This is the title of the web page
This is the title of the web page

Live Stream

November 2024
S M T W T F S
 12
3456789
10111213141516
17181920212223
24252627282930

| Latest Version 9.4.1 |

Education NewsNational NewsState News

ಭಾರತ ಕಂಡ ಸರ್ವ ಶ್ರೇಷ್ಠ ನಾಯಕ ವಾಜಪೇಯಿ

ಭಾರತ ಕಂಡ ಸರ್ವ ಶ್ರೇಷ್ಠ ನಾಯಕ ವಾಜಪೇಯಿ

ಬಾಗಲಕೋಟೆ

ಭಾರತ ಕಂಡ ಅತ್ಯಂತ ಸರ್ವ ಶ್ರೇಷ್ಠ ನಾಯಕ ಅಟಲ್ ಬಿಹಾರಿ ವಾಜಪೇಯಿವರಾಗಿದ್ದರು ಎಂದು ಸಂಸದ ಪಿ.ಗದ್ದಿಗೌಡರ ಹೇಳಿದರು.

ನಗರದ ಶಿವಾನಂದ ಜೀನ್‌ನಲ್ಲಿರುವ ಬಿಜೆಪಿ ಕಚೇರಿಯಲ್ಲಿ ನಗರ ಮಂಡಲದಿAದ ಹಮ್ಮಿಕೊಂಡ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ೫ನೇ ವರ್ಷದ ಪುಣ್ಯತಿಥಿ ಅಂಗವಾಗಿ ನಡೆದ ಪುಣ್ಯಸ್ಮರಣೆಯ ಕಾರ್ಯಕ್ರಮದಲ್ಲಿ ಅಟಲ್‌ಜಿ ಭಾವಚಿತ್ರಕ್ಕೆ ಪುಷ್ಪಾಂಜಲಿ ಮೂಲಕ ಗೌರವ ನಮನ ಸಲ್ಲಿಸಿ ಮಾತನಾಡಿದರು. ದೇಶ ಕಂಡ ಅಪ್ರತಿಮ ದೇಶಭಕ್ತ ಅಜಾತಶತ್ರು ಆಗಿದ್ದ ವಾಜಪೇಯಿ ದೇಶಕ್ಕಾಗಿ ತಮ್ಮ ಜೀವನವನ್ನೆ ಮುಡಪಾಗಿಟ್ಟವರು. ಅವರು ಶ್ರೇಷ್ಠ ಸಂಸದೀಯ ಪಟು, ಕವಿ, ಜನನಾಯಕರಾಗಿದ್ದರು ಎಂದು ಹೇಳಿದರು.

ಮಾಜಿ ಶಾಸಕ ವೀರಣ್ಣ ಚರಂತಿಮಠ, ಅಟಲಜಿ ಮೂಲ ಸೌಲಭ್ಯಗಳೊಂದಿಗೆ ದೇಶದ ಅಖಂಡತೆಯ ಅಭಿವೃದ್ಧಿಯ ಅಡಿಪಾಯ ಹಾಕಿದವರು. ಬಿಜೆಪಿಯ ಮೊದಲ ಪ್ರಧಾನಿಯಾಗಿ ತಮ್ಮ ಪ್ರಾಮಾಣಿಕ ಸೇವೆಯಿಂದ ಜನಪ್ರಿಯರಾದವರು. ಅವರು ಪಕ್ಷವನ್ನು ತಳಹದಿಯಿಂದ ಜನಪ್ರಿಯಗೊಳಸಿ ಆರು ವರ್ಷಗಳ ಕಾಲ ಸಮ್ಮಿಶ್ರ ಸರಕಾರವನ್ನು ಯಶಸ್ವಿಯಾಗಿ ನಡೆಸಿ ಕೀರ್ತಿಗೆ ಪಾತ್ರರಾಗಿದ್ದರು. ಅವರಂತ ನಾಯಕರನ್ನು ಪಡೆದ ನಾವೂಗಳೆ ಧನ್ಯ. ಅವರ ಆದರ್ಶಗಳನ್ನು ಬಿಜೆಪಿ ಕಾರ್ಯಕರ್ತರು ಅಳವಡಿಸಿಕೊಳ್ಳಬೇಕು ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ, ಬಿಜೆಪಿ ಉಪಾಧ್ಯಕ್ಷ ರಾಜು ರೇವಣಕರ, ರಾಜು ನಾಯ್ಕರ, ಸದಾನಂದ ನಾರಾ, ಬಸವರಾಜು ಹುನಗುಂದ, ಉಮೇಶ ಹಂಚಿನಾಳ, ಯಲ್ಲಪ್ಪ ನಾರಾಯಣಿ, ಪ್ರಜ್ವಲ್ ಸನ್ನಕ್ಕಿ, ಸುರೇಶ ಗಬ್ಬೂರ, ರಾಜು ಕೋಟೆಕಲ್, ಮಾನೇಶ ಅಂಬಿಗೇರ ಇದ್ದರು.

";