This is the title of the web page
This is the title of the web page

Live Stream

July 2024
S M T W T F S
 123456
78910111213
14151617181920
21222324252627
28293031  

| Latest Version 9.4.1 |

Local NewsState News

ಬಿರುಗಾಳಿಗೆ ಬೆಚ್ಚಿ ಬಿದ್ದ ತುಳಸಿಗೇರಿ, ಕೋಟ್ಯಂತರ ರೂ. ಬೆಳಗಳು ಹಾನಿ,ರೈತರ ಬದುಕು ಬೀದಿಗೆ

ಬಿರುಗಾಳಿಗೆ ಬೆಚ್ಚಿ ಬಿದ್ದ ತುಳಸಿಗೇರಿ, ಕೋಟ್ಯಂತರ ರೂ. ಬೆಳಗಳು ಹಾನಿ,ರೈತರ ಬದುಕು ಬೀದಿಗೆ

ಬಾಗಲಕೋಟೆ: ಗುರುವಾರ ಸಂಜೆಯ ಬಿರುಗಾಳಿಗೆ ಬಾಗಲಕೋಟೆ ತಾಲೂಕಿನ ಇಡೀ ತುಳಸಿಗೇರಿ ಗ್ರಾಮವೇ ಸ್ತಬ್ಧವಾಗಿದೆ. 10ರಿಂದ 15 ನಿಮಿಷ ಚಂಡಮಾರುತದಂತೆ ಬೀಸಿದ ಬಿರುಗಾಳಿಗೆ ಕೆಲವು ಮನೆಗಳು, ದನದ ಶೆಡ್‌ಗಳು, ತಗಡಿನ ಶೆಟ್‌ಗಳು, ವಿದ್ಯುತ್ ಕಂಬಗಳು, ದೊಡ್ಡ ದೊಡ್ಡ ಗಿಡಗಳನ್ನು ನೆಲಕ್ಕುರುಳಿಸಿ ಪ್ರಕೃತಿ ಮುಂದೆ ನರಮಾನವನದ್ದು ಏನಿಲ್ಲ ಎಂಬುದನ್ನು ತೋರಿಸದಂತಿದೆ.

ಗುರುವಾರ ಸಂಜೆ 4.30ರ ಸುಮಾರಿಗೆ ಆರಂ‘ವಾದ ಬಿರುಗಾಳಿ ಬರೀ 15 ನಿಮಿಷದಲ್ಲಿ 40ರಿಂದ 50 ವರ್ಷದಷ್ಟು ಹಳೆಯದಾದ ಮರಗಳನ್ನು ನೆಲಕ್ಕೆ ಕೆಡವಿದೆ. ಜತೆಗೆ ಬೈಕ್‌ಗಳು ನಿಂತಲ್ಲಿಂದಲೇ ದೂರದವರೆಗೆ ಗಾಳಿಗೆ ತಳ್ಳಿಕೊಂಡು ಹೋಗಿ ನೆಲಕ್ಕೆ ಬಿದ್ದಿವೆ. ಇನ್ನೂ ರೈತರ ಪರಿಸ್ಥಿತಿಯಂತೂ ಸಂಪೂರ್ಣ ಹಗದೆಟ್ಟು ಹೋಗಿದೆ.

ಕಬ್ಬು ಸೇರಿದಂತೆ ತೋಟಗಾರಿಕೆಯ ಎಲ್ಲ ಬೆಳಗಳು ಸಂಪೂರ್ಣ ನೆಲಕಚ್ಚಿವೆ. ಬಿರುಗಾಳಿ ರ‘ಸಕ್ಕೆ ಕ್ಷಣಾ‘ರ್ದಲ್ಲಿಯೇ ವಿದ್ಯುತ್ ಸಂಪರ್ಕ ಕಡಿತಗೊಂಡಿತು. ಹೀಗಾಗಿ ಮುಂದಾಗಬಹುದಾದ ಅನಾಹುತ ತಪ್ಪಿದಂತಾಯಿತು. ನಂತರ ಕೆಲವೇ ನಿಮಿಷಗಳಲ್ಲಿ ಕೆಲವು ಕಡೆಗಳಲ್ಲಿ ಕಂಬ ವಿದ್ಯುತ್ ತಂತಿಯ ಜತೆಗೆ ನೆಲಕ್ಕುರುಳಿದರೆ ಇನ್ನು ಕೆಲವು ಕಡೆಗಳಲ್ಲಿ ಟಿಸಿಗಳು ಸಹ ನೆಲಕ್ಕುರುಳಿವೆ.

ಇನ್ನು ಹೈನುಗಾರಿಕೆ ಸಲುವಾಗಿ ಹಾಕಿದ್ದ ಶೆಡ್‌ಗಳ ತಗಡುಗಳು ಕೈಗೆ ಸಿಗಲಾರದಷ್ಟು ದೂರದಲ್ಲಿ ಹೋಗಿ ಬಿದ್ದಿವೆ. ಇನ್ನೇರಡು ವರ್ಷದಲ್ಲಿ ಕಟಾವಿಗೆ ಬಂದಿದ್ದ ರೈತರೊಬ್ಬರ ಹೊಲದಲ್ಲಿನ ಶ್ರೀಗಂ‘ದ ಗಿಡಗಳು ಸಹ ಬುಡಸಮೇತ ನೆಲಕ್ಕುರುಳಿ ಬಿದ್ದಿವೆ. ಹೀಗಾಗಿ ಆ ರೈತನಿಗೆ ಸಾಕಷ್ಟು ಹಾನಿಯಾಗಿದೆ. ಅಷ್ಟೇ ಪ್ರತಿಯೊಬ್ಬ ರೈತರ ಮಾವಿನ ಮರಗಳು, ಬೇವಿನಮರಗಳು ನೆಲಕ್ಕುರುಳಿದ್ದರೆ, ಕಬ್ಬಿನ ಬೆಳೆ ಸಂಪೂರ್ಣ ನೆಲಕಚ್ಚಿದೆ. ಕಬ್ಬಿನಿಂದಲೇ ಬದುಕು ಕಟ್ಟಿಕೊಂಡಿದ್ದ ರೈತರ ಬದುಕು ಈಗ ಬೀದಿಗೆ ಬಂದಂತಾಗಿದೆ.

ಇನ್ನೂ ಒಬ್ಬ ಯುವಕನ ತಲೆ ಮೇಲೆ ಕಬ್ಬು ಬಿದ್ದು ಪೆಟ್ಟಾಗಿದೆ. ಇನ್ನೊಂದೆಡೆ ದೇವನಾಳ ಆರ್‌ಸಿಯಲ್ಲಿ ಜೀವನೋಪಾಯಕ್ಕಾಗಿ ಹಾಕಿಕೊಂಡಿದ್ದ ಅಂಗಡಿ ಸಂಪೂರ್ಣ ಕಿತ್ತು ಬಿದ್ದಿದೆ. ಏನಿಲ್ಲವೆಂದರೂ ಮೂರ್ನಾಲ್ಕು ಲಕ್ಷದಷ್ಟು ಹಾನಿ ಸಂ‘ವಿಸಿದೆ.

ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ ಗ್ರಾಮಸ್ಥರು ಹಾಗೂ ರೈತರು ಸೇರಿಕೊಂಡು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರಗಳನ್ನು ಕಟ್ ಮಾಡಿ ರಸ್ತೆ ಸಂಪರ್ಕಕ್ಕೆ ವ್ಯವಸ್ಥೆ ಮಾಡಿದ್ದಾರೆ. ಹೆಸ್ಕಾಂನವರು ಗ್ರಾಮದಲ್ಲಿನ ವಿದ್ಯುತ್ ಸಮಸ್ಯೆ ಸರಿಪಡಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ. ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಕಾರಿಗಳು ಸರ್ವೇ ಬೆಳೆ ಹಾನಿಯ ಸರ್ವೇ ಕಾರ್ಯ ನಡೆಸಿದ್ದಾರೆ. ಮತ್ತೊಂದೆಡೆ ತಹಸೀಲ್ದಾರ್‌ರು ಹಾಗೂ ಗ್ರಾಮ ಲೆಕ್ಕಾಕಾರಿಗಳು ಗ್ರಾಮದಲ್ಲಿ ಬಿದ್ದಿರುವ ಮನೆಗಳು, ಶೆಡ್‌ಗಳ ಸರ್ವೇ ಕಾರ್ಯ ನಡೆಸಿದ್ದು, ಕೂಡಲೇ ನಮ್ಮ ಜೀವನಕ್ಕೆ ಏನಾದರೂ ಪರಿಹಾರ ಕೊಡಿಸಿ ಅಂತ ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.