This is the title of the web page
This is the title of the web page

Live Stream

March 2025
S M T W T F S
 1
2345678
9101112131415
16171819202122
23242526272829
3031  

| Latest Version 9.4.1 |

Crime NewsLocal NewsNational NewsState News

ಲಾರಿ ಚಾಲಕನೇ ರಾಬರಿ ಸೂತ್ರಧಾರ

ಲಾರಿ ಚಾಲಕನೇ ರಾಬರಿ ಸೂತ್ರಧಾರ

ಬಾಗಲಕೋಟೆ

ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮದ ಸಮೀಪದ ಕಳಸ ಮಾರ್ಗದ ರಸ್ತೆಯಲ್ಲಿ ಮಂಗಳವಾರ ಕಿರಾಣಿ ಸಂತೆಗೆ ಹೊರಟಿದ್ದ ಕ್ಯಾಂಟರ್ ಗಾಡಿ ಅಡ್ಡಗಟ್ಟಿ ೫.೫೩ ಲಕ್ಷ ಹಣವನ್ನು ರೋಡ್ ರಾಬರಿ ಪ್ರಕರಣಕ್ಕೆ ಸಂಬಂಧಿಸಿದಂತೆ ೪೮ ಗಂಟೆಯಲ್ಲಿ ೭ ಜನ ಆರೋಪಿತರ ಪೈಕಿ ೫ ಜನ ಖದೀಮರನ್ನು ಬಂಧಿಸಿ ಅವರಿಂದ ೪.೬೫ ಲಕ್ಷ ಹಣವನ್ನು ವಶಪಡಿಸಿಕೊಳ್ಳುವಲ್ಲಿ ಹುನಗುಂದ ಪೊಲೀಸ್‌ರು ಯಶಸ್ವಿಯಾಗಿದ್ದಾರೆ.

ಧನ್ನೂರ ಗ್ರಾಮದ ಕಿರಾಣಿ ಅಂಗಡಿ ಮಾಲೀಕ ಬಸವರಾಜ ಹುದ್ದಾರ ಎಂಬುವರು ಪ್ರತಿ ವಾರ ಕಿರಾಣಿ ಸಂತೆಗೆ ಮರೋಳ ಗ್ರಾಮದ ಕ್ಯಾಂಟರ್ ಗಾಡಿಯನ್ನು ತಗೆದುಕೊಂಡು ವಿಜಯಪುರಕ್ಕೆ ೭ ರಿಂದ ೮ ಲಕ್ಷ ಹಣವನ್ನು ಇಟ್ಟುಕೊಂಡು ಹೋಗುತ್ತಿರುವುದ್ದನ್ನು ಗಮನಿಸಿದ ಖದೀಮರು ಮಂಗಳವಾರ ೯.೧೫ ಗಂಟೆಯ ಸುಮಾರಿಗೆ ಕೂಡಲಸಂಗಮದಿಂದ ೫ ಕಿಮೀ ದೂರದ ಕಳಸ ಮಾರ್ಗವಾಗಿ ಹೋಗುತ್ತಿರುವ ವೇಳೆಯಲ್ಲಿ ೨ ಬೈಕ್‌ಯಲ್ಲಿ ಬಂದ ನಾಲ್ವರು ಖದೀಮರು ಕ್ಯಾಂಟರ್ ಗಾಡಿಯನ್ನು ಅಡ್ಡಗಟ್ಟಿ ಚಾಲಕನನ್ನು ಕೆಳಗಿಳಿಸಿ ಜಗಳ ತಗೆದು ಅಂಗಡಿಯ ಮಾಲೀಕ ಬಸವರಾಜ ಹುದ್ದಾರ ಅವರಿಗೆ ಕಾರದ ಪುಡಿಯನ್ನು ಎರಚಿ ಅವರ ಕೈಯಲ್ಲಿದ್ದ ೫.೫೩ ಲಕ್ಷ ಹಣದ ಬ್ಯಾಗ ಕಿತ್ತಿಕೊಂಡು ಪರಾರಿಯಾಗಿರುವುದು ಹುನಗುಂದ ಠಾಣಿಯಲ್ಲಿ ಪ್ರಕರಣ ದಾಖಲಾಗಿತ್ತು.ಈ

ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪ್ರಸನ್ನ ದೇಸಾಯಿ ಹಾಗೂ ಡಿವೈಎಸ್‌ಪಿ ಪ್ರಭುಗೌಡ ಕಿರೇದಳ್ಳಿ ಹಾಗೂ ಸಿಪಿಐ ಸುರೇಶ ಬೆಂಡೆಗುಂಬಳ ಹಾಗೂ ಪಿಎಸ್‌ಐ ಚನ್ನಯ್ಯ ದೇವೂರ,ಅಪರಾಧ ವಿಭಾಗದ ಪಿಎಸ್‌ಐ ಎಸ್.ಆರ್.ನಾಯಕ ಅವರ ತಂಡ ಯಾವ ರೀತಿ ದರೋಡೆ ಯಾಗಿರಬಹುದು ಎಂಬುವುದ್ದನ್ನು ಕೂಲಂಕುಷವಾಗಿ ವಿಚಾರ ಮಾಡಿ ಮಾಹಿತಿಯನ್ನು ಕಲೆಹಾಕಿ ಈ ಪ್ರಕರಣದಲ್ಲಿ ಅನುಮಾನಾಸ್ಪದವಾಗಿ ಕಂಡು ಬಂದ ಕೆಎ.೨೮ ಬಿ.೦೧೦೬ ಕ್ಯಾಂಟರ್ ಗಾಡಿಯ ಚಾಲಕನನ್ನು ಠಾಣಿಗೆ ಕರೆದು ವಿಚಾರಿಸಿದಾಗ ರಾಬರಿಯಾಗಿದ್ದು ನನ್ನ ಒಂದು ಮಾಹಿತಿಯಿಂದಲೇ ಎನ್ನುವ ತಪ್ಪನ್ನು ಒಪ್ಪಿಕೊಳ್ಳುತ್ತಾನೆ.

ಅವನ ಮಾಹಿತಿ ಆಧಾರ ಮೇಲೆ ಮರೋಳ ಗ್ರಾಮದ ಮೂವರು ಮತ್ತು ಇಳಕಲ್ಲ ನಗರದ ಇಬ್ಬರರಿಂದ ಈ ರಾಬರಿ ನಡೆದಿದೆ ಎನ್ನುವುದು ಗೊತ್ತಾಗುತ್ತಿದ್ದಂತೆ ಆ ಐವರನ್ನು ಬಂಧಿಸಲಾಗಿದೆ.

ಬಂಧಿತರಿಂದ ೪.೬೫ ಲಕ್ಷ ನಗದು,ಆರೋಪಿತರು ಕೃತ್ಯಗೆ ಬಳಸಿದ ೩ ಬೈಕ್ ಮತ್ತು ೫ ಮೊಬೈಲ್‌ಗಳು ಸೇರಿದಂತೆ ಒಟ್ಟು ೮ ಲಕ್ಷ ಮೌಲ್ಯದ ಸ್ವತ್ತನ್ನು ವಶ ಪಡಸಿಕೊಳ್ಳಲಾಗಿದೆ.

ಈ ಪ್ರಕರಣದ ಇಬ್ಬರು ಪ್ರಮುಖ ಆರೋಪಿತರು ತಲೆಮರಿಸಿಕೊಂಡಿದ್ದು ಅವರ ಪತ್ತೆಗೆ ಶೋಧ ಕಾರ್ಯ ನಡೆಯುತ್ತಿದೆ.ಈ ಪ್ರಕರಣವನ್ನು ಕ್ಷೀಪ್ರಗತಿಯಲ್ಲಿ ಬೇಧಿಸುವಲ್ಲಿ ಯಶಸ್ವಿಯಾಗಿರುವ ಹುನಗುಂದ ಠಾಣಿಯ ಸಿಪಿಐ ಸುರೇಶ ಬೆಂಡೆಗುಂಬಳ ಮತ್ತು ಪಿಎಸ್‌ಐ ಚನ್ನಯ್ಯ ದೇವೂರ,ಅಪರಾಧ ವಿಭಾಗದ ಪಿಎಸ್‌ಐ ಎಸ್.ಆರ್.ನಾಯಕ, ಅಮೀನಗಡ ಪಿಎಸ್‌ಐ ಶಿವಾನಂದ ಸಿಂಗನ್ನವರ ಮತ್ತು ಸಿಬ್ಬಂದಿಗಳಾದ ಎಸ್.ಎಸ್.ಹೊಸಮನಿ, ಸಿದ್ದು ಕೌಲಗಿ, ಎ.ಎಲ್.ನದಾಫ್, ಬಿ.ಎಂ.ಆಮದಾಳ, ಬಿ.ಕೆ.ನದಾಫ್, ವಿ.ಡಿ.ಗೌಡರ. ಗಣೇಶ ಪವಾರ, ಬಿ.ಬಿ.ಸಂಗಮ, ಆರ್.ಡಿ.ನಾವಿ, ರಮೇಶ ಹೊಸಮನಿ, ಆರ್.ಡಿ.ದಾಸರ, ಚಂದ್ರು ಜಟ್ಟೇಪ್ಪನವರ ತಂಡದ ಕಾರ್ಯವನ್ನು ಬೆಳಗಾವಿ ಐಜಿಪಿ ಮತ್ತು ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಶಂಸೆಯನ್ನು ವ್ಯಕ್ತಪಡಿಸಿ ಸೂಕ್ತ ನಗದು ಬಹುಮಾನ ಮತ್ತು ಪ್ರಶಂಸನೀಯ ಪತ್ರವನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ.

Nimma Suddi
";