This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Education NewsInternational NewsLocal NewsPolitics NewsState News

ಮೀಸಲಾತಿ ದೊರೆಯುವವರೆಗೆ ಹೋರಾಟ ಮುಂದುವರಿಕೆ

ಮೀಸಲಾತಿ ದೊರೆಯುವವರೆಗೆ ಹೋರಾಟ ಮುಂದುವರಿಕೆ

ಸ್ವಾಮೀಜಿಗಳ ನೇತೃ

ಬಾಗಲಕೋಟೆ

ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ೨ಎ ಮೀಸಲಾತಿ ಹಾಗೂ ಎಲ್ಲ ಲಿಂಗಾಯತ ಒಳಪಂಗಡಗಳಿಗೆ ಕೇಂದ್ರದ ಒಬಿಸಿ ಮೀಸಲು ದೊರೆಯುವವರೆಗೆ ಸ್ವಾಮೀಜಿಗಳ ನೇತೃತ್ವದಲ್ಲಿ ಹೋರಾಟ ನಿರಂತರವಾಗಿರಲಿದೆ ಎಂದು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾದ ರಾಷ್ಟಿçÃಯ ಅಧ್ಯಕ್ಷ, ಹುನಗುಂದ ಶಾಸಕ ವಿಜಯಾನಂದ ಕಾಶಪ್ಪವರ ಹೇಳಿದರು.

ಜಿಲ್ಲೆಯ ಹುನಗುಂದ ತಾಲೂಕಿನ  ರಾಮಥಾಳ ಗ್ರಾಮದಲ್ಲಿ ನಿರ್ಮಿಸಿದ ಬೃಹತ್ ವೇದಿಕೆಯಲ್ಲಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾದ ಇಳಕಲ್ ಹಾಗೂ ಹುನಗುಂದ ತಾಲೂಕು ಘಟಕದ ಆಶ್ರಯದಲ್ಲಿ ಹಮ್ಮಿಕೊಂಡ ರಾಷ್ಟ್ರಮಾತೆ ಕಿತ್ತೂರು ರಾಣಿ ಚನ್ನಮ್ಮ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಮುದಾಯದ ಮಕ್ಕಳಿಗೆ ೨ಎ ಮೀಸಲಾತಿ ದೊರಕಿಸಿಕೊಡಬೇಕೆಂಬ ಉದ್ದೇಶದಿಂದ ಕಳೆದ ಸರಕಾರದ ಅವಧಿಯಲ್ಲಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಿರಂತರ ಹೋರಾಟ ನಡೆದಿದೆ. ಬೆಂಗಳೂರಲ್ಲಿ ೧೦ ಲಕ್ಷ ಜನರೊಂದಿಗೆ ಬೃಹತ್ ಹೋರಾಟ ನಡೆಸಲಾಯಿತು. ಆದರೆ ಬಿಜೆಪಿ ಸರಕಾರ ಸಮುದಾಯಕ್ಕೆ ಮೋಸ ಮಾಡಿತು ಎಂದು ಹೇಳಿದರು.

ನಮ್ಮ ಸರಕಾರ ರಚನೆ ನಂತರ ಸಿಎಂ ಸಿದ್ದರಾಮಯ್ಯ ಅವರಿಗೆ ಸ್ವಾಮೀಜಿಗಳ ನೇತೃತ್ವದಲ್ಲಿ ಮನವಿ ನೀಡಲಾಗಿದೆ. ಸದ್ಯ ಮೀಸಲಾತಿ ವಿಷಯ ನ್ಯಾಯಾಲಯದಲ್ಲಿದ್ದು ತೀರ್ಪು ಬಂದ ಕೂಡಲೆ ಸಭೆ ನಡೆಸಿ ಮೀಸಲಾತಿ ನೀಡುವ ವಿಶ್ವಾಸ ಸಿಎಂ ಮೇಲಿದೆ. ಸಮುದಾಯಕ್ಕೆ ೨ಎ ಮೀಸಲಾತಿ ಹಾಗೂ ಕೇಂದ್ರದ ಒಬಿಸಿ ಮೀಸಲಾತಿ ದೊರೆಯುವವರೆಗೆ ಹೋರಾಟ ನಿರಂತರವಾಗಿರುತ್ತದೆ ಎಂದರು.

ನಾಡು, ನುಡಿಗಾಗಿ ಹೋರಾಟ ಮಾಡಿದ ಮಹನೀಯರನ್ನು ಒಂದು ಸಮುದಾಯಕ್ಕೆ ಮೀಸಲಿಡಬೇಡಿ. ಕುರ್ಚಿ ಕೊಟ್ಟರೂ ಸರಿಯಾಗಿ ನಡೆಸಲು ಬರದಿದ್ದರೆ ಅಂತವರು ವೀರರೂ ಅಲ್ಲ, ಶೂರರೂ ಅಲ್ಲ, ಸದ್ಯ ನಾವು ಅಧಿಕಾರಕ್ಕೆ ಬಂದಿದ್ದು ಮುಂದೆಯೂ ಅಧಿಕಾರದಲ್ಲಿರುತ್ತೇವೆ. ಚನ್ನಮ್ಮ ಸಾಧನೆಯನ್ನು ಪ್ರತಿ ಭಾರತೀಯ ಪ್ರಜೆಯೂ ಮರೆಯುವಂತಿಲ್ಲ ಎಂದು ತಿಳಿಸಿದರು.

ಜಿಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಮಾತನಾಡಿ, ಚನ್ನಮ್ಮಳ ವಂಶಸ್ಥರಾದ ನಾವೆಲ್ಲ ಅವಳ ಆದರ್ಶಗಳನ್ನು ಮೈಗೂಡಿಸಿಕೊಳ್ಳೋಣ. ಅನ್ಯ ಸಮುದಾಯದ ಪ್ರೀತಿ, ವಿಶ್ವಾಶದೊಂದಿಗೆ ಮುನ್ನಡೆಯೋಣ. ಚನ್ನಮ್ಮಳಂತೆ ಖಡ್ಗ ಹಿಡಿಯದಿದ್ದರೂ ಅವಳ ಆದರ್ಶಗಳನ್ನು ಮಕ್ಕಳಲ್ಲಿ ಬೆಳೆಸಿ ಮನೆಗೊಬ್ಬಳು ಚನ್ನಮ್ಮ ಇರುವಂತೆ ನೋಡಿಕೊಳ್ಳೋಣ ಎಂದರು.

ಸಾನ್ನಿಧ್ಯ ವಹಿಸಿದ್ದ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅಶೀರ್ವದಿಸಿದರು. ಜ್ಯೋತಿ ಸರಡಗಿ, ರವಿ ಹುಚನೂರ, ಅಮರೇಶ ನಾಗೂರ, ಶಂಕ್ರಪ್ಪ ನೆಗಲಿ, ವಿ.ಜಿ.ಗಡೇದ, ಸಿದ್ದು ಶೀಲವಂತರ, ಹನಮಂತ ಗೌಡರ, ಪರಸಪ್ಪ ಕೋಕಾಟಿ, ನಿಂಗಪ್ಪ ಕೆಲೂರ, ಚಂದ್ರಶೇಖರ ಗೌಡರ, ಶಿವಾನಂದ ಬಂಟನೂರ, ಶೇಖರಗೌಡ ಗೌಡರ, ಅಪ್ಪಾಸಾಹೇಬ ನಾಡಗೌಡರ, ಬಿ.ಸಿ.ಅಂಟರತಾನಿ, ಮುತ್ತಣ್ಣ ಗಂಜಿಹಾಳ, ಸಿದ್ದು ಭದ್ರಶೆಟ್ಟಿ, ಫಕೀರಪ್ಪ ವಡ್ಡರ, ಮಹಾಲಿಂಗೇಶ ನಾಡಗೌಡರ, ವೀರಣ್ಣ ಹಂಡಿ ಸೇರಿದಂತೆ ಇತರರು ಇದ್ದರು.

ಚನ್ನಮ್ಮ ಭಾವಚಿತ್ರ ಮೆರಗಣಿಗೆ
ಕಾರ್ಯಕ್ರಮಕ್ಕೂ ಮುಂಚೆ ಕಮತಗಿಯ ಬಸ್ ನಿಲ್ದಾಣದ ಆವರಣದಿಂದ ರಾಮಥಾಳದಲ್ಲಿ ನಿರ್ಮಿಸಿದ್ದ ವೇದಿಕೆವರೆಗೆ ಚನ್ನಮ್ಮನವರ ಭಾವಚಿತ್ರ ಮೆರವಣಿಗೆ ನಡೆಯಿತು. ಸಾರೋಟದಲ್ಲಿ ಕುಳಿತ ಲಿಂಗಾಯತ ಪಂಚಮಸಾಲಿ ಸಮಾಜದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಕಿತ್ತೂರು ಚನ್ನಮ್ಮ ವೇಷಧಾರಿ ಮಹಿಳೆ, ಕುಂಭ ಹಾಗೂ ಆರತಿ ಹಿಡಿದು ಸಾಗಿದ ಮಹಿಳೆಯರು ಗಮನ ಸೆಳೆದರು. ಮೆರವಣಿಗೆಯಲ್ಲಿ ಸಮಾಜದ ಮುಖಂಡರಾದ ಶಂಕ್ರಪ್ಪ ನೇಗಲಿ, ಬಸವರಾಜ ನರಗುಂದ, ಯಮನಪ್ಪ ಸುಂಕದ ಸೇರಿದಂತೆ ಇತರರು ಇದ್ದರು.

ವೀಣಾ ಕಾಶಪ್ಪನವರ ಎಂಪಿ ಆಗಲಿ
ನಮ್ಮನ್ನು ನಾವು ಸೋಲಿಸುವುದು ಈ ದೇಶದ ದರಿದ್ರ ಸಂಪ್ರದಾಯವಾಗಿದ್ದು ಅದನ್ನು ಹೊಡೆದು ಹಾಕಬೇಕಿದೆ. ಎಂಪಿ ಸ್ಥಾನದ ಆಕಾಂಕ್ಷಿಯಾದ ವೀಣಾ ಕಾಶಪ್ಪನವರ ಅವರಲ್ಲಿ ಮತ್ತೊಬ್ಬ ಇಂದಿರಾ ಗಾಂದಿ, ರಾಣಿ ಚನ್ನಮ್ಮಳನ್ನು ಕಾಣೋಣ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಅವರನ್ನು ಎಂಪಿಯನ್ನಾಗಿಸಿ ಪ್ರಧಾನಿ ಸ್ಥಾನದಲ್ಲಿ ಕಾಣುವಂತಾಗಲಿ ಎಂದು ಬಿಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ, ಹಾಲಮತ ಸಮಾಜದ ಮುಖಂಡ ಬಿ.ಸಿ.ಅಂಟರತಾನಿ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ವೀಣಾ ಕಾಶಪ್ಪನವರ ಹಾಲಮತದವರು ಹಾಲಿನಷ್ಟೇ ಪವಿತ್ರರು. ಅವರಿಂದ ನನಗೆ ಶುಭ ಸಂದೇಶ ಬಂದಿದೆ. ಚನ್ನಮ್ಮ ಹಾಗೂ ರಾಯಣ್ಣನಂತೆ ಜತೆಗೂಡಿ ಕೆಲಸ ಮಾಡೋಣ ಎಂದರು.

";