This is the title of the web page
This is the title of the web page

Live Stream

January 2025
S M T W T F S
 1234
567891011
12131415161718
19202122232425
262728293031  

| Latest Version 9.4.1 |

Local NewsState News

ಶಿವಯೋಗಿ ಸಿದ್ದರಾಮೇಶ್ವರರು ಕಾಯಕಯೋಗಿ : ಪಿ.ಸಿ.ಗದ್ದಿಗೌಡರ

ಶಿವಯೋಗಿ ಸಿದ್ದರಾಮೇಶ್ವರರು ಕಾಯಕಯೋಗಿ : ಪಿ.ಸಿ.ಗದ್ದಿಗೌಡರ

ಬಾಗಲಕೋಟೆ

ಆಚಾರ ವಿಚಾರಗಳೊಂದಿಗೆ ಸಕಲ ಜೀವಿಗಳಿಗಳ ಒಳತಿಗಾಗಿ ಕೆರೆ, ಕಟ್ಟೆ, ಬಾವಿ ನಿರ್ಮಿಸಿ, ನೀರಿನ ಮಹತ್ವನ್ನು ತಿಳಿಸಿಕೊಡಲು ಶ್ರಮಿಸಿದ ಶಿವಯೋಗಿ ಸಿದ್ದರಾಮೇಶ್ವರರು ಕಾಯಕಯೋಗಿಯಾಗಿದ್ದರು ಎಂದು ಸಂಸದ ಪಿ. ಸಿ. ಗದ್ದಿಗೌಡರ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಸೋಮವಾರ ನವನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಯಾವುದೇ ಕಾಯಕವಾಗಲಿ ಶ್ರದ್ದೆಯಿಂದ ಪ್ರಾಮಾಣಿಕವಾಗಿ ಮಾಡಬೇಕು ಎಂಬ ನಂಬಿಕೆಯನ್ನುಳ್ಳ ಅಂದಿನ ೧೨ ನೇ ಶತಮಾನದ ಶಿವಯೋಗಿ ಸಿದ್ದರಾಮೇಶ್ವರರು ಕಾಯಕ ಮಾಡುತ್ತಾ, ವಚನಗಳನ್ನು ರಚಿಸಿ ಅವುಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದಿದರು. ಅವರ ಆದರ್ಶಗಳನ್ನು ಇಂದಿನ ಪೀಳಿಗೆ ಅಳವಡಿಸಿಕೊಳ್ಳಬೇಕಾಗಿದೆ ಎಂದರು.

ಎಮ್ ಎಲ್ ಸಿ. ಪಿ ಹೆಚ್ ಪೂಜಾರ ಅವರು ಮಾತನಾಡಿ ಸಿದ್ದರಾಮೇಶ್ವರರು ಕೇವಲ ಪ್ರವಚನ ಮಾಡುವ ಯೋಗಿ ಆಗದೇ ಕಾಯಕಯೋಗಿ ಆದವರು. ಕಾಯಕದಲ್ಲೇ ಕೈಲಾಸ ಕಂಡವರು. ಕಾಯಕದೊಂದಿಗೆ ವಚನಗಳ ಮೂಲಕ ಸಮಾಜದ ಅಂಕು ಡೊಂಕುಗಳನ್ನು ತಿದ್ದಿ, ಒಳ್ಳೆಯ ಸಂದೇಶದ ಕೊಡುಗೆಯನ್ನು ನೀಡಿದ ದಾರ್ಶನಿಕ. ಮಾನವೀಯ ಅಂತಕರಣ ಹೊಂದಿದ ಶಿವಯೋಗಿ ಸಿದ್ದರಾಮೇಶ್ವರ ಕೇವಲ ಒಂದು ಸಮುದಾಯಕ್ಕೆ ಸೀಮಿತವಲ್ಲ. ಮಾನವ ಕುಲಕ್ಕೆ ಮಾದರಿಯಾದವರು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಹೆಚ್.ವಾಯ್. ಮೇಟಿ ಮಾತನಾಡಿ ಶಿವ ಶರಣರ ನಡೆ ನುಡಿ ಎರಡೂ ಒಂದೇ ಆಗಿತ್ತು. ಶರಣರು ಸತ್ಯ ಧರ್ಮಕ್ಕೆ ಹೋರಾಡಿದವರು. ಮನುಷ್ಯನು ಎಲ್ಲರೊಂದಿಗೆ ಬೆರೆಯುವುದೇ ನಿಜವಾದ ಧರ್ಮ, ಬೋವಿ ಸಮಾಜ ಹಿಂದುಳಿಯದೇ ಎಲ್ಲರೊಂದಿಗೆ ಬೆರೆತು ಶಿಕ್ಷಣ ಪಡೆದು ಮುಂದೆ ಬರಬೇಕು. ಶಿಕ್ಷಣವಿದ್ದಾಗ ಮಾತ್ರ ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಬೆಳೆಯಲು ಸಾಧ್ಯವಾಗುತ್ತದೆ. ಸರಕಾರದ ಯೋಜನೆಗಳ ಸದ್ಬಳಕೆ ಮಾಡಿಕೊಳ್ಳುವ ಮೂಲಕ ಸಮುದಾಯದವರು ಅಭಿವೃದ್ಧಿ ಹೊಂದಬೇಕು ಎಂದರು.

ಕಾರ್ಯಕ್ರಮದಲ್ಲಿ ಬದಾಮಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರೋಫೆಸರ್ ಚಂದ್ರಶೇಖರ ಹೆಗಡೆ ವಿಶೇಷ ಉಪನ್ಯಾಸ ನೀಡಿದರು. ಶ್ರೀದರ ವಂದಾಲ ಹಾಗೂ ತಂಡದವರು ವಚನ ಗಾಯನ ಪ್ರಸ್ತುತ ಪಡಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ ಜೈನಾಪೂರ ಸ್ವಾಗತಿಸಿದರು. ಶಂಕರಲಿಂಗ ದೇಸಾಯಿ ನಿರೂಪಿಸಿದರು.

ಬಾಗಲಕೋಟ ತಹಶೀಲ್ದಾರ ಅಮರೇಶ ಪಮ್ಮಾರ, ಸಮುದಾಯ ಮುಖಂಡರಾದ ಅಶೋಕ ಲಿಂಬಾವಳಿ, ಸಿದ್ರಾಮಪ್ಪಾ ಪಾತ್ರೋಟಿ, ಮುತ್ತಪ್ಪ ಪಾತ್ರೋಟಿ ಮತ್ತು ಆರ್‌ಎಫ್.ಮುದೋಳ ಇದ್ದರು.

ಭಾವಚಿತ್ರ ಮೆರವಣಿಗೆ
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಜಿಲ್ಲಾಡಳಿತ ಭವನ ಆವರಣದಲ್ಲಿ ಶಿವಯೋಗಿ ಶ್ರೀ ಸಿದ್ದರಾಮೇಶ್ವರ ಭಾವಚಿತ್ರಕ್ಕೆ ಎಮ್ ಎಲ್ ಸಿ ಪಿ. ಹೆಚ್ ಪೂಜಾರ ಪೂಜೆ ಸಲ್ಲಿಸಿ ವಿವಿಧ ಜಾನಪದ ಕಲಾ ತಂಡಗಳ ಮೇರವಣಿಗೆಗೆ ಚಾಲನೆ ನೀಡಿದರು. ಉಪ ವಿಬಾಗಾಧಿಕಾರಿ ಶ್ವೇತಾ ಬೀಡಿಕರ ಹಾಗೂ ಇತರರು ಇದ್ದರು.

Nimma Suddi
";