ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಏಕೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ ಎಂಬುದಕ್ಕೆ ನಿಖರ ಕಾರಣ ಹೊರಬಿದ್ದಿದೆ. ವಿರುಷ್ಕಾ ದಂಪತಿಗಳು ತಮ್ಮ ಎರಡನೇ ಮಗುವನ್ನು ಬರಮಾಡಿಕೊಂಡಿದ್ದು, ಈ ಸಂತಸದ ವಿಚಾರವನ್ನು ದಂಪತಿಗಳು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಮಾಹಿತಿ ನೀಡಿದರು.
ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ತಮಗೆ ಗಂಡು ಮಗು ಜನಿಸಿದ ಸಂತೋಷದ ಸುದ್ದಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟ ಕೂಡಲೇ ಈ ಸುದ್ದಿ ಕಾಳ್ಗಿಚ್ಚಿನಂತೆ ಎಲ್ಲೆಡೆ ವೈರಲ್ ಆಗಿದೆ. ಭಾರತದಲ್ಲಿ ಮಾತ್ರವಲ್ಲದೆ ಪಾಕಿಸ್ತಾನದಲ್ಲೂ ವಿರಾಟ್ ಕೊಹ್ಲಿ ಅಭಿಮಾನಿಗಳು ಸಿಹಿ ಹಂಚುವ ಮೂಲಕ ಸಂಭ್ರಮಿಸಿದ್ದಾರೆ. ವಿರಾಟ್ ಮತ್ತೆ ತಂದೆಯಾಗುತ್ತಿರುವುದನ್ನು ಅಭಿನಂದಿಸುವುದರ ಜೊತೆಗೆ ಅಕಾಯ್ ಕ್ರಿಕೆಟ್‌ನಲ್ಲಿ ಮಿಂಚುವುದರ ಜತೆಗೆ ತಂದೆಯ ಸಾಧನೆಗಳನ್ನು ಮೀರಿಸಲಿ ಎಂದು ಹಾರೈಸಿದ್ದಾರೆ
ತನ್ನ ಮಗನಿಗೆ ಅಕಾಯ್ (Akaay) ಎಂದು ಹೆಸರಿಟ್ಟಿರುವುದಾಗಿಯೂ ಬಹಿರಂಗಪಡಿಸಿದ್ದಾರೆ. ಈ ಸುದ್ದಿ ಹೊರಬಿದ್ದ ಕೂಡಲೇ ಕ್ರಿಕೆಟ್ ಲೋಕದ ಸಾಮ್ರಾಟನಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಕೊಹ್ಲಿ ಅಭಿಮಾನಿಗಳ ಮನದಲ್ಲಿ ಸಂಭ್ರಮ ಮನೆ ಮಾಡಿದೆ. ಈ ನಡುವೆ ಪಾಕಿಸ್ತಾನದಲ್ಲೂ ಸಹ ವಿರಾಟ್ ಕೊಹ್ಲಿ ಅಭಿಮಾನಿಗಳು ಕುಣಿದು ಕುಪ್ಪಳಿಸಿ ಸಿಹಿ ಹಂಚುವ ಮೂಲಕ ಸಂಭ್ರಮಾಚರಣೆ ಮಾಡಿದ್ದಾರೆ. ಅದರ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.
.