This is the title of the web page
This is the title of the web page

Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Education NewsState News

ಕಥೆಗಳು ಕಾದಂಬರಿಗಳಾಗದಿರಲಿ:ಚನ್ನಪ್ಪ ಕಟ್ಟಿ

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ:ಕಥನ ಗೋಷ್ಠಿ

ನಿಮ್ಮ ಸುದ್ದಿ ಬಾಗಲಕೋಟೆ

ಕಥೆಗಳು ನಮ್ಮೊಳಗಿರುವ ಮೃಗೀಯ ಗುಣ ತೊಡೆದುಹಾಕಿ ಮಾನವೀಯ ಗುಣ ಬೆಳೆಯವಂತೆ ಮಾಡುತ್ತವೆ ಎಂದು ಸಿಂದಗಿಯ ಕಥೆಗಾರ ಚನ್ನಪ್ಪ ಕಟ್ಟಿ ತಿಳಿಸಿದರು.

ಜಿಲ್ಲೆಯ ಶಿರೂರಲ್ಲಿ ನಡೆದ ಜಿಲ್ಲಾ 9ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕಥನ ಗೋಷ್ಠಿಯಲ್ಲಿ ಅವರು ಮಾತನಾಡಿದರು. ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಕಥನ ಗೋಷ್ಠಿ ಹೊಸ ಪ್ರಯೋಗ. ಮುಂದಿನ ಸಮ್ಮೇಳನದಲ್ಲಿ ಕಥನ ಗೋಷ್ಠಿ ಇರಬೇಕೋ? ಬೇಡವೋ ಎಂಬುದನ್ನು ಕಥೆಗಾರರು ಸಾಹಿತ್ಯಾಸಕ್ತರಿಗೆ ಬೇಜಾರಾಗದಂತೆ ಎಚ್ಚರಿಕೆ ವಹಿಸುವುದು ಅಗತ್ಯ. ಜವಾಬ್ದಾರಿಯೊಂದಿಗೆ ವಹಿಸಿಕೊಂಡ ಅವಯಲ್ಲಿ ಕಥೆಗಳು ಮುಗಿಯುವಂತಾಗಬೇಕು. ಕಾದಂಬರಿಯೇ ಬೇರೆ, ಕಥೆಯೇ ಬೇರೆ ಆಗಿರುತ್ತಿದ್ದು, ಅದರ ಅರಿವು ಕಥೆಗಾರರಿಗೆ ಇರಬೇಕು ಎಂದರು.

ಸಾಹಿತಿ ಲಕ್ಷ್ಮಣ ಬದಾಮಿ ಆಶಯ ನುಡಿ ಹೇಳಿದರು. ಎಂ.ಎಸ್.ಸಜ್ಜನರ-ಬಾಲ್ಯ ವಿವಾಹದ ಕರಾಳತೆ, ದಾನಮ್ಮ ಮಂಗಸೂಳಿ-ದಿಟ್ಟ ಹೆಜ್ಜೆ, ವೀರಮ್ಮ ಪಾಟೀಲ-ಕವಿರಾಜ, ಉಮೇಶ ತಿಮ್ಮಾಪೂರ-ಕಾಯ ಕರಗಿದ ಮೇಲೆ, ಆರ್.ಸಿ.ಚಿತ್ತವಾಡಗಿ-ಕ್ಕಾರವಿರಲಿ, ಜ್ಯೋತಿಬಾ ಅವತಾಡೆ-ಒಕ್ಕಟ್ಟಿನಲ್ಲಿ ಬಿಕ್ಕಟ್ಟಿನ ಪರಿಹಾರ ಕುರಿತ ಕಥೆ ಓದಿದರು.

ಅತಿಥಿಗಳಾಗಿದ್ದ ಸಾಹಿತಿ ಡಾ.ಪ್ರಕಾಶ ಖಾಡೆ, ಸಮ್ಮೇಳದಲ್ಲಿ ಕಥನ ಗೋಷ್ಠಿ ನಡೆಸಿರುವ ಕಸಾಪ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದರು. ಅವನು ದಾರಿಯಲ್ಲಿ ಹೋಗುವಾಗ ಬೈಕ್‌ನಲ್ಲಿ ಪೆಟ್ರೋಲ್ ಇದೆಯೋ ಇಲ್ಲವೋ ಎಂದು ಕಡ್ಡಿ ಗೀರಿ ನೋಡಿದಾ ಎಂಬ ಅರ್ಥ ಗರ್ಭಿತ ಒಂದು ಸಾಲಿನ ಕಥೆ ಹೇಳಿದರು. ಸಾಹಿತಿ ಕಿರಣ ಬಾಳಾಗೋಳ ಮಾತನಾಡಿದರು.

ಮಹಾಂತೇಶ ಗಜೇಂದ್ರಗಡ, ಶಿವಾನಂದ ಅಂಗಡಿ, ಸುರೇಶ ಮನಗೂಳಿ, ಪ್ರಕಾಶ ಬಾಳಕ್ಕನವರ, ಮಲ್ಲಿಕಾರ್ಜುನ ಪೂಜಾರ ಇತರರು ಇದ್ದರು.

ಕವಿ ಸಮಯ
ಸಂಜೆ ನಡೆದ ಕವಿ ಸಮಯ ಗೋಷ್ಠಿಯಲ್ಲಿ ಮಾಜಿ ಶಾಸಕ ಮಲ್ಲಿಕಾರ್ಜು ಬನ್ನಿ ಅಧ್ಯಕ್ಷತೆ ವಹಿಸಿದ್ದರು. ಕವಿಯಿತ್ರಿ ಜಯಶ್ರೀ ಭಂಡಾರಿ ಆಶಯ ನುಡಿ ಹೇಳಿದರು. ಅತಿಥಿಗಳಾಗಿ ಕಮಲಾ ರುದ್ರಾಕ್ಷಿ, ಸುರೇಶ ದೇಸಾಯಿ, ಎಸ್.ಸಿ.ಆಡಿನ, ಅಂದಾನಪ್ಪ ಕೋಟಿ, ಎಸ್.ಎಸ್.ಕಲಗುಡಿ, ಕವಿಗಳಾಗಿ ಬಾಳಪ್ಪ ಹಳ್ಳಿ, ಶ್ರೀಕಾಂತ ಜಾಧವ, ರೇಖಾ ಗೂಗಿ, ಪ್ರಿಯಾ ಬಸರಕೋಡ, ಗಿರಿಯಪ್ಪ ಕಿರಸೂರ, ಸದಾಶಿವ ಮರಡಿ, ರವೀಂದ್ರ ಉಪ್ಪಾರ, ಪ್ರಭು ಮಾಲಗಿತ್ತಿಮಠ, ಬಸವರಾಜ ಮುಕ್ಕುಪ್ಪಿ, ಮಲ್ಲು ಬೂದಿಹಾಳ, ಟಿ.ಬಿ.ಭಜಂತ್ರಿ, ಎಸ್.ಬಿ.ಕೋರಿ, ಶಿವಕುಮಾರ ಕರನಂದಿ ಬಸವರಾಜ ಶೆಟ್ಟಿ ಇತರರು ಇದ್ದರು.

 

Nimma Suddi
";