This is the title of the web page
This is the title of the web page

Live Stream

July 2024
S M T W T F S
 123456
78910111213
14151617181920
21222324252627
28293031  

| Latest Version 9.4.1 |

Feature ArticleState News

ಯೋಧನಾದ ಮಗ ಹೇಳದೆ ಮನೆಗೆ ಬಂದಾಗ ತಾಯಿ ಜತೆಗಿನ ಭಾವನಾತ್ಮಕ ಸಂಬಂಧ ವೈರಲ್

ಯೋಧನಾದ ಮಗ ಹೇಳದೆ ಮನೆಗೆ ಬಂದಾಗ ತಾಯಿ ಜತೆಗಿನ ಭಾವನಾತ್ಮಕ ಸಂಬಂಧ ವೈರಲ್

ಆ ಯೋಧ ತುಂಬಾ ದಿನಗಳ ಬಳಿಕ ಮನೆಗೆ ಬಂದಿದ್ದರು… ಆದರೆ ಹೀಗೆ ಮನೆಗೆ ಬರುವಾಗ ಇವರು ತಮ್ಮ ತಾಯಿಗೆ ಸುಳಿವು ನೀಡಿರಲಿಲ್ಲ… ಅಮ್ಮನಿಗೆ ಸರ್ಪ್ರೈಸ್ ನೀಡಬೇಕು ಎಂಬ ಬಯಕೆಯಿಂದ ಆ ಸೈನಿಕ ದಿಢೀರ್ ಆಗಿ ಮನೆಗೆ ಬಂದಿದ್ದರು… ಆ ನಂತರದ ದೃಶ್ಯ ಖಂಡಿತಾ ಹೃದಯಸ್ಪರ್ಶಿ, ಭಾವನಾತ್ಮಕ.

ನಮ್ಮ ಯೋಧರು ಮನೆ, ಕುಟುಂಬಸ್ಥರನ್ನು ಬಿಟ್ಟು ದೂರದ ಗಡಿಯಲ್ಲಿ ದೇಶವನ್ನು ಕಾಯುತ್ತಿರುತ್ತಾರೆ. ದೇಶ ಸೇವೆಯಲ್ಲಿ ನಿರತರಾಗಿರುವ ಈ ವೀರರ ಕಾರಣದಿಂದ ದೇಶದೊಳಗೆ ನಾವು ಸುರಕ್ಷಿತವಾಗಿದ್ದೇವೆ ಎಂಬುದು ಸತ್ಯ. ಇತ್ತ ಗಡಿಯಲ್ಲಿ ಕರ್ತವ್ಯ ನಿರ್ವಹಿಸುವ ತಮ್ಮ ಮಕ್ಕಳ ಬರುವಿಕೆಗಾಗಿ ಮನೆಯವರು ಕೂಡಾ ಕಾತರದಿಂದಲೇ ಕಾಯುತ್ತಿರುತ್ತಾರೆ. ಖಂಡಿತಾ ಸೇನೆಯಲ್ಲಿರುವ ಮಕ್ಕಳು ರಜೆಯಲ್ಲಿ ಮನೆಗೆ ಬಂದಾಗ ಈ ಕ್ಷಣ ಈ ಮನೆಯವರ ಬದುಕಿನ ಅಪೂರ್ವ ಕ್ಷಣಗಳಲ್ಲಿ ಒಂದು ಎಂಬುದನ್ನು ಒಪ್ಪಲೇಬೇಕು.

 

ಇದು ಕೂಡಾ ಅಂತಹದ್ದೇ ಹೃದಯಸ್ಪರ್ಶಿ ಕ್ಷಣದ ದೃಶ್ಯ. ಇಲ್ಲೊಬ್ಬರು ಯೋಧ ಅಮ್ಮನಿಗೆ ಸರ್ಪ್ರೈಸ್ ನೀಡಿ ಎಲ್ಲರ ಕಣ್ಣಾಲಿಗಳೂ ತುಂಬುವಂತೆ ಮಾಡಿದ್ದಾರೆ. @Gulzar_sahab ಎಂಬ ಎಕ್ಸ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಸೇನಾ ಸಮವಸ್ತ್ರ ಧರಿಸಿರುವ ಯೋಧರೊಬ್ಬರು ಮನೆಯೊಳಗೆ ಬರುವ ದೃಶ್ಯದ ಮೂಲಕ ಈ ಕ್ಲಿಪ್ ಶುರುವಾಗುತ್ತದೆ. ಹೀಗೆ ಬರುವ ಯೋಧ ನೇರವಾಗಿ ಅಡುಗೆ ಮನೆಗೆ ಹೋಗಿ ಕೆಲಸದಲ್ಲಿ ನಿರತರಾಗಿದ್ದ ಅಮ್ಮನ ಕಣ್ಣುಗಳನ್ನು ಮುಚ್ಚುತ್ತಾರೆ. ಅಷ್ಟರಲ್ಲಿ ಆ ತಾಯಿ ತಬ್ಬಿಬ್ಬು. ಬಲವಾಗಿ ತನ್ನ ಕಣ್ಣುಗಳನ್ನು ಮುಚ್ಚಿದ್ದ ಕೈಗಳನ್ನು ತೆರೆದ ಆ ಅಮ್ಮನಿಗೆ ಅಚ್ಚರಿ. ಜೊತೆಗೆ ಖುಷಿ. ಕಣ್ಣೆದುರು ನಿಂತಿದ್ದ ಮಗನನ್ನು ಕಂಡು ಆ ತಾಯಿಯ ಖುಷಿಗೆ ಪಾರವೇ ಇರಲಿಲ್ಲ. ತಕ್ಷಣ ಪುತ್ರನನ್ನು ತಬ್ಬಿಕೊಂಡು ಮುದ್ದಿಸುವ ಆ ಅಮ್ಮನ ದೃಶ್ಯವನ್ನು ನೋಡುವಾಗ ನಿಜಕ್ಕೂ ಹೃದಯ ತುಂಬಿ ಬರದೇ ಇರದು.

 

ಈ ದೃಶ್ಯ, ಯಾವಾಗ ಸೆರೆಯಾಗಿದ್ದು ಸೇರಿದಂತೆ ಇತರ ಮಾಹಿತಿ ಸದ್ಯಕ್ಕೆ ಲಭ್ಯವಾಗಿಲ್ಲ. ಆದರೆ ಈ ವಿಡಿಯೋದಲ್ಲಿ ಕಾಣಸಿಗುವ ಆಳವಾದ ನಿರ್ಮಲ ಪ್ರೀತಿ ಭಾವ ಖಂಡಿತಾ ಹೃದಯಕ್ಕೆ ಹತ್ತಿರವಾಗುತ್ತದೆ. ಇದೇ ಕಾರಣದಿಂದ ಸಹಜವಾಗಿಯೇ ಈ ವಿಡಿಯೋ ನೆಟ್ಟಿಗರ ಗಮನ ಸೆಳೆದಿದೆ. ಸಾಕಷ್ಟು ವೀಕ್ಷಣೆಯನ್ನು ಗಳಿಸುವಲ್ಲಿಯೂ ಈ ವಿಡಿಯೋ ಯಶಸ್ವಿಯಾಗಿದೆ. ಎಲ್ಲರೂ ಈ ತಾಯಿ ಮತ್ತು ಮಗನ ನಿರ್ಮಲ ಪ್ರೀತಿಗೆ ಖುಷಿ ಪಟ್ಟಿದ್ದಾರೆ.