This is the title of the web page
This is the title of the web page

Live Stream

January 2025
S M T W T F S
 1234
567891011
12131415161718
19202122232425
262728293031  

| Latest Version 9.4.1 |

Local NewsState News

ಸಂವಿಧಾನ ಜಾಗೃತಿ ಜಾಥಾ ಸಂಚಾರ ಯಶಸ್ಸಿಗೆ ಸಹಕರಿಸಿ : ಶಶಿಧರ ಕುರೇರ್

ಸಂವಿಧಾನ ಜಾಗೃತಿ ಜಾಥಾ ಸಂಚಾರ ಯಶಸ್ಸಿಗೆ ಸಹಕರಿಸಿ : ಶಶಿಧರ ಕುರೇರ್

ಬಾಗಲಕೋಟೆ:

ಸಂವಿಧಾನದ ಆಶಯಗಳನ್ನು ಜನಸಾಮಾನ್ಯರಿಗೆ ತಿಳಿಸುವ ಉದ್ದೇಶದಿಂದ ಜ. 26 ರಿಂದ ಫೆ.23 ರವರೆಗೆ ಜಿಲ್ಲೆಯಲ್ಲಿ ಸಂಚರಿಸಲಿರುವ ಸಂವಿಧಾನ ಜಾಗೃತಿ ಜಾಥಾಗೆ ಎಲ್ಲರೂ ಸಹಕರಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ್ ಸೂಚಿಸಿದರು.

ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಜರುಗಿದ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮ ಪೂರ್ವ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜಿಲ್ಲಾ ಉಸ್ತುವಾರಿ ಸಚಿವರು ಜ. 26 ರಂದು ಸಂವಿಧಾನ ಜಾಗೃತಿ ಜಾಥಾ ವಾಹನಕ್ಕೆ ಚಾಲನೆ ನೀಡಲಿದ್ದು, ಬಾಗಲಕೋಟ ಮತ್ತು ಜಮಖಂಡಿ ಉಪವಿಭಾಗಗಳ ಗ್ರಾಮ ಪಂಚಾಯತ ಮತ್ತು ನಗರ ಪ್ರದೇಶದಲ್ಲಿಯೂ ಜಾಗೃತಿ ಜಾಥಾ ಸಂಚರಿಸಲು ಈಗಾಗಲೇ ರೂಟ್ ಮ್ಯಾಪ್ ತಯಾರಿಸಲಾಗಿದೆ ಎಂದರು.

ಸ್ತಬ್ದಚಿತ್ರ ಹಾಗೂ ಎಲ್ ಇ ಡಿ ಒಳಗೊಂಡ ಎರಡು ಪ್ರತ್ಯೇಕ ವಾಹನಗಳು ಪ್ರತಿದಿನ 4 ರಿಂದ 5 ಪಂಚಾಯತಿಗಳಲ್ಲಿ ಸಂಚರಿಸಿ ಎಲ್ಲರ ಸಹಕಾರದೊಂದಿಗೆ ಸಂವಿಧಾನ ಆಶಯಗಳ ಕುರಿತು ಜಾಗೃತಿ ಮೂಡಿಸಲಿವೆ. ಸರಕಾರಿ ಕಾಲೇಜುಗಳಲ್ಲಿ ರಾಜ್ಯಶಾಸ್ತ್ರ ಬೋಧಿಸುವ ಉಪನ್ಯಾಸಕರು ಜನಸಾಮಾನ್ಯರಿಗೆ ಸಂವಿಧಾನ ಮಹತ್ವವನ್ನು ಮನಮುಟ್ಟುವಂತೆ ತಿಳಿಸಲು ಕ್ರಮ ವಹಿಸಬೇಕು ಎಂದು ಹೇಳಿದರು.

ಜಾಗೃತಿ ಜಾಥಾ ಯಶಸ್ವೀಯಾಗಲು ಎಲ್ಲರ ಸಹಭಾಗಿತ್ವ ಬಹುಮುಖ್ಯವಾಗಿರುತ್ತದೆ. ತಾಲೂಕು ಮಟ್ಟದ ಅಧಿಕಾರಿಗಳು ಅಗತ್ಯವಾದ ಸಿದ್ದತೆಯಲ್ಲಿರಬೇಕು. ಸ್ಥಳೀಯ ವಿವಿಧ ಸಂಘ ಸಂಸ್ಥೆಗಳಿಂದಿಗೆ ಸಭೆ ಜರುಗಿಸಿ ಸಂಘದ ಪದಾಧಿಕಾರಿಗಳು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮಾಡಿ ಸಂವಿಧಾನದ ಆಶಯಗಳನ್ನು ತಿಳಿದುಕೊಳ್ಳುವಂತೆ ಪ್ರೇರೆಪಿಸಬೇಕು. ಜನಾಕರ್ಷಣೆಗೆ ವಿವಿಧ ಜಾನಪದ ಕಲಾ ತಂಡಗಳು ಜೋತೆಗಿರಲಿವೆ. ಜಾಥಾ ಸಂದರ್ಭದಲ್ಲಿ ಕರಪತ್ರ, ಸಂವಿಧಾನ ಪೀಠಿಕೆಯ ಝರಾಕ್ಸ್ ಪ್ರತಿಗಳನ್ನು ವಿತರಿಸಲು ಕ್ರಮವಹಿಸಿ ಎಂದು ತಿಳಿಸಿದರು.

ಜಾಗೃತಿ ಜಾಥಾ ಸಂಚರಿಸಿ ಜನ ಸಮಾನ್ಯರಿಗೆ ಅರಿವು ಮೂಡಿಸುವ ಸಂದರ್ಭದಲ್ಲಿ ಸ್ಥಳೀಯ ಸಂಘಟನೆಗಳು ಸಡಗರದಿಂದ ಪಾಲ್ಗೋಂಡು ಹಬ್ಬದ ರೀತಿಯಲ್ಲಿ ಆಚರಿಸಿ ಯಶಸ್ವಿಗೊಳಿಸಲು ಸಹಕಾರ ನೀಡುವುದರ ಜೋತೆಗೆ ಯಾವುದೇ ವಿವಾದ ಗೊಂದಲಗಳಿಗೆ ಅವಕಾಶ ನೀಡಬಾರದು ಎಂದರು.

ಸಭೆಯುಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ನಂದಾ ಹಣಬರಟ್ಟಿ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ವಿವಿಧ ಸಂಘಟನೆಗಳ ಅಧ್ಯಕ್ಷರು ಉಪಸ್ಥಿತರಿದ್ದರು.

Nimma Suddi
";