ಕೊಲಂಬೊ: ಸತತ ಮಳೆ ಹಿನ್ನೆಲೆಯಲ್ಲಿ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ‘ಸೂಪರ್-4’ ಹಂತದ ನಾಲ್ಕು ಪಂದ್ಯಗಳನ್ನು ಕೊಲಂಬೊದಿಂದ ಪಲ್ಲೆಕೆಲೆಗೆ ಸ್ಥಳಾಂತರ ಮಾಡಲು ಏಷ್ಯಾ ಕ್ರಿಕೆಟ್ ಮಂಡಳಿ ಚಿಂತನೆ ನಡೆಸಿದೆ.
ಕಳೆದ ಮೂರು ದಿನಗಳಿಂದ ಕೊಲಂಬೊದಲ್ಲಿ ನಿರಂತರ ಮಳೆ ಸುರಿಯುತ್ತಿದೆ. ಇನ್ನೂ ಮೂರ್ನಾಲ್ಕು ದಿನಗಳ ಕಾಲ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಪಂದ್ಯಾವಳಿಯ ಪ್ರಮುಖ ಆಕರ್ಷಣೆಯಾಗಿರುವ ‘ಸೂಪರ್-4’ ಹಂತದ ಪಂದ್ಯಗಳಿಗೆ ಮಳೆಯ ಅಡಚಣೆ ತಪ್ಪಿಸಲು ನಾಲ್ಕು ಪಂದ್ಯಗಳನ್ನು ಪಲ್ಲೆಕೆಲೆ, ಡಂಬೂಲಾ ಅಥವಾ ಹಂಬಂತೋಟಕ್ಕೆ ಸ್ಥಳಾಂತರ ಮಾಡಲು ಚಿಂತನೆ ನಡೆಸಲಾಗಿದೆ. ಈ ಸಂಬಂಧ ಟೂರ್ನಿಯ ಆತಿಥ್ಯ ವಹಿಸಿರುವ ಪಾಕಿಸ್ತಾನ ಹಾಗೂ ಶ್ರೀಲಂಕಾ ಕ್ರಿಕೆಟ್ ಮಂಡಳಿ ಜತೆ ಏಷ್ಯಾ ಕ್ರಿಕೆಟ್ ಮಂಡಳಿ ಮಾತುಕತೆ ನಡೆಸಿದೆ.
ಪಲ್ಲೆಕೆಲೆಯಲ್ಲೂ ಮಳೆ ಸುರಿಯುತ್ತಿದ್ದು ಮುಂದಿನ ದಿನಗಳಲ್ಲಿ ಮಳೆ ಕಡಿಮೆಯಾಗುವ ಸೂಚನೆ ಇದೆ. ಹೀಗಾಗಿ ಕೊಲಂಬೊ ಪಂದ್ಯಗಳನ್ನು ಸ್ಥಳಾಂತರ ಮಾಡುವ ಚಿಂತನೆ ನಡೆಸಲಾಗಿದೆ.
ಭಾರತ ಹಾಗೂ ಪಾಕಿಸ್ತಾನ ಪಂದ್ಯ ಸಹ ಮಳೆಯಿಂದ ಅಪೂರ್ಣಗೊಂಡಿತ್ತು. ಮಳೆಯ ಅಡ್ಡಿಯ ನಡುವೆಯೂ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ತಂಡ 50 ಓವರ್‌ಗಳಲ್ಲಿ 266 ರನ್ ಗಳಿಸಿತ್ತು. ನಿರಂತರ ಮಳೆಯಿಂದ ಪಾಕಿಸ್ತಾನ ಬ್ಯಾಟಿಂಗ್ ಮಾಡಲು ಸಾಧ್ಯವಾಗದೆ ಪಂದ್ಯ ರದ್ದಾಗಿತ್ತು. ಸೆ.4 ರಂದು ನಡೆಯಲಿರುವ ಭಾರತ-ನೇಪಾಳ ಪಂದ್ಯಕ್ಕೂ ಮಳೆಯ ಭೀತಿ ಎದುರಾಗಿದೆ.
Nimma Suddi > International News > ಏಷ್ಯಾಕಪ್ ‘ಸೂಪರ್-4’ ಹಂತದ ಪಂದ್ಯಗಳ ಸ್ಥಳಾಂತರ?
ಏಷ್ಯಾಕಪ್ ‘ಸೂಪರ್-4’ ಹಂತದ ಪಂದ್ಯಗಳ ಸ್ಥಳಾಂತರ?
Team One04/09/2023
posted on

Leave a reply
Related News
ಕಿಂಗ್ ಕೊಹ್ಲಿ ಪ್ರಾಮಾಣಿಕತೆಗೆ ಈಗ 18 ವರ್ಷ
11/03/2025
ಸಿಎಂ ಬಜೆಟ್ ಮಂಡನೆ ಲೈವ್
07/03/2025
ಕನ್ನಡ ಸ್ವರಗಳ ಮೂಲಕ ಸ್ವಚ್ಛತೆ ಜಾಗೃತಿ
07/11/2024
ಮನೆ ಮನೆ ಸಮೀಕ್ಷೆ ಕಾರ್ಯ ಪರಿಶೀಲನೆ
19/09/2024