ಶಿವಮೊಗ್ಗ: ರಾಜ್ಯ ಸರಕಾರ ಮುಸ್ಲಿಮರ ಪರವಾಗಿದೆ. ಅದಕ್ಕಾಗೇ ಈ ಸ್ಥಿತಿ ಸೃಷ್ಟಿಯಾಗಿದೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆಯಲ್ಲಿ ನಡೆದ ಆದಿಲ್ ಸಾವು ಪ್ರಕರಣದಲ್ಲಿ ಪೊಲೀಸ್ ಠಾಣೆ ಮೇಲೆಯೇ ದಾಳಿ ಮಾಡಲಾಗಿದೆ. ಪೊಲೀಸ್ ಠಾಣೆಗಳಿಗೆ ರಕ್ಷಣೆ ಕೊಡಬೇಕಿದೆ.
ಮಂಗಳೂರಿನಲ್ಲಿ ರಸ್ತೆ ಮೇಲೆ ನಮಾಜ್ ಮಾಡಿದ್ದಕ್ಕೆ ಸುಮೋಟೊ ಕೇಸ್ ಹಾಕಿದ್ದ ಇನ್ಸ್ ಪೆಕ್ಟರ್ ಗೆ ಕಡ್ಡಾಯ ರಜೆ ಮೇಲೆ ಕಳುಹಿಸಲಾಯಿತು. ಸರಕಾರದ ಈ ನಿರ್ಧಾರ ರಸ್ತೆಯ ಮೇಲೆಯೇ ನಮಾಜ್ ಮಾಡುವುದಕ್ಕೆ ಲೈಸೆನ್ಸ್ ಕೊಟ್ಟಂತಿದೆ. ಪ್ರಾಮಾಣಿಕ ಅಧಿಕಾರಿ ಮೇಲೆಯೇ ಕ್ರಮಕೈಗೊಳ್ಳುವುದಾದರೆ ಯಾರು ಧೈರ್ಯದಿಂದ ಕೆಲಸ ಮಾಡಲು ಸಾಧ್ಯ? ಕಾಂಗ್ರೆಸ್ ಸರಕಾರ ಕರ್ನಾಟಕ ರಾಜ್ಯವನ್ನು ಮುಸ್ಲಿಂ ರಾಜ್ಯವೆಂದು ಘೋಷಣೆ ಮಾಡಲಿ ಎಂದು ಕಿಡಿಕಾರಿದರು.
ಈ ಪ್ರಕರಣದಲ್ಲಿ ಲಾಕಪ್ ಡೆತ್ ಅಲ್ಲ ಎಂದು ಸ್ಪಷ್ಟವಾಗಿದೆ. ಗೃಹ ಸಚಿವರೇ ಹೇಳಿಯಾಗಿದೆ. ಆದರೂ ಠಾಣೆ ಮೇಲೆ ದಾಳಿ ಮಾಡಿದ ಎಷ್ಟು ಜನರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ? ಎಂದು ಪ್ರಶ್ನಿಸಿದ್ದಾರೆ.