This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Entertainment News

‘ರಸ್ತೆಯಲ್ಲಿ ಒಬ್ಬ ಮಹಿಳೆಯೂ RCB ಗೆಲುವನ್ನು ಸಂಭ್ರಮಿಸಿಲ್ಲ’: ಸಿದ್ದಾರ್ಥ್​ ಹೇಳಿಕೆ ಹಿಂದಿನ ಟ್ವಿಸ್ಟ್ ಏನು?

‘ರಸ್ತೆಯಲ್ಲಿ ಒಬ್ಬ ಮಹಿಳೆಯೂ RCB ಗೆಲುವನ್ನು ಸಂಭ್ರಮಿಸಿಲ್ಲ’: ಸಿದ್ದಾರ್ಥ್​ ಹೇಳಿಕೆ ಹಿಂದಿನ ಟ್ವಿಸ್ಟ್ ಏನು?

‘ಮಹಿಳಾ ಪ್ರೀಮಿಯರ್​ ಲೀಗ್​ನ ಫೈನಲ್​ ಪಂದ್ಯ ಭಾನುವಾರ (ಮಾರ್ಚ್​ 17) ರಾತ್ರಿ ನಡೆದಿದ್ದು, ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಜಯ ಗಳಿಸಿತು. ಆರ್​ಸಿಬಿ ವನಿತೆಯರು ಕಪ್​ ಎತ್ತುತ್ತಿದ್ದಂತೆಯೇ ಬೆಂಗಳೂರಿನ ಬೀದಿಗಳಲ್ಲಿ ಸಂಭ್ರಮಾಚರಣೆ ಶುರುವಾಯಿತು ಎಂದು ಮಾಹಿತಿ ತಿಳಿದು ಬಂದಿದೆ.

ಈ ಕುರಿತು ನಟ ಸಿದ್ದಾರ್ಥ್​ ಟ್ವೀಟ್​ ಮಾಡಿದ್ದು, ನಡುರಾತ್ರಿ ಕೇವಲ ಪುರುಷರು ಮಾತ್ರ ಸೆಲೆಬ್ರೇಟ್​ ಮಾಡುತ್ತಿದ್ದಾರೆ, ಆದರೆ ಮಹಿಳೆಯರು ಈ ಸಂಭ್ರಮದಲ್ಲಿ ಭಾಗಿ ಆಗಿಲ್ಲ, ಬೆಂಗಳೂರಿನ ರಸ್ತೆಗಳಲ್ಲಿ ಪುರುಷರು ‘ಆರ್​ಸಿಬಿ’ ತಂಡದ ಗೆಲುವನ್ನು ಸಂಭ್ರಮಿಸುತ್ತಿರುವ ವಿಡಿಯೋವನ್ನು ಸಿದ್ದಾರ್ಥ್​ ಅವರು ಶೇರ್​ ಮಾಡಿಕೊಂಡಿದ್ದಾರೆ. ‘ಒಂದು ಟೂರ್ನಿಯಲ್ಲಿ ಮಹಿಳೆಯರ ತಂಡ ಟ್ರೋಫಿ ಗೆದ್ದಿದೆ. ಆದರೆ ರಸ್ತೆಯಲ್ಲಿ ಸೆಲೆಬ್ರೇಟ್​ ಮಾಡಲು ಓರ್ವ ಮಹಿಳೆ ಕೂಡ ಇಲ್ಲ ಎಂದರು.

ಭಾರತದ ಪುರುಷಪ್ರಧಾನ ವ್ಯವಸ್ಥೆಗೆ ಇದು ಸೂಕ್ತ ಉದಾಹರಣೆ’ ಎಂದು ಸಿದ್ದಾರ್ಥ್​ ಅವರು ಎಕ್ಸ್​ (ಟ್ವಿಟರ್​) ಖಾತೆಯಲ್ಲಿ ಪೋಸ್ಟ್​ ಮಾಡಿದ್ದು, ಸಿದ್ದಾರ್ಥ್​ ಮಾಡಿದ ಈ ಪೋಸ್ಟ್​ಗೆ ಅನೇಕರು ಗರಂ ಆಗಿದ್ದು, ಮಹಿಳೆಯರ ಗೆಲುವನ್ನು ನಾವೇಕೆ ಸೆಲೆಬ್ರೇಟ್​ ಮಾಡಬಾರದು’ ಎಂದು ಕೆಲವು ಪುರುಷರು ಪ್ರಶ್ನೆ ಎಸೆದಿದ್ದು, ತಮ್ಮ ಮಾತನ್ನು ನೆಟ್ಟಿಗರು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ ಎಂಬುದು ಸಿದ್ದಾರ್ಥ್​ ಅವರಿಗೆ ಗೊತ್ತಾಗಿದೆ. ಹಾಗಾಗಿ ಅವರು ಸ್ಪಷ್ಟನೆ ನೀಡಿದರು.

‘ರಾತ್ರಿಯ ಸಂದರ್ಭದಲ್ಲಿ ಸಾರ್ವಜನಿಕ ಸ್ಥಳಗಳಿಗೆ ಬರಲು ಭಾರತದ ಮಹಿಳೆಯರಿಗೆ ಅವಕಾಶ ಇಲ್ಲ ಎಂಬುದನ್ನು ತಿಳಿಸಲು ಈ ಟ್ವೀಟ್​ ಮಾಡಿದ್ದೇನೆ. ಸ್ತ್ರೀಯರ ದೊಡ್ಡ ಗೆಲುವನ್ನು ಬೀದಿಯಲ್ಲಿ ಸಂಭ್ರಮಿಸಲು ಪುರುಷರ ರೀತಿ ಮಹಿಳೆಯರಿಗೆ ಸಾಧ್ಯವಾಗಿಲ್ಲ ಎಂಬ ವ್ಯಂಗ್ಯ ಇದರಲ್ಲಿದೆ’ ಎಂದು ಸಿದ್ದಾರ್ಥ್​ ಅವರು ಸ್ಪಷ್ಟಪಡಿಸಿದ್ದು ಬೆಳಕಿಗೆ ಬಂದಿದೆ.

 

";