ಶಾಸಕ ವೀರಣ್ಣ ಚರಂತಿಮಠ ಸೂಚನೆ
ಒತ್ತುವರಿ ತೆರವಿಗೆ ಪಪಂ ಆಡಳಿತ ಮುಂದಾಗಲಿ
ನಿಮ್ಮ ಸುದ್ದಿ ಬಾಗಲಕೋಟೆ
ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ ಪಟ್ಟಣದ ಸೇರಿದಂತೆ ಹೋಬಳಿ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿನ ವಿವಿಧ ಕಾಮಗಾರಿಗಳಿಗೆ ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ ಭೂಮಿ ಪೂಜೆ ನೆರವೇರಿಸಿದರು.
ಪಟ್ಟಣದಲ್ಲಿ ಸರಕಾರಿ ಉರ್ದು ಪ್ರಾಥಮಿಕ ಶಾಲೆ, ಬಣ್ಣದ ಮನೆ ಶಾಲೆ, ಹೆಣ್ಣುಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ಸೇರಿದಂತೆ ಹಲವು ಕಡೆಗಳಲ್ಲಿ ಅಂದಾಜು ೪ ಕೋಟಿ ೫೩ ಲಕ್ಷ ರೂ. ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಶಾಸಕರು ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು. ವಿಳಂಬ ಮಾಡದೆ ನಿಗಧಿತ ಅವಧಿಯಲ್ಲಿ ಪೂರ್ಣಗೊಳ್ಳುವಂತಾಗಬೇಕು ಎಂದು ಸಂಬAಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಪಪಂ ವತಿಯಿಂದ ೫ ಲಕ್ಷ ೧೨ ವೆಚ್ಚದಲ್ಲಿ ೨೭ ಫಲಾನುಭವಿಗಳಿಗೆ ಸೋಲಾರ್ ಗೀಜರ್ ಹಾಗೂ ೩೦ ಫಲಾನುಭವಿಗಳಿಗೆ ಹೊಲಿಗೆ ಯಂತ್ರಗಳನ್ನು ಶಾಸಕರು ವಿತರಿಸಿದರು. ಸಂಗಮೇಶ್ವರ ಶಾಲೆಯಲ್ಲಿ ೩೦ ಲಕ್ಷ ವೆಚ್ಚದ ಹೆಚ್ಚುವರಿ ಶಾಲೆ ಕೋಣೆ, ಉರ್ದು ಪ್ರಾಥಮಿಕ ಶಾಲೆಯಲ್ಲಿ ೪೦.೬೦ ಲಕ್ಷ ವೆಚ್ಚದ ಕಟ್ಟಡ ದುರಸ್ತಿ, ಬಣ್ಣದ ಮನೆ ಶಾಲೆಯ ಕೋಣೆ ದುರಸ್ತಿ ಹಾಗೂ ಶೌಚಾಲಯ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದರು.
ಬಾಲಕಿಯರ ಸರಕಾರಿ ಹೆಣ್ಣು ಮಕ್ಕಳ ಶಾಲೆಯಲ್ಲಿ ೨ ನೂತನ ಕೋಣೆ ನಿರ್ಮಾಣಕ್ಕೆ ೨೪ ಲಕ್ಷ ಮೊತ್ತದ ಅಂದಾಜನ್ನು ಗಮನಿಸಿದ ಶಾಸಕರು ಈ ಅನುದಾನದಲ್ಲಿ ೩ ಕೋಣೆಗಳು ನಿರ್ಮಾಣವಾಗುತ್ತವೆ. ಗುತ್ತಿಗೆದಾರರಿಗೆ ಸೂಚಿಸಿ ಇಲ್ಲವೆ ಕಾಮಗಾರಿ ಬಿಟ್ಟುಕೊಡಲು ಹೇಳಿ ಎಂದು ಇಲಾಖೆ ಅಧಿಕಾರಿಗಳಿಗೆ ಖಡಕ್ ವಾರ್ನ್ ಮಾಡಿದರು.
ಪಟ್ಟಣದಲ್ಲಿ ಒತ್ತುವರಿ ಸುದ್ದಿ ಹೆಚ್ಚಾಗಿ ಕೇಳಿ ಬರುತ್ತಿದೆ. ಖುಲ್ಲಾ ಜಾಗೆ ಎಂದ ಕೂಡಲೆ ಕೆಲ ವರ್ಷಗಳಲ್ಲೇ ಒತ್ತುವರಿಯಾಗಿರುತ್ತದೆ ಎಂಬ ದೂರು ಬಂದಿದ್ದು ಪಟ್ಟಣ ಪಂಚಾಯಿತಿ ಆಡಳಿತ ಈ ಕುರಿತು ಸೂಕ್ತವಾದ ಹಾಗೂ ಗಟ್ಟಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಸೂಚಿಸಿದರು.
ಐಹೊಳೆಯಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಭೂಮಿ ಪೂಜೆ, ಹೂವಿನಹಳ್ಳಿಯಲ್ಲಿ ಶಾಲೆ ಕೋಣೆ, ರಾಮಥಾಳದಲ್ಲಿ ಶೌಚಾಲಯ ನಿರ್ಮಾಣ, ಸಿಸಿ ರಸ್ತೆ, ಬೇವಿನಾಳದಲ್ಲಿ ಸಮುದಾಯ ಭವನ, ಇನಾಂಬೂದಿಹಾಳದಲ್ಲಿ ರಸ್ತೆ ಸುಧಾರಣೆ, ಹಿರೇಮಾಗಿಯಲ್ಲಿ ಸಮುದಾಯ ಶೌಚಾಲಯ ನಿರ್ಮಾಣ, ಅಂಗನವಾಡಿ ಕಟ್ಟಡ, ಸುರಳಿಕಲ್‌ನಲ್ಲಿ ಸಮುದಾಯ ಭವನ ನಿರ್ಮಾಣ ಸೇರಿದಂತೆ ಒಟ್ಟು ೪ ಕೋಟಿ ೫೩ ಲಕ್ಷ ರೂ. ವೆಚ್ಚದ ಕಾಮಗಾರಿಗಳಿಗೆ ಮಂಗಳವಾರ ಭೂಮಿ ಪೂಜೆ ನೆರವೇರಿಸಿದರು.
ಪ್ರಭುಶಂಕರೇಶ್ವರ ಗಚ್ಚಿನಮಠದ ಶಂಕರರಾಜೇಂದ್ರ ಸ್ವಾಮೀಜಿ, ಪಪಂ ಅಧ್ಯಕ್ಷ ಸಂಗಪ್ಪ ತಳವಾರ, ಉಪಾಧ್ಯಕ್ಷೆ ಶಂಕ್ರಮ್ಮ ಗೌಡರ, ಮುಖ್ಯಾಧಿಕಾರಿ ಗುರುರಾಜ ಚೌಕಿಮಠ, ಸದಸ್ಯರಾದ ವಿಜಯಕುಮಾರ ಕನ್ನೂರ, ಗುರುನಾಥ ಚಳ್ಳಮರದ, ಶೇಖಪ್ಪ ಲಮಾಣಿ, ಶಾಂತವ್ವ ಯಂಕಂಚಿ, ಸೋನಾಬಾಯಿ ಲಮಾಣಿ, ಸಂತೋಷ ವ್ಯಾಪಾರಿಮಠ, ಪರಶುರಾಮ ಪುರ್ತಗೇರಿ, ಡಾ.ಎಂ.ವಿ.ಹಾದಿಮನಿ, ಐ.ಎಸ್.ಲಿಂಗದಾಳ, ನಿರ್ಮಿತಿ ಕೇಂದ್ರ ಶಂಕರಲಿಂಗ ಗೂಗಿ, ದೇಸಾಯಿ, ಅಜ್ಮೀರ ಮುಲ್ಲಾ, ಯಮನೂರ ಕತ್ತಿ, ಮುಸ್ತಾಕ ಖಾದ್ರಿ, ಡಿ.ಪಿ.ಅತ್ತಾರ, ರಾಮಣ್ಣ ಬ್ಯಾಕೋಡ, ಬಿಜೆಪಿ ಗ್ರಾಮೀಣ ಮಂಡಲದ ಪ್ರಧಾನ ಕಾರ್ಯದರ್ಶಿ ಮಲ್ಲೇಶ ವಿಜಾಪರ ಇತರರು ಇದ್ದರು.
Nimma Suddi > Politics News > ಒತ್ತುವರಿ ತೆರವಿಗೆ ಪಪಂ ಆಡಳಿತ ಮುಂದಾಗಲಿ
ಒತ್ತುವರಿ ತೆರವಿಗೆ ಪಪಂ ಆಡಳಿತ ಮುಂದಾಗಲಿ
Nimma Suddi Desk.03/11/2020
posted on
Leave a reply