ಪ್ರಮುಖ ರಸ್ತೆ ಜಾಲದಲ್ಲಿ 3234 ಸೇತುವೆ :ಗೋವಿಂದ ಕಾರಜೋಳ
ನಿಮ್ಮ ಸುದ್ದಿ ಬೆಂಗಳೂರು
ರಾಜ್ಯದಲ್ಲಿ ಪ್ರಮುಖ ರಸ್ತೆ ಜಾಲದಲ್ಲಿ ಈವರೆಗೆ 3,234 ಸೇತುವೆ ಗುರುತಿಸಲಾಗಿದ್ದು, 427 ಸೇತುವೆಗಳನ್ನು ಅಗಲೀಕರಣಗೊಳಿಸುವ ಹಾಗೂ 290 ಸೇತುವೆಗಳನ್ನು ಪುನರ್ ನಿರ್ಮಿಸುವ ಅವಶ್ಯಕತೆ ಇದೆ ಎಂದು ಡಿಸಿಎಂ ಗೋವಿಂದ ಕಾರಜೋಳ ತಿಳಿಸಿದ್ದಾರೆ.
ವಿಧಾನ ಪರಿಷತ್ತಿನಲ್ಲಿ ಸೋಮವಾರ ಕೆ.ಎ.ತಿಪ್ಪೇಸ್ವಾಮಿ ಅವರ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ, ರಾಜ್ಯದ ಪ್ರಮುಖ ರಸ್ತೆ ಜಾಲದಲ್ಲಿರುವ ಈ ಸೇತುವೆಗಳಲ್ಲಿ 2,517 ಸೇತುವೆಗಳನ್ನು ದುರಸ್ತಿ ಮತ್ತು ಪುನಶ್ಚೇತನಗೊಳಿಸಲಾಗುವುದು.
ಅಗಲ ಕಿರಿದಾದ ಸೇತುವೆಗಳ ಎರಡು ಬದಿಯಲ್ಲಿ ಕೈಪಿಡಿ ಮಾಡಿ ಸೂಚನಾ ಮತ್ತು ನಾಮಫಲಕ ಅಳವಡಿಸಿ ಸುಗಮ ಸಂಚಾರಕ್ಕೆ ತೊಂದರೆಯಾಗದ ರೀತಿಯಲ್ಲಿ ದುರಸ್ಥಿ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ.
ಅನುದಾನದ ಲಭ್ಯತೆಯ ಅನುಗುಣವಾಗಿ ತೀವ್ರ ದುಸ್ಥಿತಿಯಲ್ಲಿರುವ ಸೇತುವೆಗಳ ಬದಲಿಗೆ ಹೊಸದಾಗಿ ಸೇತುವೆ ನಿರ್ಮಿಸಲು ಕ್ರಮಕೈಗೊಳ್ಳಲಾಗುತ್ತಿದೆ ಎಂದು ಡಿಸಿಎಂ ಅವರು ಲಿಖಿತವಾಗಿ ಉತ್ತರಿಸಿದ್ದಾರೆ.