This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

International NewsNational News

ಜಮ್ಮು – ಕಾಶ್ಮೀರದಲ್ಲಿ ಹಿಂದೂ ದೇವಾಲಯಕ್ಕೆ ರಸ್ತೆ ನಿರ್ಮಿಸಲು ತಮ್ಮ ಭೂಮಿಯನ್ನು ದಾನವಾಗಿ ನೀಡಿದ ಇಬ್ಬರು ಮುಸ್ಲಿಮರು

ಜಮ್ಮು – ಕಾಶ್ಮೀರದಲ್ಲಿ ಹಿಂದೂ ದೇವಾಲಯಕ್ಕೆ ರಸ್ತೆ ನಿರ್ಮಿಸಲು ತಮ್ಮ ಭೂಮಿಯನ್ನು ದಾನವಾಗಿ ನೀಡಿದ ಇಬ್ಬರು ಮುಸ್ಲಿಮರು

ಜಮ್ಮು – ಕಾಶ್ಮೀರ ಬದಲಾಗುತ್ತಿದೆ. ಹಿಂಸೆ, ದಂಗೆಗಳಿಂದ ಮುಕ್ತವಾಗುತ್ತಿದ್ದು, ಅಭಿವೃದ್ಧಿ, ಶಾಂತಿಯತ್ತ ಸಾಗುತ್ತಿದೆ. ಧಾರ್ಮಿಕ ವಿಚಾರದಲ್ಲೂ ಕೂಡ ಜಮ್ಮು -ಕಾಶ್ಮೀರ ಬದಲಾಗುತ್ತಿದೆ. ಇದೀಗ 500 ವರ್ಷಗಳಷ್ಟು ಹಳೆಯದಾದ ಹಿಂದೂ ದೇವಾಲಯಕ್ಕೆ ರಸ್ತೆ ಮಾಡಲು ರಿಯಾಸಿ ಜಿಲ್ಲೆಯ ಇಬ್ಬರು ಮುಸ್ಲಿಮರು ತಮ್ಮ ಭೂಮಿಯನ್ನು ನೀಡಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.

ಈ ದೇವಾಲಯಕ್ಕೆ ಸರಿಯಾದ ರಸ್ತೆ ವ್ಯವಸ್ಥೆ ಇಲ್ಲದ ಕಾರಣ, ಮತ್ತು ಆ ದೇವಾಲಯಕ್ಕೆ ಈ ಇಬ್ಬರು ಮುಸ್ಲಿಂ ವ್ಯಕ್ತಿಗಳ ಜಾಗದಿಂದಲ್ಲೇ ಸಾಗಬೇಕಿದೆ. ಇದಕ್ಕಾಗಿ ದೇವಾಲಯದ ಬಗ್ಗೆ ಅಭಿಮಾನ ಇರುವ ಈ ಇಬ್ಬರು ಮುಸ್ಲಿಂ ವ್ಯಕ್ತಿಗಳು ದಾನವಾಗಿ ಭೂಮಿ ನೀಡಿದ್ದಾರೆ.

ಪಂಚಾಯಿತಿ ಅನುದಾನದಲ್ಲಿ ಶೀಘ್ರವೇ ರಸ್ತೆ ನಿರ್ಮಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಾಜಿ ಪಂಚಾಯಿತಿ ಸದಸ್ಯ ಹಾಗೂ ರೈತ ಗುಲಾಂ ರಸೂಲ್ ಮಾತನಾಡಿ, ರಸ್ತೆ ಸಮಸ್ಯೆಯನ್ನು ಮುಂದಿಟ್ಟುಕೊಂಡು ಸಮಾಜದಲ್ಲಿ ಬಿರುಕು ಮೂಡಿಸಲು ಕೆಲವರು ಯತ್ನಿಸಿದ್ದಾರೆ. ದೇವಸ್ಥಾನಕ್ಕೆ ಸರಿಯಾದ ರಸ್ತೆ ಇಲ್ಲ, ಇದರ ಜತೆಗೆ ಈ ಬಗ್ಗೆ ಸಮಾಜದಲ್ಲಿ ದ್ವೇಷ ತುಂಬುವ ಕೆಲಸ ನಡೆಯುತ್ತಿದೆ ಎಂದು ಹೇಳಿದರು.

ಖೇರಾಳ್ ಪಂಚಾಯಿತಿಯ ನಿವಾಸಿಗಳಾದ ಗುಲಾಂ ರಸೂಲ್ ಮತ್ತು ಗುಲಾಂ ಮೊಹಮ್ಮದ್ ಅವರು ತಮ್ಮ ನಾಲ್ಕು ಜಮೀನನ್ನು ಪಂಚಾಯಿತಿಗೆ ದಾನವಾಗಿ ನೀಡಿದ್ದು, ರಿಯಾಸಿ ಜಿಲ್ಲೆಯ ಕಾನ್ಸಿ ಪಟ್ಟಾ ಗ್ರಾಮದ ಗುಪ್ತ ಕಾಶಿಯಲ್ಲಿರುವ ಗೌರಿ ಶಂಕರ ದೇವಸ್ಥಾನಕ್ಕೆ 1200 ಮೀಟರ್ ಹಾಗೂ 10 ಅಡಿ ಅಗಲದಲ್ಲಿ ಸುಮಾರು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ರಸ್ತೆಗೆ ತಮ್ಮ ಭೂಮಿಯನ್ನು ದಾನ ಮಾಡಿದ್ದಾರೆ.

";