This is the title of the web page
This is the title of the web page

Live Stream

June 2024
S M T W T F S
 1
2345678
9101112131415
16171819202122
23242526272829
30  

| Latest Version 9.4.1 |

Entertainment NewsInternational NewsNational NewsSports NewsState News

ಮಳೆಯಿಂದ ಪಂದ್ಯ ರದ್ದಾದರೆ ಟೀಮ್ ಇಂಡಿಯಾ ಲೆಕ್ಕಾಚಾರವೇನು?

ಕ್ಯಾಂಡಿ

ಸೆಪ್ಟೆಂಬರ್​ 2ರಂದು ಶ್ರೀಲಂಕಾದ ಕ್ಯಾಂಡಿಯಲ್ಲಿ ನಡೆಯುವ ಏಷ್ಯಾಕಪ್​ನ(Asia Cup 2023) ಭಾರತ ಹಾಗೂ ಪಾಕಿಸ್ತಾನ(ind vs pak) ನಡುವಿನ ಹೈವೋಲ್ಟೆಜ್​ ಪಂದ್ಯವನ್ನು ಕಣ್ತುಂಬಿಕೊಳ್ಳಲು ಉಭಯ ದೇಶಗಳ ಜನರು ಮಾತ್ರವಲ್ಲ, ಜಗತ್ತೇ ಕಾಯುತ್ತಿದೆ. ಆದರೆ ಈ ಪಂದ್ಯ ನಡೆಯುವುದು 99 ಪ್ರತಿಶತ ಅನುಮಾನ ಎಂದು ಹವಾಮಾನ ಇಲಾಖೆ(weather forecast kandy) ಮೂರು ದಿನಗಳ ಹಿಂದೆಯೇ ಎಚ್ಚರಿಕೆ ನೀಡಿದೆ. ಶ್ರೀಲಂಕಾದಲ್ಲಿ ಬಾಲಗೊಳ್ಳ ಹೆಸರಿನ ಚಂಡಮಾರುತ ಅಪ್ಪಳಿಸಲಿದ್ದು ಪಂದ್ಯ ನಡೆಯುವ ದಿನ ಭಾರಿ ಗುಡುಗು(weather forecast) ಸಹಿತ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ. ಒಂದೊಮ್ಮೆ ಪಂದ್ಯ ರದ್ದಾದರೆ ಭಾರತ ತಂಡದ ಸೂಪರ್​ 4 ಲೆಕ್ಕಾಚಾರ ಹೇಗಿರಲಿದೆ ಎಂಬ ಮಾಹಿತಿ ಇಂತಿದೆ.

ಶುಕ್ರವಾರವೇ ಮಳೆಯ ಅಬ್ಬರ
ಶುಕ್ರವಾರ ರಾತ್ರಿಯಿಂದಲೇ ಶ್ರೀಲಂಕಾದಲ್ಲಿ ಮಳೆ ಆರಂಭವಾಗಲಿದೆ ಎಂದು ಹಮಾಮಾನ ವರದಿಯಲ್ಲಿ ತಿಳಿಸಿದೆ. ಅದರಲ್ಲೂ ನಡೆಯುವ ಶನಿವಾರದಂದು ಕ್ಯಾಂಡಿಯಲ್ಲಿ ಶೇ. 90ರಷ್ಟು ಗುಡುಗು ಸಹಿತ ಜೋರು ಮಳೆಯಾಗಲಿದೆ ಎಂದು ತಿಳಿಸಿದೆ. ಹಗಲಿನಲ್ಲೇ ಇಲ್ಲಿ ಮಳೆ ಆರಂಭವಾಗಿ ರಾತ್ರಿಯಲ್ಲಿ ಗುಡುಗು ಸಹಿತ ಜೋರು ಮಳೆ ಆಗಲಿದ್ದು ಪಂದ್ಯ ನಡೆಯುವುದು ಅನುಮಾನ ಎಂದು ಎಚ್ಚರಿಕೆ ನೀಡಿದೆ.

ಪಂದ್ಯ ರದ್ದಾದರೂ ಪಾಕ್​ಗಿಲ್ಲ ಚಿಂತೆ
ಭಾರತ ಮತ್ತು ಪಾಕಿಸ್ತಾನ ಮತ್ತು ನೇಪಾಳ ತಂಡಗಳು ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿವೆ. ಈಗಾಗಲೇ ಪಾಕಿಸ್ತಾನ ತಂಡ ನೇಪಾಳ ವಿರುದ್ಧ 238 ರನ್‌ಗಳ ಬೃಹತ್ ಗೆಲವು ದಾಖಲಿಸಿ ಉತ್ತಮ ರನ್​ ರೇಟ್​ ಆಧಾರದಲ್ಲಿ ಬಹುತೇಕ ಸೂಪರ್​-4ಗೆ ಪ್ರವೇಶ ಪಡೆದಿದೆ. ಹೀಗಾಗಿ ಈ ಪಂದ್ಯ ರದ್ದುಗೊಂಡರೂ ಪಾಕ್​ಗೆ ಚಿಂತೆಯಿಲ್ಲ. ಸೂಪರ್​-4ಗೆ ಪ್ರವೇಶ ಪಡೆಯಲು ಪೈಪೋಟಿ ಇರುವುದು ಭಾರತ ಮತ್ತು ನೇಪಾಳ ನಡುವೆ.

ಭಾರತದ ಲೆಕ್ಕಾಚಾರವೇನು?
ಪಾಕ್​ ವಿರುದ್ಧದ ಪಂದ್ಯ ರದ್ದುಗೊಂಡರೆ ಆಗ ಉಭಯ ತಂಡಗಳಿಗೆ ಒಂದು ಅಂಕ ಸಿಗಲಿದೆ. ಪಾಕಿಸ್ತಾನ ಸೇಫ್​ ಆಗಲಿದೆ. ಭಾರತ ತನ್ನ ಮುಂದಿನ ಪಂದ್ಯವನ್ನು ನೇಪಾಳ ವಿರುದ್ಧ ಆಡಿ ಗೆದ್ದರೆ ಭಾರತವೂ ಸೂಪರ್​-4ಗೆ ಪ್ರವೇಶ ಪಡೆಯಲಿದೆ. ಒಂದೊಮ್ಮೆ ಭಾರತ-ನೇಪಾಳ ಪಂದ್ಯವೂ ಮಳೆಯಿಂದ ರದ್ದಾದರೆ, ಎರಡೂ ತಂಡಗಳಿಗೂ ತಲಾ ಒಂದು ಅಂಕ ನೀಡಲಾಗುತ್ತದೆ. ಆಗ ಭಾರತ 2 ಅಂಕ ಸಂಪಾಧಿಸಿದಂತಾಗಿ ಎ ಗುಂಪಿನ ದ್ವಿತೀಯ ತಂಡವಾಗಿ ಸೂಪರ್​-4 ಟಿಕೆಟ್​ ಪಡೆಯಲಿದೆ. ಪಾಕ್​ ವಿರುದ್ಧ ಮೊದಲ ಪಂದ್ಯದಲ್ಲಿ ಸೋಲು ಕಂಡ ಕಾರಣ ನೇಪಾಳ ಟೂರ್ನೊಯಿಂದ ಹೊರಬಿಳಲಿದೆ.

ಹೀಗಾದರೆ ಕಷ್ಟ
ಒಂದೊಮ್ಮೆ ಪಾಕಿಸ್ತಾನ ವಿರುದ್ಧ ಪಂದ್ಯ ನಡೆದು ಇಲ್ಲಿ ಭಾರತ ದೊಡ್ಡ ಅಂತರದಿಂದ ಸೋತರೆ ನೇಪಾಳ ವಿರುದ್ಧದ ಪಂದ್ಯ ಮಳೆಯಿಂದ ರದ್ದಾದರೆ ಭಾರತದ ಸೂಪರ್​-4 ರೇಸ್​ನಿಂದ ಹೊರಬೀಳುವ ಸಾಧ್ಯತೆಯೂ ಇದೆ. ಆಗ ರನ್​ರೇಟ್​ ಪಾತ್ರ ಪ್ರಮುಖವಾಗುತ್ತದೆ. ಯಾವ ತಂಡ ರನ್​ರೇಟ್​ನಲ್ಲಿ ಮುಂದಿದೆ ಆ ತಂಡ ಸೂಪರ್​-4 ಟಿಕೆಟ್​ ಪಡೆಯಲಿದೆ.