This is the title of the web page
This is the title of the web page

Live Stream

July 2024
S M T W T F S
 123456
78910111213
14151617181920
21222324252627
28293031  

| Latest Version 9.4.1 |

Education NewsLocal NewsPolitics NewsState News

ಶ್ರೀರಾಮ ಮಂದಿರ ನಿರ್ಮಾಣ : ಭಾರತೀಯರಿಗೆ ಸಂಭ್ರಮ ಬಿಜೆಪಿ ಉಚ್ಛಾಟಿತರೊಂದಿಗೆ ಸಂಸದರ ಪಯಣ

<span class=ಶ್ರೀರಾಮ ಮಂದಿರ ನಿರ್ಮಾಣ : ಭಾರತೀಯರಿಗೆ ಸಂಭ್ರಮ ಬಿಜೆಪಿ ಉಚ್ಛಾಟಿತರೊಂದಿಗೆ ಸಂಸದರ ಪಯಣ" title="ಶ್ರೀರಾಮ ಮಂದಿರ ನಿರ್ಮಾಣ : ಭಾರತೀಯರಿಗೆ ಸಂಭ್ರಮ ಬಿಜೆಪಿ ಉಚ್ಛಾಟಿತರೊಂದಿಗೆ ಸಂಸದರ ಪಯಣ" decoding="async" srcset="https://nimmasuddi.com/whirtaxi/2024/01/2-scaled.jpg?v=1704672167 2560w, https://nimmasuddi.com/whirtaxi/2024/01/2-300x169.jpg?v=1704672167 300w, https://nimmasuddi.com/whirtaxi/2024/01/2-1024x578.jpg?v=1704672167 1024w, https://nimmasuddi.com/whirtaxi/2024/01/2-768x433.jpg?v=1704672167 768w, https://nimmasuddi.com/whirtaxi/2024/01/2-1536x866.jpg?v=1704672167 1536w, https://nimmasuddi.com/whirtaxi/2024/01/2-2048x1155.jpg?v=1704672167 2048w" sizes="(max-width: 2560px) 100vw, 2560px" />
ಬಾಗಲಕೋಟೆ :
ಸಮಸ್ತ ಭಾರತೀಯ ಹಿಂದೂಗಳು, ಹಲವು ವರ್ಷಗಳಿಂಡಿದ್ದ ಕನಸು ಇದೀಗ ನನಸಾಗುತ್ತಿದೆ. ಇದೇ ಜ. 22, ಭಾರತೀಯರಿಗೆ ಸಂಭ್ರಮದ ದಿನವಾಗಿದೆ. ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಭವ್ಯ ರಾಮ ಮಂದಿರದಲ್ಲಿ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ನಡೆಯಲಿದ್ದು, ಈ ಕಾರ್ಯದಲ್ಲಿ ಪ್ರತಿಯೊಬ್ಬರೂ ಮನೆಯ ಮುಂದೆ ದೀಪ ಹಚ್ಚಿ ಸಂಭ್ರಮಿಸುವ ಮೂಲಕ ಭಾಗಿಯಾಗಬೇಕು ಎಂದು ಸಂಸದ ಪಿ.ಸಿ. ಗದ್ದಿಗೌಡರ ಮನವಿ ಮಾಡಿದರು.
ಆಯೋಧ್ಯೆಯಿಂದ ಬಂದಿರುವ ಮಂತ್ರಾಕ್ಷತೆ, ಆಮಂತ್ರಣ ಪತ್ರಿಕೆ ಹಾಗೂ ಶ್ರೀರಾಮನ ಫೋಟೋಗಳನ್ನು ನವನಗರದ ಸೆಕ್ಟರ್ ನಂ.8ರಲ್ಲಿ ಮನೆ ಮನೆಗೆ ತೆರಳಿ ವಿತರಿಸಿ ಅವರು ಮಾತನಾಡಿದರು.
ಶ್ರೀರಾಮನ ಜನ್ಮಭೂಮಿ ಅಯೋಧ್ಯೆಯಲ್ಲಿ ಭವ್ಯವಾದ ರಾಮ ಮಂದಿರ ನಿರ್ಮಾಣಕ್ಕಾಗಿ ಹಲವಾರು ವರ್ಷಗಳಿಂದ ಹೋರಾಟ ನಡೆದಿದೆ. ಇದಕ್ಕಾಗಿ ಇಡೀ ದೇಶದ ಜನರೇ ಕಾತುರರಾಗಿದ್ದರು. ಜ.22ರಂದು ಈ ಕಾರ್ಯ ನೆರವೇರಲಿದೆ. ಬಾಗಲಕೋಟೆ ನಗರವೂ ಸೇರಿದಂತೆ ಜಿಲ್ಲೆಯ ಜನರು, ಈ ಕಾರ್ಯದಲ್ಲಿ ಭಾಗಿಯಾಗಬೇಕು. ಮನೆಯ ಮುಂದೆ ರಂಗೋಲಿ ಬಿಡಿಸಿ, ದೀಪಹಚ್ಚಬೇಕು. ಆಯೋಧ್ಯೆಯಿಂದ ಬಂದಿರುವ ಶ್ರೀರಾಮನ ಫೋಟೋಗೆ ನಿತ್ಯ ಪೂಜೆ ನೆರವೇರಿಸಬೇಕು ಎಂದು ಕೋರಿದರು.
ಚರಂತಿಮಠ ಮತ್ತು ವಸ್ತ್ರದ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ-ಮುಖಂಡ ಮಲ್ಲಿಕಾರ್ಜುನ ಚರಂತಿಮಠ ಮಾತನಾಡಿ, ಶ್ರೀರಾಮ ಮಂದಿರ ನಿರ್ಮಾಣ, ಸಮಸ್ತ ಭಾರತೀಯರ ಕನಸು. ಇದೀಗ ನನಸಾಗುತ್ತಿದೆ. ಅಯೋಧ್ಯೆಯಿಂದ ಬಂದಿರುವ ಮಂತ್ರಾಕ್ಷತೆ, ಆಮಂತ್ರಣಗಳನ್ನು ಮನೆ ಮನೆಗೂ ತಲುಪಿಸುವುದು ಒಂದು ಪವಿತ್ರ ಕಾರ್ಯ. ಸಮಸ್ತ ಹಿಂದೂಗಳ ಕನಸು ನನಸಾಗುವ ದಿನ ನಾವೆಲ್ಲ ಮನೆಯ ಮುಂದೆ ದೀಪ ಹಚ್ಚಿ ಸಂಭ್ರಮಿಸೋಣ. ಇದೊಂದು ಪಕ್ಷಾತೀತ, ರಾಷ್ಟ್ರಭಕ್ತಿಯ ಕಾರ್ಯಕ್ರಮ. ಇದಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು.
ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಗಂಗಾಧರ ಮುರನಾಳ, ಕಾಮಧೇನು ಸಂಸ್ಥೆಯ ಅಧ್ಯಕ್ಷ ರವಿ ಕುಮಟಗಿ, ಅಭಿಯಾನದ ಜಿಲ್ಲಾ ಪ್ರಮುಖರಾದ ಶಿವು ಮೇಲ್ನಾಡ, ವಿಜಯ ಸುಲಾಖೆ, ಕಳಕಪ್ಪ ಬಾದೋಡಗಿ, ಪಾಂಡು ಜಾಧವ, ಮಹೇಶ ಜಾಧವ, ರಾಘು ಕಲಾಲ, ಖಂಡೋಬಾ ಕಪಾಟಕರ, ಸುಶೀಲ ಸರೋದೆ, ವಿರೇಶ ಗಿಡ್ಡವೀರ, ಸೌರಬ ಹೂಂಕಿ, ಮಹೇಶ ದಾನಿ ಮುಂತಾದವರು ಪಾಲ್ಗೊಂಡಿದ್ದರು.

ಸಮಸ್ತ ಭಾರತೀಯರ ಕನಸು, ಇದೀಗ ನನಸಾಗುತ್ತಿದೆ. ಅಯೋಧ್ಯೆಯಿಂದ ಬಂದಿರುವ ಮಂತ್ರಾಕ್ಷತೆ, ಆಮಂತ್ರಣಗಳನ್ನು ಮನೆ ಮನೆಗೂ ತಲುಪಿಸುವುದು ಒಂದು ಪವಿತ್ರ ಕಾರ್ಯ. ಸಮಸ್ತ ಹಿಂದೂಗಳ ಕನಸು ನನಸಾಗುವ ದಿನ ನಾವೆಲ್ಲ ಮನೆಯ ಮುಂದೆ ದೀಪ ಹಚ್ಚಿ ಸಂಭ್ರಮಿಸೋಣ. ಇದೊಂದು ಪಕ್ಷಾತೀತ, ರಾಷ್ಟ್ರಭಕ್ತಿಯ ಕಾರ್ಯಕ್ರಮ. ಇದಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು.
ಮಲ್ಲಿಕಾರ್ಜುನ ಚರಂತಿಮಠ, ಅಧ್ಯಕ್ಷರು, ಚರಂತಿಮಠ ಮತ್ತು ವಸ್ತ್ರದ ಫೌಂಡೇಶನ್