This is the title of the web page
This is the title of the web page

Live Stream

November 2024
S M T W T F S
 12
3456789
10111213141516
17181920212223
24252627282930

| Latest Version 9.4.1 |

Education NewsLocal NewsState News

ಮೌಲ್ಯಾಧಾರಿತ ಶಿಕ್ಷಣ ಅವಶ್ಯ : ಸಚಿವ ತಿಮ್ಮಾಪೂರ

ಮೌಲ್ಯಾಧಾರಿತ ಶಿಕ್ಷಣ ಅವಶ್ಯ : ಸಚಿವ ತಿಮ್ಮಾಪೂರ

ಬಾಗಲಕೋಟೆ:

ಶಿಕ್ಷಣದ ಜೊತೆಗೆ ತಂದೆ, ತಾಯಿ, ಗುರುಗಳು, ಹಿರಿಯರು ಸರಿ, ತಪ್ಪು, ನ್ಯಾಯ ನೀತಿಗಳಿಗೆ ಗೌರವ ನೀಡುವಂತಹ ಮೌಲ್ಯಾಧಾರಿತ ಶಿಕ್ಷಣದ ಅವಶ್ಯಕತೆ ಇದೆ ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.

ನವನಗರದ ಕಲಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಉಪನಿರ್ದೇಶಕರ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಶಾಲಾ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಂಡ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಆಧುನಿಕತೆಯ ಓಟದಲ್ಲಿ ಓಡುತ್ತಿರುವ ಇಂದು ನೀರು, ಗಾಳಿ, ಆಹಾರ ಶಿಕ್ಷಣ ಹಾಗೂ ಎಲ್ಲ ಕ್ಷೇತ್ರಗಳು ಕಲಕುಷಿತಗೊಂಡಿವೆ. ಈ ಎಲ್ಲ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಪ್ರಜೆಗಳಾಗುವ ಮಕ್ಕಳಲ್ಲಿ ಶಿಕ್ಷಕರು ಇದರ ಅರಿವು ಮೂಡಿಸುವ ಅವಶ್ಯಕತೆ ಇದೆ ಎಂದರು.

ಮೊಬೈಲ್ ಸೇರಿದಂತೆ ಆಧುನಿಕ ತಂತ್ರಜ್ಞಾನ ಮಾಹಿತಿಯುಳ್ಳ ಇಂದಿನ ಮಕ್ಕಳು ಶಿಕ್ಷಕರನ್ನೇ ಮುಖರನ್ನಾಗಿ ಮಾಡಿಸುವಂತೆ ಪ್ರಶ್ನೆಗಳನ್ನು ಕೇಳುತ್ತಿರುವುದರಿಂದ ಶಿಕ್ಷಕರು ಇಂದಿನ ಮಕ್ಕಳಿಗೆ ಬೇಕಾಗುವಂತಹ ವಿಷಯಗಳ ಬಗ್ಗೆ ಅಧ್ಯಯನ ಮಾಡಬೇಕಾದ ಕಾಲ ಬಂದಿದೆ. ರಾಜಕೀಯ ಒತ್ತಡ, ಸಾಹಿತಿಗಳ ಒತ್ತಡಗಳ ಅನುಗುಣವಾಗಿ ಪಠ್ಯಗಳಲ್ಲಿ ಬದಲಾವಣೆಗಳಾಗುತ್ತಿರುವುದು ವಿಷಾಧನೀಯವಾಗಿದ್ದು, ಈ ನಿಟ್ಟಿನಲ್ಲಿ ಶಿಕ್ಷಕರು ಕೂಡಾ ಮಕ್ಕಳ ಜೊತೆ ಮಕ್ಕಳಾಗಿ ಕಲಿತು ಬೋಧಿಸಬೇಕಾಗಿದೆ ಎಂದರು.

ಜಿಲ್ಲೆಯಲ್ಲಿ 1793 ಪ್ರಾಥಮಿಕ ಶಾಲೆಗಳಿದ್ದು, 536 ಪ್ರೌಢಶಾಲೆಗಳಿವೆ. ಪ್ರಾಥಮಿಕ ಶಾಲೆಗೆ 9324 ಹಾಗೂ ಪ್ರೌಢಶಾಲೆಗೆ 4030 ಶಿಕ್ಷಕರಿದ್ದಾರೆ. ಆದಾಗ್ಯು ಕೂಡಾ 1280 ಪ್ರಾಥಮಿಕ ಮತ್ತು 257 ಪ್ರೌಢಶಾಲಾ ಶಿಕ್ಷಕರ ಕೊರತೆ ಇದ್ದು, ಅತಿಥಿ ಶಿಕ್ಷಕರನ್ನು ತೆಗೆದುಕೊಳ್ಳಬೇಕೆಂಬ ಚಿಂತನೆ ಇದೆ. ಶಿಕ್ಷಕರ ಬಡ್ತಿ ವಿಚಾರದಲ್ಲಿಯೂ ಕೂಡಾ ಸಂಘಟನೆಗಳೊಂದಿಗೆ ಚರ್ಚಿಸಲಾಗುವುದು. ಅಲ್ಲದೇ ಜ್ಯೋತಿ ಸಂಜೀವಿನಿ ಯೋಜನೆಯನ್ನು ಸರಳೀಕರಣಗೊಳಿಸಲಾಗುತ್ತಿದೆ. ಜಿಲ್ಲೆಯ ಎಲ್ಲ ಶಾಲೆಗಳಿಗೆ ಶೌಚಾಲಯ ಒದಗಿಸುವ ಕೆಲಸ ಮಾಡಲಾಗುವುದೆಂದು ತಿಳಿಸಿದರು.

ಸಂಸದ ಪಿ.ಸಿ.ಗದ್ದಿಗೌಡರ ಮಾತನಾಡಿ ಎಲ್ಲ ಕ್ಷೇತ್ರಗಳಲ್ಲೂ ಕಾರ್ಯನಿರ್ವಹಿಸುತ್ತಿರುವ ಪ್ರತಿಯೊಬ್ಬ ವ್ಯಕ್ತಿಗೆ ಶಿಕ್ಷಣ ನೀಡಿದವರು ಶಿಕ್ಷಕರಾಗಿದ್ದು, ಇಂದು ಶಿಕ್ಷಕರು ಹೊಸ ಬೋದನಾ ಪದ್ದತಿಯನ್ನು ಒಳವಡಿಸಿಕೊಳ್ಳುವುದು ಅನಿವಾರ್ಯವಾಗಿದೆ. ಮಕ್ಕಳಿಗೆ ಪಠ್ಯದ ಜೊತೆಗೆ ಕೌಶಲ್ಯಾಭಿವೃದ್ದಿ ಯಂತಹ ಶಿಕ್ಷಣ ನೀಡಿದಲ್ಲಿ ಕಲಿತ ವಿದ್ಯೆಯಿಂದ ಸ್ವಯಂ ಉದ್ಯೋಗ ಪ್ರಾರಂಭಿಸಿ ಆರ್ಥಿಕ, ಸಾಮಾಜಿಕ ಬೆಳೆವಣಿಗೆ ಹೊಂದಬಹುದಾಗಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಮಾತನಾಡಿ ಶಿಕ್ಷಕರು ಮಕ್ಕಳಿಗೆ ಪರಿಣಾಮಾಕಾರಿ ಶಿಕ್ಷಕವನ್ನು ನೀಡಿದಲ್ಲಿ ಆ ಮಗು 20 ವರ್ಷದ ವರೆಗೆ ಅದನ್ನು ಅನುಸರಿಸುತ್ತದೆ. ಅಲ್ಲಿಂದ ಮೇಲ್ದರ್ಜೆ ಶಿಕ್ಷಣಕ್ಕೆ ಅನಿಯಾಗಿ 30 ವರ್ಷದವರೆಗೆ ಅವನಲ್ಲಿ ಆ ಶಿಕ್ಷಣ ಇರುವದರಿಂದ ಜೀವಿತಾವಧಿವರೆಗೂ ಸುಶಿಕ್ಷಿತನಾಗಿ ವ್ಯಕ್ತಿತ್ವ ರೂಪಿಸಿಕೊಳ್ಳುವನಾಗುತ್ತಾನೆ. ಈ ಕಾರ್ಯ ಶಿಕ್ಷಕ ಮಾಡಬೇಕಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ವಾಯ್.ಮೇಟಿ ಮಾತನಾಡಿ ತಾವು ಪಡೆದ ಶಿಕ್ಷಣ ನೀತಿ, ಈ ಹಿಂದೆ ಇರುವ ಶಿಕ್ಷಣ ನೀತಿಗೆ ಬಹಳ ವ್ಯತ್ಯಾಸವಿದ್ದು, ಇಂದಿನ ವಿದ್ಯಾರ್ಥಿಗಳ ಪಠ್ಯಕ್ಕೆ ಉತ್ತರ ನೀಡುವಷ್ಟು ತಿಳುವಳಿಕೆ ನಮಗಿಲ್ಲವಂತಾಗಿದೆ. ಅಷ್ಟೊಂದು ಶಿಕ್ಷಣ ಕ್ಷೇತ್ರ ಬೆಳೆದಿದೆ ಎಂದರು.

ಉಪನ್ಯಾಸಕರಾಗಿ ಆಗಮಿಸಿದ್ದ ಜಮಖಂಡಿ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸಂಯೋಜಕ ಡಾ.ವಾಯ್.ವಾಯ್.ಕೊಕ್ಕನವರ ಈಗಿನ ಹಾಗೂ ಹಿಂದಿನ ಶಿಕ್ಷಣ ಪದ್ದತಿಯಿಂದ ಗುರು-ಶಿಷ್ಯರ ಸಂಬಂಧ ಕಡಿಮೆಯಾಗಿದೆ. ಶಿಕ್ಷಕ ಎಂಬ ಶಕ್ತಿ ವೈಚಾರಿಕವಾದುದು. ಗುರುಕುಲ, ಶಾಲಾ ಕುಲ, ಆನ್‍ಲೈನ್ ಕುಲ, ಶಿಷ್ಯ ಕುಲವಾಗಿ ಪರಿವರ್ತನೆ ಹೊಂದಿದ್ದು, ಇಂದಿನ ಯುಗದಲ್ಲಿ ಕಲಿಯುವ ಮಕ್ಕಳಿಗಿಂತ ಕಲಿಸುವ ಶಿಕ್ಷಕರ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ಮುಂದೊಂದು ದಿನ ಮನೆ ಮನೆಗಳಿಗೆ ತೆರಳಿ ಶಿಕ್ಷಣ ನೀಡುವ ಸಾಧ್ಯತೆ ಇದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕೆ.ಎಂ.ಜಾನಕಿ, ಜಿ.ಪಂ ಸಿಇಓ ಶಶಿಧರ ಕುರೇರ, ತಹಶೀಲ್ದಾರ ಅಮರೇಶ ಪಮ್ಮಾರ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಕೆ.ನಂದನೂರ, ಸರಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಎಂ.ಬಿ.ಬಳ್ಳಾರಿ ಸೇರಿದಂತೆ ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರ ಸಂಘಟನೆಗಳ ವಿವಿಧ ಅಧ್ಯಕ್ಷರುಗಳಾದ ಬಸವರಾಜ, ಲಕ್ಷ್ಮಣ ಯಂಕಂಚಿ, ತಿಪ್ಪರೆಡ್ಡಿ, ಜಾಸ್ಮೀನ್ ಕಿಲ್ಲೇದಾರ, ಕೆ.ಎಚ್.ಮುಜಾವರ, ದಯಾನಂದ ಶಿಕ್ಕೇರಿ, ಎನ್.ಎಲ್.ನೀಲನಾಯಕ, ಲಲಿತಾ, ಕೆ.ಎಸ್.ದೇಸಾಯಿ, ಆಲಗುಂಡಿ ಹಂಚಿನಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು.

*ಉತ್ತಮ ಶಿಕ್ಷಕರಿಗೆ ಜಿಲ್ಲಾ ಮಟ್ಟದ ಪ್ರಶಸ್ತಿ*
————————————
ಜಿಲ್ಲೆಯಲ್ಲಿ ಆಯ್ಕೆಗೊಂಡ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಉತ್ತಮ ಶಿಕ್ಷಕರನ್ನು ಸನ್ಮಾನಿಸಲಾಯಿತು.

ಪ್ರಾಥಮಿಕ ವಿಭಾಗದಲ್ಲಿ ಲಕ್ಷ್ಮೀ ಕುಲಕರ್ಣಿ, ಎಲ್.ವಿ.ಪರಡ್ಡಿ, ಎಚ್.ಎಸ್.ಕಾಳೆ, ಸಿದ್ದಪ್ಪ ಕೊಣ್ಣೂರ, ಗೋಪಾಲ ಮರಾಠಾ, ಅನ್ನಪೂರ್ಣ ಜವಳಿ, ಪುಂಡಲೀಕ ಜೋಗಣ್ಣನವರ, ಕವಿತಾ ರಾಮದುರ್ಗ, ರಶಿದಾಬಾನು ರಿಸಾಲ್ದಾರ, ವಿಠಲ ತೋಟದ, ಚಂದ್ರಶೇಖರ ದಾದನಟ್ಟಿ, ಎಸ್.ಜೆ.ಕೋಲಾರ, ಎಸ್.ಕೆ.ಕೊನೆಸಾಗರ, ಚಿಕ್ಕಯ್ಯ ಬುದ್ನಿ, ಬಸಲಿಂಗಪ್ಪ ರೊಟ್ಟಿ, ಬಸವರಾಜ ಬಲಕುಂದಿ, ಎಸ್.ವಿ.ಮಮದಾಪೂರ, ಸಂಗಯ್ಯ ಮೋತಿ, ಎಸ್.ಕೆ.ಅಂಬೇಕರ, ಶಿವಪ್ಪ ಇಮ್ಮಣ್ಣವರ,

ಪ್ರೌಢಶಾಲಾ ವಿಭಾಗದಲ್ಲಿ ಬಾಳಪ್ಪ ಹಳ್ಳಿ, ಎಸ್.ಬಿ.ನಡುವಿನಮನಿ, ಎಚ್.ಎಚ್.ಲಮಾಣಿ, ಅಕ್ಬರಸಾಬ ಕಲ್ಯಾಣಿ, ಇಮಾಮಸಾಬ ಹಿಪ್ಪರಗಿ, ಎ.ಬಿ.ಮಾಂಗ, ಬಸವರಾಜ ಡೊಳ್ಳಿನ, ಎಚ್.ಜಿ.ಹುಲ್ಲಿಕೇರಿ, ಸಂಗನಬಸವ ಉಟಗಿ ಮತ್ತು ವಿ.ಆರ್.ಪತ್ತಾರ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲೆಯ 52 ಜನ ನಿವೃತ್ತ ಶಿಕ್ಷಕರನ್ನು ಸಹ ಸನ್ಮಾನಿಸಲಾಯಿತು.

";