This is the title of the web page
This is the title of the web page

Live Stream

February 2025
S M T W T F S
 1
2345678
9101112131415
16171819202122
232425262728  

| Latest Version 9.4.1 |

Education NewsState News

ಎರಡನೇ ಹಂತದ ಕೋವಿಡ್ ಲಸಿಕೆ ಕಾರ್ಯಕ್ಕೆ ಚಾಲನೆ

ಕೋವಿಶೀಲ್ಡ್ ಲಸಿಕೆ ಪಡೆದ ಸಿಇಓ ಟಿ.ಭೂಬಾಲನ್

ನಿಮ್ಮ ಸುದ್ದಿ ಬಾಗಲಕೋಟೆ

ನವನಗರದ ಜಿಲ್ಲಾಸ್ಪತ್ರೆಯಲ್ಲಿ ಜಿಪಂ ಸಿಎಒ ಟಿ.ಭೂಬಾಲನ್ ಕೋವಿಶಿಲ್ಡ್ ಲಸಿಕೆ ಪಡೆದರು. ಅವರ ಜತೆ ಜಿಪಂ ಉಪ ಕಾರ್ಯದರ್ಶಿ ಅಮರೇಶ ನಾಯಕ, ಅಪರ ಜಿಲ್ಲಾಕಾರಿ ಮಹಾದೇವ ಮುರಗಿ, ಜಮಖಂಡಿ ಉಪವಿಭಾಗಾಕಾರಿ ಸಿದ್ದು ಹುಲ್ಲೊಳ್ಳಿ ಸೇರಿದಂತೆ ಇತರೆ ಇಲಾಖೆಯ ಅಕಾರಿ ಹಾಗೂ ಸಿಬ್ಬಂದಿ ಲಸಿಕೆ ಪಡೆದರು.
ಕೋವಿಡ್ ನಿಯಂತ್ರಣಕ್ಕೆ ಶ್ರಮಿಸಿದ ಕಾರ್ಯಕರ್ತೆಯರಿಗೆ ಲಸಿಕೆ ನೀಡುವ ಎರಡನೇ ಹಂತದ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ದೊರೆತಿದೆ. ಎರಡನೇ ಹಂತದಲ್ಲಿ ಜಿಲ್ಲೆಯಲ್ಲಿ ೬,೮೭೬ ಜನ ಹೆಸರು ನೊಂದಾಯಿಸಿದ್ದಾರೆ. ಅದರಲ್ಲಿ ಕಂದಾಯ ಇಲಾಖೆ ೮೪೪, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ ರಾಜ್ ಇಲಾಖೆಯ ೨,೩೧೦, ಪೊಲೀಸ್ ಇಲಾಖೆಯ ೨,೭೯೨, ಪೌರಾಡಳಿತ ಇಲಾಖೆಯ ೯೩೦ ಇದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಡಿಎಚ್‌ಒ ಡಾ.ಎ.ಎನ್.ದೇಸಾಯಿ, ಫೆ.೮ರಿಂದ ಮೂರು ದಿನ ಎರಡನೇ ಹಂತದ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುತ್ತಿದ್ದು, ನೊಂದಾಯಿಸಿಕೊಂಡ ಪ್ರತಿಯೊಬ್ಬರು ಕೋವಿಶೀಲ್ಡ್ ಲಸಿಕೆಯನ್ನು ಹಾಕಿಸಿಕೊಳ್ಳಬೇಕೆಂದು ಮನವಿ ಮಾಡಿದರು.

ಜಿಲ್ಲೆಯಲ್ಲಿ ೨೦ ಕೇಂದ್ರಗಳಲ್ಲಿ ಲಸಿಕೆ ಹಾಕಲಾಗುತ್ತಿದೆ. ಸೋಮವಾರ ೫೮೫ ಜನ ಲಸಿಕೆ ಪಡೆದ್ದಾರೆ. ಅದರಲ್ಲಿ ಹೆಲ್ತಕೇರ್ ವರ್ಕ್ಸ್ರ್ ೯೦ ಹಾಗೂ ಫ್ರಂಟ್‌ಲೈನ್ ೪೯೫ ಜನ ಇದ್ದಾರೆಂದು ತಿಳಿಸಿದರು.

ಜಿಲ್ಲಾ ಶಸ್ತಚಿಕಿತ್ಸಕ ಡಾ.ಪ್ರಕಾಶ ಬಿರಾದಾರ, ಜಿಲ್ಲಾ ಆರ್‌ಸಿಎಚ್ ಅಕಾರಿ ಡಾ.ಬಿ.ಜಿ.ಹುಬ್ಬಳ್ಳಿ, ಕೋವಿಡ್ ಜಿಲ್ಲಾ ನೋಡಲ್ ಅಕಾರಿ ಡಾ.ಸಿ.ಎಸ್.ಜವಳಿ ಇತರರು ಇದ್ದರು.

 

Nimma Suddi
";