This is the title of the web page
This is the title of the web page

Live Stream

December 2024
S M T W T F S
1234567
891011121314
15161718192021
22232425262728
293031  

| Latest Version 9.4.1 |

State News

ಮಕ್ಕಳಲ್ಲಿ ಜ್ಞಾನ ಮತ್ತು ತಿಳುವಳಿಕೆಗಳ ಸಮನ್ವಯವಾಗಬೇಕು

ಮಕ್ಕಳಲ್ಲಿ ಜ್ಞಾನ ಮತ್ತು ತಿಳುವಳಿಕೆಗಳ ಸಮನ್ವಯವಾಗಬೇಕು: ಗದ್ದನಕೇರಿ

ನಿಮ್ಮ ಸುದ್ದಿ ಬಾಗಲಕೋಟೆ

ನಿರಂತರ ಕ್ರಿಯಾಶೀಲತೆ ಮತ್ತು ಬದ್ಧತೆ ಶಿಕ್ಷಕನ ಬಹುದೊಡ್ಡ ಆಸ್ತಿ ಎಂದು ದೈಹಿಕ ಶಿಕ್ಷಣ ಪರಿವೀಕ್ಷಕ ಎಲ್.ಬಿ.ಬಾಲರೆಡ್ಡಿ ಹೇಳಿದರು.

ಜಿಲ್ಲೆಯ ಹುನಗುಂದ ಪಟ್ಟಣದ ಗುರುಭವನದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊನ್ನರಹಳ್ಳಿ ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ನಡೆದ ನಿರಂತರ ಕ್ವಿಜ್ ಲೈವ್ ಸರಣಿ ಸ್ಪರ್ಧೆಗಳ ಬಹುಮಾನ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಶಿಕ್ಷಕರು ತಾವಿರುವ ಸಂದರ್ಭ ಮತ್ತು ಪರಿಸ್ಥಿತಿಯನ್ನು ದೂಷಿಸದೆ ತಮ್ಮ ಪ್ರಾಮಾಣಿಕತೆ, ಬದ್ಧತೆ ಮತ್ತು ಕ್ರಿಯಾಶೀಲ ಮನಸ್ಥಿತಿಯಿಂದ ಸಮರ್ಪಿಸಿಕೊಂಡರೆ ಎಂತಹ ಕಠಿಣ ಪರಿಸ್ಥಿತಿಯನ್ನೂ ಸುಧಾರಿಸಬಹುದು ಎಂದರು.

ಅಧ್ಯಾಪಕ ಆನಂದ ಗದ್ದನಕೇರಿ “ಮಕ್ಕಳ ಭವಿಷ್ಯ ನಿರ್ಮಾಣದಲ್ಲಿ ಅಂಕಗಳಿಕೆ ಮತ್ತು ಜ್ಞಾನ ಒಂದು ಜಿಜ್ಞಾಸೆ” ಎಂಬ ವಿಷಯದ ಕರಿತು ಮಾತನಾಡುತ್ತ, ಹಿಂದಿನ ಶಿಕ್ಷಣ ವ್ಯವಸ್ಥೆಯನ್ನು ಅವಲೋಕಿಸಿದಾಗ ಪಡೆದುಕೊಂಡ ಜ್ಞಾನ ಬದುಕಿನಲ್ಲಿ ಎಷ್ಟು ಅನ್ವಯವಾಯಿತು ಎಂಬುದರ ಮೌಲ್ಯಮಾಪನ ಆಗುತ್ತಿತ್ತೇ ವಿನಃ ಅಂಕಗಳ ಆಧಾರದಲ್ಲಲ್ಲ. ಅಂಕಗಳ ಬೆನ್ನು ಹತ್ತಿರುವ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಮೌಲ್ಯಶಿಕ್ಷಣ ಮಾಯವಾಗುತ್ತಿದೆ. ಮಾನವೀಯ ಸಂಬಂಧಗಳು ಮರೆಯಾಗುತ್ತಿವೆ. ಇದಕ್ಕೆ ಪರಿಹಾರವೆಂದರೆ ಅಂಕಗಳ ಜೊತೆಜೊತೆಗೆ ಜ್ಞಾನ ಮತ್ತು ತಿಳುವಳಿಕೆಗಳ ಸಮನ್ವಯವಾಗಬೇಕು ಅದು ಮಕ್ಕಳ ಭವಿಷ್ಯವನ್ನು ಸಮೃದ್ಧಗೊಳಿಸಬೇಕು ಎಂದರು.

ಲೇಖಕ ಎಸ್.ಕೆ.ಕೊನೆಸಾಗರ ಮಾತನಾಡಿ, ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ನಿರಂತರವಾಗಿ ಮಕ್ಕಳಿಗೆ ಜ್ಞಾನ ಹಂಚುವ ಕಾರ್ಯದಲ್ಲಿ ತೊಡಗಿರುವ ಅಶೋಕ ವಿ ಬಳ್ಳಾ ಒಬ್ಬ ಮಾದರಿ ಶಿಕ್ಷಕ. ಅವರಿಗೆ ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಿರುವ ಶಿಕ್ಷಕರ ಸಂಘಟನೆಯ ನಡೆ ಶ್ಲಾಘನೀಯ ಎಂದರು.

ಕೊರೋನಾ ಹಾವಳಿಯ ಸಂದರ್ಭದಲ್ಲಿ ಆನ್ ಲೈನ್ ನಲ್ಲಿ ವಾರಕ್ಕೊಂದರಂತೆ 25 ಕಂತುಗಳಲ್ಲಿ ನಡೆದ ವಿವಿಧ ವಿಷಯಗಳ ಲೈವ್ ಕ್ವಿಜ್ ಸ್ಪರ್ಧೆ ವಿಜೇತ 54 ಮಕ್ಕಳಿಗೆ ಪುಸ್ತಕ ಬಹುಮಾನ, ಮೆಡಲ್ ಹಾಗೂ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ದಾನಿಗಳು ಹಾಗೂ ಸಂಪನ್ಮೂಲ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಹೊನ್ನರಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಎ.ಐ.ಕಂಬಳಿ ಅಧ್ಯಕ್ಷತೆ ವಹಿಸಿದ್ದರು. ಇಸಿಒಗಳಾದ ಸಿದ್ದು ಪಾಟೀಲ, ಪಿ.ಬಿ.ಹಿರೇಗೊಂಡ, ಬಸವೇಶ್ವರ ಬ್ಯಾಂಕಿನ ಅಧ್ಯಕ್ಷ ಬಸವರಾಜ ಹೊಸೂರ, ಲೇಖಕ ಸಿದ್ಧಲಿಂಗಪ್ಪ ಬೀಳಗಿ, ಶಿಕ್ಷಕರ ಸಂಘದ ಅಧ್ಯಕ್ಷ ಸಿದ್ದು ಶೀಲವಂತರ, ಮಾಜಿ ಸೈನಿಕ ಮುತ್ತಪ್ಪ ಅಂಬ್ಲಿಕೊಪ್ಪ, ಸಿ ಆರ್ ಪಿ ಸಂಗಪ್ಪ ಚಲವಾದಿ, ಮಕ್ಕಳ ಸಾಹಿತಿ ಸೋಮಲಿಂಗ ಬೇಡರ, ನಿರಂತರ ಕ್ವಿಜ್ ನ ಅಶೋಕ ವಿ ಬಳ್ಳಾ, ಡಿ ಎಂ ಬಾಗವಾನ್, ರಮೇಶ ಕೊಳಗೇರಿ, ಗೀತಾ ತಾರಿವಾಳ, ಶ್ರೇಯಾಂಸ ಕೋಲಾರ, ಬಸವರಾಜ ಬಲಕುಂದಿ, ಲಕ್ಷ್ಮಣ ಝಳಕಿ, ಅಶೋಕ ಎಮ್ಮಿ ಮೊದಲಾದವರು ಉಪಸ್ಥಿತರಿದ್ದರು.

Nimma Suddi
";