This is the title of the web page
This is the title of the web page

Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Health & Fitness

ಆರೋಗ್ಯದ ಬಗ್ಗೆ ಕಾಳಜಿ ವಹಿಸಿ: ಕ್ಯಾನ್ಸರ್ ನಿಯಂತ್ರಣಕ್ಕೆ ಉಪಯೋಗಿಸಿ ಅಂಜೂರದ ನೀರು

ಆರೋಗ್ಯದ ಬಗ್ಗೆ ಕಾಳಜಿ ವಹಿಸಿ: ಕ್ಯಾನ್ಸರ್ ನಿಯಂತ್ರಣಕ್ಕೆ ಉಪಯೋಗಿಸಿ ಅಂಜೂರದ ನೀರು

ಅಂಜೂರದ ನೀರು ನೈಸರ್ಗಿಕ ನಿರ್ವಿಶೀಕರಣವಾಗಿ ಕಾರ್ಯನಿರ್ವಹಿಸುತ್ತಿದ್ದು, ದೇಹದಿಂದ ವಿಷ ಹೊರಹಾಕುತ್ತದೆ. ದಿನವೂ 3-4 ಅಂಜೂರದ ಹಣ್ಣುಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿ ಬೆಳಿಗ್ಗೆ ಎದ್ದಕೂಡಲೆ ಸೇವಿಸಿದ್ದು, ನೀವು ಅಂಜೂರ ನೆನೆಸಿಟ್ಟ ನೀರನ್ನು ಸೇವಿಸುವುದರಿಂದ ಅದು ನಿಮ್ಮ ದೇಹಕ್ಕೆ ತಕ್ಷಣದ ಶಕ್ತಿಯನ್ನು ನೀಡುತ್ತದೆ.

ಅಂಜೂರದ ನೀರಿನಲ್ಲಿ ಉತ್ಕರ್ಷಣ ನಿರೋಧಕಗಳು, ಜೀವಸತ್ವಗಳು ಮತ್ತು ಖನಿಜಗಳು ಸಮೃದ್ಧವಾಗಿವೆ. ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ಸಹಾಯ ಮಾಡುತ್ತಿದ್ದು, ಅಂಜೂರದಲ್ಲಿ ಮ್ಯಾಂಗನೀಸ್, ಸತು, ಮೆಗ್ನೀಸಿಯಮ್ ಮತ್ತು ಕಬ್ಬಿಣ ಸೇರಿದಂತೆ ಖನಿಜಗಳು ಅಧಿಕವಾಗಿವೆ. ಅವು ಸಂತಾನೋತ್ಪತ್ತಿಯ ಆರೋಗ್ಯಕ್ಕೆ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ.

ಹಾರ್ಮೋನ್ ಅಸಮತೋಲನ ಮತ್ತು ಇತರ ಋತುಬಂಧದ ನಂತರದ ಸಮಸ್ಯೆಗಳ ವಿರುದ್ಧ ರಕ್ಷಿಸಲು ಸಹಾಯ ಮಾಡುತ್ತಿದ್ದು, ಪಿಸಿಒಡಿಯಿಂದ ಬಳಲುತ್ತಿರುವ ಮಹಿಳೆಯರಿಗೂ ಇದು ಅತ್ಯಗತ್ಯ. ಅಂಜೂರದಲ್ಲಿ ನಾರಿನಂಶ ಹೇರಳವಾಗಿದೆ. ಇದನ್ನು ನೆನೆಸಿದ ನಂತರ ತಿನ್ನುವುದರಿಂದ ಹೆಚ್ಚು ಕಾಲ ಹೊಟ್ಟೆ ತುಂಬಿರುತ್ತದೆ ಮತ್ತು ತೂಕ ಇಳಿಸಲು ಸಹಾಯ ಮಾಡುತ್ತದೆ.

ಮಲಬದ್ಧತೆ ನಿವಾರಣೆ: ಅಂಜೂರ ಕರಗಬಲ್ಲ ಮತ್ತು ಕರಗದ ಫೈಬರ್ ಎರಡನ್ನೂ ಹೊಂದಿದೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಮಲಬದ್ಧತೆಯನ್ನು ನಿವಾರಿಸುತ್ತದೆ.

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ: ಅಂಜೂರದಲ್ಲಿರುವ ಕ್ಲೋರೊಜೆನಿಕ್ ಆಮ್ಲ, ಪೊಟ್ಯಾಸಿಯಮ್, ಒಮೆಗಾ 3 ಮತ್ತು 6 ಕೊಬ್ಬಿನಾಮ್ಲಗಳು ರಕ್ತದ ಸಕ್ಕರೆಯ ನಿಯಂತ್ರಣದಲ್ಲಿ ಸಹಾಯ ಮಾಡುತ್ತವೆ.

ಕ್ಯಾನ್ಸರ್ ನಿಯಂತ್ರಣ: ನೆನೆಸಿದ ಅಂಜೂರದ ಹಣ್ಣುಗಳ ನೀರನ್ನು ನಿಯಮಿತವಾಗಿ ಸೇವಿಸುವುದರಿಂದ ಸ್ತನ ಮತ್ತು ಕರುಳಿನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ.

ಹೊಳೆಯುವ ಚರ್ಮ: ಅಂಜೂರದಲ್ಲಿ ಸಮೃದ್ಧವಾಗಿರುವ ವಿಟಮಿನ್ ಸಿ ಆರೋಗ್ಯಕರ ಮತ್ತು ಹೊಳೆಯುವ ಚರ್ಮವನ್ನು ನೀಡುತ್ತದೆ.

ಮೂತ್ರಪಿಂಡದ ಕಲ್ಲುಗಳನ್ನು ಗುಣಪಡಿಸುತ್ತದೆ: ನೆನೆಸಿದ ಅಂಜೂರದ ಹಣ್ಣುಗಳ ನೀರನ್ನು ನಿಯಮಿತವಾಗಿ ಸೇವಿಸುವುದರಿಂದ ಮೂತ್ರಪಿಂಡದ ಕಲ್ಲುಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ.

ಹೃದಯವನ್ನು ಆರೋಗ್ಯಕ್ಕೆ ಸಹಾಯಕ: ನೆನೆಸಿದ ಅಂಜೂರದ ಹಣ್ಣನ್ನು ನಿಯಮಿತವಾಗಿ ಸೇವಿಸುವುದರಿಂದ ರಕ್ತದಲ್ಲಿನ ಕೊಬ್ಬಿನ ಕಣಗಳು ಅಥವಾ ಟ್ರೈಗ್ಲಿಸರೈಡ್‌ಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಹೃದಯದ ಆರೋಗ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಮೂಳೆಗಳ ಆರೋಗ್ಯಕ್ಕೆ ಪ್ರಯೋಜನಕಾರಿ: ಅಂಜೂರದ ಹಣ್ಣಿನ ನೀರಿನಲ್ಲಿ ಪೊಟ್ಯಾಸಿಯಮ್ ಮತ್ತು ಕ್ಯಾಲ್ಸಿಯಂ ಅಂಶ ತುಂಬಿರುತ್ತದೆ. ಇದು ಬಲವಾದ ಮೂಳೆಗಳನ್ನು ಒದಗಿಸುತ್ತದೆ.

ಗರ್ಭಿಣಿಯರಿಗೆ ಒಳ್ಳೆಯದು: ಅಂಜೂರದಲ್ಲಿ ವಿಟಮಿನ್ ಬಿ 6 ಮತ್ತು ಒಮೆಗಾ -3 ಕೊಬ್ಬಿನಾಮ್ಲಗಳು ಸಮೃದ್ಧವಾಗಿವೆ. ಇದು ಗರ್ಭಿಣಿ ಮಹಿಳೆಯರಲ್ಲಿ ಮಾರ್ನಿಂಗ್ ಸಿಕ್​ನೆಸ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

 

Nimma Suddi
";