This is the title of the web page
This is the title of the web page

Live Stream

January 2025
S M T W T F S
 1234
567891011
12131415161718
19202122232425
262728293031  

| Latest Version 9.4.1 |

State News

ಯುಕೆಪಿ ಪ್ರಗತಿ ಪರಿಶೀಲನಾ ಸಭೆ

ಭೂಸ್ವಾಧೀನ ಪ್ರಕ್ರಿಯೆ ಚುರುಕುಗೊಳಿಸಿ : ಕಾರಜೋಳ

ನಿಮ್ಮ ಸುದ್ದಿ ಬಾಗಲಕೋಟೆ

ಕೃಷ್ಣಾ ಮೇಲ್ದಂಡೆ ಯೋಜನೆಯ ಹಂತ-೩ರ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ವಿವಿಧ ಹಂತದಲ್ಲಿರುವ ಭೂಸ್ವಾಧೀನ ಪ್ರಕ್ರಿಯೆಯನ್ನು ಚುರುಕಿಗೊಳಿಸುವಂತೆ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಜರುಗಿದ ಕೃಷ್ಣಾ ಮೇಲ್ದಂಡೆ ಯೋಜನೆ ಅಡಿಯಲ್ಲಿ ಬರುವ ಭೂಸ್ವಾಧೀನ, ಪುನರ್ವಸತಿ ಮತ್ತು ಪುನರ್ ನಿರ್ಮಾಣದ ವಿಷಯಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮುಳಿಗಡೆಯಾಗುವ ೪೮೭೧ ಎಕರೆ, ಪುನರ್ವಸತಿಗಾಗಿ ೨೩೯೪ ಎಕರೆ, ಕಾಲುವೆಗಾಗಿ ೯೧೭೩ ಎಕರೆ ಸೇರಿ ಒಟ್ಟು ೧೬೪೩೮ ಕ್ಷೇತ್ರಕ್ಕೆ ಭೂಸ್ವಾಧೀನ ಪ್ರಕ್ರಿಯೆ ಪ್ರಾರಂಭಿಸಿದ್ದು, ಪ್ರಕ್ರಿಯೆ ಚುರುಕಾಗಬೇಕು. ಬಾಕಿ ಭೂಸ್ವಾಧೀನ ಪ್ರಕ್ರಿಯೆ ಸಹ ಪ್ರಾರಂಭಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಗೆ ಆಗಮಿಸಿದ ಪ್ರೋಬೇಷನರಿ ಕೆಎಎಸ್ ಅಧಿಕಾರಿಗಳಿಗೆ ತರಬೇತಿ ನೀಡಿ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಬಳಸಿಕೊಳ್ಳಲು ಕಾರಜೋಳ ತಿಳಿಸಿದರು. ಈಗಾಗಲೇ ಒಟ್ಟು ೧,೩೩,೮೬೭ ಎಕರೆ ಜಮೀನ ಪೈಕಿ ೨೩೩೪೧ ಎಕರೆ ಭೂಸ್ವಾಧೀನ ಪಡಿಸಿಕೊಂಡಿದ್ದು, ೨೭೧೬.೫೧ ಕೋಟಿ ರೂ.ಗಳ ಪರಿಹಾರ ವಿತರಿಸಲಾಗಿದೆ. ಭೂಸ್ವಾಧೀನ ಐತೀರ್ಪುಗೊಂಡ ಪ್ರಕರಣಗಳಲ್ಲಿ ಇನ್ನು ೨೫೦.೪೪ ಕೋಟಿ ಪರಿಹಾರ ಹಣ ವಿತರಿಸಲು ಬಾಕಿ ಉಳಿದಿದ್ದು, ರೈತರಿಂದ ಒಚರ್ ಪಡೆದು ಪರಿಹಾರ ವಿತರಣೆ ಕ್ರಮಜರುಗಿಸಲು ಸೂಚಿಸಿದರು.

ವಿವಿಧ ಹಂತದಲ್ಲಿರುವ ಭೂಸ್ವಾಧೀನ, ಪುನರ್ವಸತಿ ಸೌಲಭ್ಯದ ಕಾಮಗಾರಿ, ಬಾಗಲಕೋಟೆ ಪಟ್ಟಣ ಅಭಿವೃದ್ದಿ ಪ್ರಾಧಿಕಾರ ಒಳಗೊಂಡAತೆ ಸುಮಾರು ೩೦೦೦ ಕೋಟಿ ಅನುದಾನ ಮಾರ್ಚ ಅಂತ್ಯಕ್ಕೆ ಅವಶ್ಯಕತೆ ಇದ್ದು, ಕ್ರಮವಹಿಸುವುದಾಗಿ ತಿಳಿಸಿದರು. ಉದಗಟ್ಟಿ ಪುನರ್ವಸತಿ ಕೇಂದ್ರದ ಅಭಿವೃದ್ದಿಗೆ ೧ ಕೋಟಿ ನೀಡಲು ತಿಳಿಸಿದ ಕಾರಜೋಳ ಅವರು ಮುಳುಗಡೆ ಪ್ರದೇಶದಲ್ಲಿ ಸರಕಾರಿ ಗೌಂಟನ್ ಜಾಗದಲ್ಲಿ ಮನೆ, ಗುಡಿಸಲು ಕಟ್ಟಿಕೊಂಡವರಿಗೂ ಪರಿಹಾರ ನೀಡಲು ತಿಳಿಸಿದರು. ಪುನರ್ವಸತಿ ನಿರ್ಮಾಣದ ನಂತರ ಉಳಿದ ಜಮೀನನ್ನು ಸರಕಾರಿ ಶಾಲೆ, ಕಾಲೇಜು, ವಸತಿ ನಿಲಯಗಳಿಗೆ ಅವಕಾಶವಿದ್ದಲ್ಲಿ ಈ ಕುರಿತು ಸಭೆ ನಡೆಸಿ ತಿರ್ಮಾನಿಸಲು ತಿಳಿಸಿದರು.

೩ನೇ ಹಂತದ ಗ್ರಾಮೀಣ ಮತ್ತು ನಗರ ಸೇರಿ ಒಟ್ಟು ೨೫,೫೫೦ ಕಟ್ಟಡಗಳ ಪೈಕಿ ೨,೩೮೩ ಕಟ್ಟಡಗಳಿಗೆ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಲಾಗಿದ್ದು, ಸದ್ಯ ೪ ಗ್ರಾಮಗಳ ೩೭೩೯ ಕಟ್ಟಡಗಳ ಐತೀರ್ಪು ಹಂತದಲ್ಲಿವೆ. ಪುನರ್ವಸತಿಗಾಗಿ ೧೮೨೧.೨೩ ಎಕರೆ, ನ್ಯಾಯಾಲಯದಿಂದ ತಡೆಯಾಜ್ಞೆ ೪೮೭.೧೪ ಎಕರೆ, ಅಧೀಸೂಚನೆ ಹಂತದಲ್ಲಿರುವ ೯೯.೦೧ ಎಕರೆ, ಪ್ರಸ್ತಾವನೆ ಹಂತದಲ್ಲಿ ೨೨೯೫.೧೩ ಎಕರೆ ಇರುವುದಾಗಿ ಯುಕೆಪಿಯ ವಿಷೇಶ ಜಿಲ್ಲಾಧಿಕಾರಿ ಸೋಮಲಿಂಗ ಗೆನ್ನೂರ ಸಭೆಗೆ ತಿಳಿಸಿದರು.

ಯುಕೆಪಿ ಹಂತ ೧ ಮತ್ತು ೨ರಲ್ಲಿ ಕೃಷ್ಣಾ ಕಣಿವೆಯ ಸ್ಕೀಮ್-೧ನೇ ತೀರ್ಪಿನನ್ವಯ ೧೭೩ ಟಿ.ಎಂಸಿ ನೀರು ಹಂಚಿಕೆಯಾಗಿದ್ದು, ಎಫ್‌ಆರ್‌ಎಲ್ ೫೧೯.೬೦೦ ಮೀಟರ್‌ವರೆಗೆ ನೀರನ್ನು ಸಂಗ್ರಹಿಸಿ ೧೧ ಯೋಜನೆಗಳಿಂದ ಯೋಜಿತ ೬.೨೦ ಲಕ್ಷ ಹೆಕ್ಟೇರ್ ಜಮೀನಿಗೆ ನೀರಾವರಿ ಸೌಲಭ್ಯ ಒದಗಿಸಿದೆ. ನಾರಾಯಣರ ಜಲಾಶಯ ವ್ಯಾಪ್ತಿಯ ೩೭೦೧೦ ಎಕರೆ, ಆಲಮಟ್ಟಿ ಜಲಾಶಯ ವ್ಯಾಪ್ತಿಯ ೧೩೮೪೬೦ ಎಕರೆ, ಭೀಮಾ ಬ್ರಿಡ್ಜ್ಗಾಗಿ ೨೮೯ ಎಕರೆ, ಸನ್ನತಿ ಬ್ರಿಡ್ಜ್ ಕಂ ಬ್ಯಾರೇಜಗಾಗಿ ೧೦೨೪ ಸೇರಿ ಒಟ್ಟು ೧೭೬೭೮೩ ಎಕೆರೆ ಜಮೀನ್ನು ಭೂಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಶಾಸಕ ವೀರಣ್ಣ ಚರಂತಿಮಠ, ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಕುಮಾರ, ಯುಕೆಪಿಯ ಆಯುಕ್ತ ಶಿವಯೋಗಿ ಕಳಸದ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಯುಕೆಪಿಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎಚ್.ಡಿ.ದಾಸರ, ಉಪ ವಿಭಾಗಾಧಿಕಾರಿ ಎಂ.ಗಂಗಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.

Nimma Suddi
";