This is the title of the web page
This is the title of the web page

Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

Health & Fitness

ಬಿಳಿ ರಕ್ತ ಕಣ ಕಡಿಮೆಯಾಗಿರುವ ಲಕ್ಷಣಗಳೇನು? ಇದಕ್ಕೆ ಸೇವಿಸಬೇಕಾದ ಆಹಾರಗಳನ್ನು ನೋಡಿ.

ಬಿಳಿ ರಕ್ತ ಕಣ ಕಡಿಮೆಯಾಗಿರುವ ಲಕ್ಷಣಗಳೇನು? ಇದಕ್ಕೆ ಸೇವಿಸಬೇಕಾದ ಆಹಾರಗಳನ್ನು ನೋಡಿ.

ರಕ್ತವು ವಿವಿಧ ರೀತಿಯ ರಕ್ತ ಕಣಗಳಿಂದ ಮಾಡಲ್ಪಟ್ಟಿದೆ. ರಕ್ತ ಕಣಗಳು ಮೂಳೆ ಮಜ್ಜೆಯಲ್ಲಿ ಉತ್ಪತ್ತಿಯಾಗುತ್ತವೆ. ಅವುಗಳಲ್ಲಿ ಆಮ್ಲಜನಕವನ್ನು ಸಾಗಿಸುವ ಕೆಂಪು ರಕ್ತ ಕಣಗಳು, ಪ್ಲೇಟ್‌ಲೆಟ್‌ಗಳು ಗಾಯವನ್ನು ಗುಣಪಡಿಸಲು ಮತ್ತು ರಕ್ತಸ್ರಾವವನ್ನು ನಿಲ್ಲಿಸಲು ಸಹಾಯ ಮಾಡುತ್ತದೆ. ಬಿಳಿ ರಕ್ತ ಕಣಗಳು ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ ಎಂದು ಮಾಹಿತಿ ತಿಳಿದು ಬಂದಿದೆ.

ದೇಹದಲ್ಲಿ ಸೋಂಕು ಉಂಟಾದಾಗ ಮೂಳೆ ಮಜ್ಜೆಯು ಅದರ ಚಟುವಟಿಕೆಯನ್ನು ಹೆಚ್ಚಿಸಲು ಉತ್ತೇಜಿಸುತ್ತದೆ ಮತ್ತು ಸೋಂಕಿನ ವಿರುದ್ಧ ಹೋರಾಡಲು ಹೆಚ್ಚುವರಿ ಬಿಳಿ ರಕ್ತ ಕಣಗಳನ್ನು ಉತ್ಪಾದಿಸಲು ಪ್ರಾರಂಭಿಸುತ್ತದೆ. ಹೆಚ್ಚು ಬಿಳಿ ರಕ್ತ ಕಣಗಳ ಕೌಂಟ್​ಗೆ ಕಾರಣವೆಂದರೆ ಸೋಂಕು, ಮೂಳೆ ಮಜ್ಜೆಯಲ್ಲಿನ ಅಸಹಜತೆಗಳು, ಶ್ವಾಸಕೋಶದ ಕಾಯಿಲೆ, ಆಲ್ಕೋಹಾಲ್ ಸೇವನೆ, ಧೂಮಪಾನ, ಕಳಪೆ ಜೀವನಶೈಲಿ, ಪ್ರತಿರಕ್ಷಣಾ ಅಸ್ವಸ್ಥತೆಗಳು, ಅಲರ್ಜಿಯ ಪ್ರತಿಕ್ರಿಯೆಗಳು ಮತ್ತು ಭಾವನಾತ್ಮಕ ಒತ್ತಡ. ಹೆಚ್ಚು ಬಿಳಿ ರಕ್ತ ಕಣಗಳ ಮತ್ತೊಂದು ಸಂಭವನೀಯ ಕಾರಣವೆಂದರೆ ಲ್ಯುಕೇಮಿಯಾ. ಕ್ರೋನ್ಸ್ ಕಾಯಿಲೆ ಅಥವಾ ಗ್ರೇವ್ಸ್ ಥೈರಾಯ್ಡಿಟಿಸ್​ನಂತಹ ಪ್ರತಿರಕ್ಷಣಾ ವ್ಯವಸ್ಥೆಯ ಅಸ್ವಸ್ಥತೆಗಳು ದೇಹವು ಬಿಳಿ ರಕ್ತ ಕಣಗಳ ಮಟ್ಟವನ್ನು ಹೆಚ್ಚಿಸಲು ಕಾರಣವಾಗಬಹುದು.

ಮನುಷ್ಯನ ದೇಹದಲ್ಲಿ ಸುಮಾರು 100 ಬಿಲಿಯನ್ ಬಿಳಿ ರಕ್ತ ಕಣಗಳು ಉತ್ಪಾದನೆಯಾಗುತ್ತದೆ. ಬಿಳಿ ರಕ್ತ ಕಣಗಳು ಅಥವಾ ಲ್ಯುಕೋಸೈಟ್​ಗಳು ಸೋಂಕುಗಳ ವಿರುದ್ಧ ಹೋರಾಡುವ ಮೂಲಕ ದೇಹಕ್ಕೆ ರಕ್ಷಣೆ ನೀಡುತ್ತಿದ್ದು, ಬಿಳಿ ರಕ್ತ ಕಣಗಳು ನಮ್ಮ ಮೂಳೆ ಮಜ್ಜೆಯಲ್ಲಿ ಉತ್ಪತ್ತಿಯಾಗುತ್ತವೆ. ಅವು ಪಕ್ವವಾದ ನಂತರ ನ್ಯೂಟ್ರೋಫಿಲ್‌ಗಳು, ಲಿಂಫೋಸೈಟ್‌ಗಳು, ಮೊನೊಸೈಟ್‌ಗಳು, ಇಯೊಸಿನೊಫಿಲ್ ಮತ್ತು ಬಾಸೊಫಿಲ್‌ಗಳಂತಹ 5 ಪ್ರಮುಖ ರೀತಿಯ ಬಿಳಿ ರಕ್ತ ಕಣಗಳಲ್ಲಿ ಅಭಿವೃದ್ಧಿಗೊಳ್ಳುತ್ತವೆ.

 

Nimma Suddi
";