳಿಗೆ ಕಡಿವಾಣ ಹಾಕಬೇಕು. ಎಂದು ಸವಾರರು ಆಗ್ರಹಿಸಿದ್ದಾರೆ.
ಟಿಪ್ಪರ್‌ಗಳ ವೇಗಕ್ಕೆ ಕಡಿವಾಣ ಬೀಳಲಿ
ಮರಳು ತುಂಬಲು ತೆರಳುತ್ತಿರುವ ಟಿಪ್ಪರ್‌ಗಳು ಮಿತಿಮೀರಿದ ವೇಗದಲ್ಲಿ ಸಂಚರಿಸಿದ್ದು ಸಂಬAಸಿದವರು ಈ ವೇಗಕ್ಕೆ ಕಡಿವಾಣ ಹಾಕಬೇಕೆಂಬ ಆಗ್ರಹ ಕೇಳಿದೆ.
ಮರಳು ತುಂಬಲು ನಸುಕಿನ ಜಾವವೇ ಅಮೀನಗಡ ಮಾರ್ಗವಾಗಿ ಟಿಪ್ಪರ್ ಸಂಚಾರ ಆರಂಭವಾಗುತ್ತದೆ. ಆದರೆ ಇಲ್ಲಿ ನಾ ಮುಂದು ತಾ ಮುಂದು ಎಂದು ಪೈಪೋಟಿಗೆ ಬಿದ್ದಂತೆ ಟಿಪ್ಪರ್ ಚಾಲಕರು ಅತಿ ವೇಗದಿಂದ ಟಿಪ್ಪರ್ ಚಲಾಯಿಸುತ್ತಾರೆ.
ಇದು ಪಟ್ಟಣದ ಬಾಗಲಕೋಟೆ ಹಾಗೂ ಹುನಗುಂದ ಮಾರ್ಗದಲ್ಲಿ ವಾಯು ವಿಹಾರಕ್ಕೆ ತೆರಳುವವರು ಟಿಪ್ಪರ್‌ಗಳ ವೇಗಕ್ಕೆ ಸುಸ್ತಾಗಿ ಹೋಗಿದ್ದಾರೆ. ಒಮ್ಮಲೇ ರ‍್ರನೆ ಬರುವ ಟಿಪ್ಪರ್‌ಗಳು ಎಲ್ಲ ತಮ್ಮ ಮೇಲೆಯೇ ಎಗರುತ್ತವೆ ಎಂದು ಭಯ ಪಡುವಂತಾಗಿದೆ.
ಹೀಗಾಗಿ ಈ ಪ್ರದೇಶದಲ್ಲಿ ಬೆಳಗ್ಗೆ ಅಪಾಯ ತಂದೊಡ್ಡುವ ಹಂತ ತಲುಪಿದ್ದು ಇಂತಹ ಟಿಪ್ಪರ್‌ಗಳ ವೇಗಕ್ಕೆ ಸಂಬAಸಿದವರು ಬ್ರೇಕ್ ಹಾಕಬೇಕೆಂಬ ಆಗ್ರಹ ಕೇಳಿ ಬಂದಿದೆ.