This is the title of the web page
This is the title of the web page

Live Stream

December 2024
S M T W T F S
1234567
891011121314
15161718192021
22232425262728
293031  

| Latest Version 9.4.1 |

Education NewsLocal NewsState News

ಈ ಸಮಯ ಮತ್ತೆ ಬರದು ವಿದ್ಯಾರ್ಥಿಗಳೇ! ಸದ್ಬಳಕೆ ಮಾಡಿಕೊಳ್ಳಲು ಏಳಿ ಎದ್ದೇಳಿ

ಈ ಸಮಯ ಮತ್ತೆ ಬರದು ವಿದ್ಯಾರ್ಥಿಗಳೇ! ಸದ್ಬಳಕೆ ಮಾಡಿಕೊಳ್ಳಲು ಏಳಿ ಎದ್ದೇಳಿ

ಬಾಗಲಕೋಟೆ

ಜಿಲ್ಲೆಯಲ್ಲಿಯೇ ಸುಮಾರು ಅಂಗ ಸಂಘ ಸಂಸ್ಥೆಗಳನ್ನು ತೆಗೆದು ಮುಖ್ಯವಾಗಿ ಗ್ರಾಮೀಣ ಮಕ್ಕಳ ಶ್ರೇಯೋಭಿವೃದ್ಧಿಗೆ ಉತ್ತಮ ಶಿಕ್ಷಕರನ್ನು ಗುರುತಿಸಿ, ಅವರಿಂದ ವಿದ್ಯಾರ್ಥಿ ಮಕ್ಕಳ ಮನಮುಟ್ಟುವಂತೆ ಬೋಧನೆ, ಪಾಠ, ಪಟ್ಟೆ ತರ ಚಟುವಟಿಕೆಗಳಿಗೆ ಶ್ರಮಿಸಿ ಮೌಲ್ಯಾಧಾರಿತ ಜ್ಞಾನ ನೀಡಲು ಮುಂದಾದ ಮಾಜಿ ಶಾಸಕ ಬಿ,ವಿವಿ ಸಂಘದ ಚೇರ್ಮನ್ನರಾದ ವೀರಣ್ಣ ಚರಂತಿಮಠರ ಕಾರ್ಯವೈಖರಿ ಶ್ಲಾಘನೀಯವಾದುದು ಎಂದು ಪತ್ರಕರ್ತ ಶಂಕರ ಮಂಡಿ ಹೇಳಿದರು.

ಅವರು ಇಳಕಲ್ಇ ತಾಲೂಕಿನ ಕೆಲೂರ ಗ್ರಾಮದ  ಪ್ರತಿಷ್ಠಿತ ಬಿವಿವಿ ಸಂಘದ ಶ್ರೀ ಗುರು ಮಂಟೇಶ್ವರ ಪ್ರೌಢಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಮಕ್ಕಳ ಪರೀಕ್ಷಾ ತಯಾರಿ ವಿಶೇಷ ಪಾಲಕರ ಸಭೆ ಕಾರ್ಯಕ್ರಮದ ಪಾಲಕರ ಪ್ರತಿನಿಧಿಯಾಗಿ ಮಾತನಾಡಿದರು. ಮಕ್ಕಳ ಮನಸಲ್ಲಿ ಜವಾಬ್ದಾರಿ ಹೆಚ್ಚಿಸಿಕೊಳ್ಳುವರಾಗಿರಿ, ಈ ಸಮಯ ಮತ್ತೆಬರದು ವಿದ್ಯಾರ್ಥಿಗಳೇ, ಬೇಗ ಮಲಗಿ ಬೇಗ ಏಳಿ ಬೆಳಗಿನ ಸಮಯ ಅಭ್ಯಾಸ ಮಾಡಲು ಮಹತ್ತರವಾದುದು, ಇದು ನಿಮ್ಮ ವಿದ್ಯಾರ್ಥಿ ಜೀವನದ ಮೊದಲನೇ ಮೆಟ್ಟಿಲಾಗಿದೆ, ನಿತ್ಯ ಹೆಚ್ಚು ಓದು ಬರಹದೊಂದಿಗೆ ಒಳ್ಳೆಯ ಗುಣವಂತರ ಮಗನಾಗಿ ತಂದೆ ತಾಯಿ, ಗುರುಗಳು ಶಾಲಾ, ಸಂಸ್ಥೆಗೆ ಹಾಗೂ ಗ್ರಾಮಕ್ಕೆ ಕೀರ್ತಿ ತರುವರಾಗಿರಿ ಎಂದು ಹೇಳಿದರು.

ಮುಖ್ಯೋಪಾಧ್ಯಾಯ ಎಸ್‌ಬಿ ಹೆಳವರ ಮಾತನಾಡಿ ನಿಸರ್ಗದಲ್ಲಿದ್ದ ನಮ್ಮ ಪ್ರೌಢಶಾಲಾ ವಿದ್ಯಾರ್ಥಿ ಮಕ್ಕಳ ಭವಿಷ್ಯ ರೂಪಿಸಲು ಸುಸಜ್ಜಿತ ಕಟ್ಟಡ ಹತ್ತು ಹಲವು ಪೀಠೋಪಕರಣಗಳು ವಿದ್ಯಾರ್ಥಿಗಳಿಗೆ ಯಾವುದಕ್ಕೂ ಕಡಿಮೆಯಾಗದಂತೆ ನಿರ್ವಹಿಸುತ್ತಿರುವ ಪ್ರತಿಷ್ಠಿತ ಸಂಸ್ಥೆಯಾಗಿ ಶ್ರಮಿಸುತ್ತಿರುವುದು, ಪಾಲಕರೇ ನಿಮ್ಮ ಮಕ್ಕಳನ್ನು ಶಾಲೆಗೆ ಕಳಿಸಿದರಷ್ಟೇ ಸಾಲದು ನಿತ್ಯ ಮೊಬೈಲ್ ಜಾಲತಾಣಗಳಿಂದ ದೂರವಾಗಿರಿಸಿ, ಸಾಧ್ಯವಾದಷ್ಟು ಮಕ್ಕಳಿಗೆ ಕೆಲಸ ಕಡಿಮೆ ಮಾಡಿಸಿ ಹೆಚ್ಚು ಅಭ್ಯಾಸ ಮಾಡಲು ಅನುವು ಮಾಡಿಕೊಡುವವರಾಗಿರಿ, ಮಕ್ಕಳ ಪರೀಕ್ಷೆಗಳು ಸಮೀಪಿಸುತ್ತಿವೆ, ನಿಮ್ಮ ಮಕ್ಕಳು ಮನೆಯಲ್ಲಿ ಸರಿಯಾಗಿ ಓದುತ್ತಾರೆಯೋ ಇಲ್ಲವೋ? ಉತ್ತಮ ಅಂಕಗಳನ್ನು ಗಳಿಸುವುದರ ಜೊತೆಗೆ ಒಳ್ಳೆಯ ಸಂಸ್ಕಾರವಂತರಾಗಿ ಬೆಳೆಯುತ್ತಾರೆಯೋ? ಇಲ್ಲವೋ ತಾವು ನಿತ್ಯ ಸೂಕ್ಷ್ಮವಾಗಿ ಗಮನಿಸುವರಾಗಬೇಕು. ಶಾಲೆಯಲ್ಲಿ ನಮ್ಮ ಜವಾಬ್ದಾರಿಯಾದರೆ ಮನೆಯಲ್ಲಿ ಹೆಚ್ಚು ಓದಿನಡೆಗೆ ನಿಮ್ಮ ವಿಶೇಷ ಕಾಳಜಿ ಇರಲಿ ಎಂದು ಎಲ್ಲ ಪಾಲಕರಲ್ಲಿ ಮನವಿ ಮಾಡಿಕೊಂಡು ಹೇಳಿದರು.

ಹಿರಿಯ ಮುಖಂಡರಾದ ಕೂಡ್ಲಯ್ಯ ಬೆಲ್ಲದ, ಎಮ್ ಎಚ್ ಗ್ವಾಗೇರಿ, ವಾಯ್ ಎಸ್ ವಾಲಿಕಾರ, ರೇವಣಸಿದ್ದಪ್ಪ ಅಚನೂರ, ಬಿಎಸ್ ಕಮತರ, ಎ ಎಚ್ ಬೀಳಗಿ, ಮೋಹನ್ ರುದ್ರಾಕ್ಷಿ, ಆಯ್ ಎಸ್ ಮಂಡಿ ಹಾಗೂ ಮಹಿಳಾ ತಾಯಂದಿರು ಉಪಸ್ಥಿತರಿದ್ದರು.

ಶಿಕ್ಷಕ ಎಸ್ ಬಿ ಯಾವಾಗಲ್ಲಮಠ ನಿರೂಪಿಸಿದರು, ಬಿ ಎಚ್ ನಾಲ್ವತ್ವಾಡ ವಂದಿಸಿದರು.

Nimma Suddi
";